Posts

Showing posts from December 6, 2020

ನೆನಪುಗಳ ದಿಬ್ಬಣ

Image
ನೆನಪುಗಳಿಗೆ ನೆನಪುಗಳು ನೆನಪಾದೀತೆ? ಅರ್ಥವಿಲ್ಲದ ಪ್ರಶ್ನೆ! ಈ ಹುಚ್ಚು ಯೋಚನೆಯ ಕೊಡುಗೆ ನನ್ನಲ್ಲಿ ಉಳಿದಿರುವ ಖಾಲಿ ಹೊತ್ತಿನದ್ದು, ಕೆಲಸವಿಲ್ಲದ ಖಾಲಿ ತಲೆಯದ್ದು... ಕೈಗೆ, ಮನಸಿಗೆ, ಬುದ್ಢಿಗೆ ಕೆಲಸವಿಲ್ಲದಿದ್ದರೆ ಕುಳಿತಲ್ಲಿಯೇ ನೂರು ಯೋಚನೆಗಳು ಕಾಡುತ್ತವೆ, ಅದರಲ್ಲಿ ಶೇಕಡ ತೊಂಬತ್ತರಷ್ಟು ನೆನಪುಗಳದ್ದೇ ಸಾಮ್ರಾಜ್ಯ. ಅಲ್ಲಿಯವರೆಗೆ ಕಾಣದ ಹಾಗೆ ಅವಿತು ಕುಳಿತಿದ್ದ ಈ ನೆನಪುಗಳು ಅದೆಲ್ಲಿಂದ ಸಮಯ ಸಾಧಿಸಿಕೊಂಡು ಕಣ್ಣೆದುರು ಮೆಲ್ಲನೆ ಜಗತ್ತೊಂದನ್ನು ತೆರೆಯುತ್ತದೆಯೋ ಅದು ಅಚ್ಚರಿಯಲ್ಲವೇ!! ಅದೆಲ್ಲೋ ಓದಿದ ನೆನಪು, ಬದುಕಲ್ಲಿ ನಡೆದದ್ದೆಲ್ಲವೂ ನೆನಪಿದ್ದರೆ ಒಳ್ಳೆಯದೋ ಕೆಟ್ಟದೋ ಎಂಬುವುದಕ್ಕೆ ನೀಡಿದ್ದ ಪ್ರತ್ಯುತ್ತರ ಹೆಚ್ಚು-ಕಡಿಮೆ ಹೀಗಿತ್ತು: ನೆನಪುಗಳು ಮತ್ತೆ-ಮತ್ತೆ ಕಾಡುತ್ತವೆಂದರೆ ನಾವಿನ್ನೂ ಅದೇ ಹೊತ್ತಲ್ಲಿ ಉಳಿದುಕೊಂಡಿದ್ದೇವೆ, ಅಲ್ಲಿಂದ ಮುಂದೆ ಹೆಜ್ಜೆ ಇಡಲೇ ಇಲ್ಲ ಎಂದು!! ಸತ್ತ 'ಹೊತ್ತಿನಲ್ಲೇ' ಉಳಿದುಕೊಳ್ಳುವುದು ಸರಿಯೇನು?! ಬದುಕು ಅಲ್ಲೇ ಸಿಲುಕಿಕೊಂಡಾಗ ಮುಂದೆ ಹೆಜ್ಜೆ ಹಾಕುವುದು ಕಷ್ಟವಲ್ಲವೇ?  ಹಾಗೆಂದು ನೆನಪುಗಳೆಲ್ಲ ಅಳಿಸಿಹೋಗುತ್ತದೆಂದರೆ, ಈ ಹೊತ್ತಿನ ನಗು, ಅಳು, ನಮ್ಮವರೊಂದಿಗೆ ಕುಳಿತು ಕಳೆಯುವ ಕ್ಷಣ, ಒಮ್ಮೆ ಕಾಡಿ ಮರೆಯಾಗುವ ಅವಮಾನ, ಅಭಿಮಾನ, ಕೋಪ-ತಾಪಗಳಿಗೆ ಅರ್ಥವೇ ಉಳಿಯುವುದಿಲ್ಲ. ಈ ಮಾನವೀಯ ಸಂಬಂಧಗಳು, ಪರಿವಾರ, ಗೆಳೆತನ, ಬಾಂಧವ್ಯ, ಪ್ರೀತಿ, ಪ್ರೇಮ ಯಾವುದಕ್ಕೂ ಅಸ್ತಿತ್ವವೇ ಇಲ್