ಬೆತ್ತಲೆ ಹೆಣ್ಣು (ಬಯಲಿನ ಬೆಳಕಲ್ಲಿ ನಿಂತಾಗ...)
(ಹೆಣ್ಣಿನ ಅಂತರಂಗದ ಅರಿಕೆ) ನಿಮ್ಮೆದುರಲ್ಲೇ ಬೆತ್ತಲಾದರೂ ನಾನು ಹೊರಬೀಳಲಿಲ್ಲವಲ್ಲ ಒಂದಕ್ಷರವೂ ಬಾಯಿಂದ?! ತುಂಡು ಬಟ್ಟೆಯಾಗಿದ್ದರೇನಾಯ್ತು, ಮಾನದ ಅರಿವೆ ಹರಿದಿರಲಿಲ್ಲವಲ್ಲ?!! ತೊಂಡೆತುಟಿಗಳಿಗೆ ಬಣ್ಣ ಹಚ್ಚಿದರೇನಾಯ್ತು, ಭಾವಗಳೆಲ್ಲ ತಿಳಿಯಾಗಿ-ಬಿಳಿಯಾಗಿ ಇತ್ತಲ್ಲ?!! ಮೈಯೊಡ್ಡಿದ್ದಿಲ್ಲ ಪ್ರೇಮದ ಮತ್ತಲ್ಲಿ; ಮೈಮಾರಿದ್ದಿಲ್ಲ ಕಾಂಚಾಣದಾಸೆಯ ಕುರುಡಲ್ಲಿ; ಮೈಮಾಟ ತುಳುಕಿಸಿಲ್ಲ ಸೌಂದರ್ಯ ಮೆರೆವಲ್ಲಿ; ಆದರೂ ಬೆತ್ತಲೆಯಾಗಿಯೇ ಬಿಟ್ಟೆ ನಾ ಬಯಲಲ್ಲಿ!! ಇವರಿಬ್ಬರೆಡೆಯಲ್ಲಿ ಮತ್ತೊಬ್ಬಳಿರುವೆನು, ಅಮ್ಮನ ತೋಳತೆಕ್ಕೆಯಲಿ ಬೆಚ್ಚನೆ ಮಲಗುತ್ತಾ; ಕಂಗಳ ಹೊಳಪೊಡನೆ ಕಿಲ-ಕಿಲನೆ ನಗುತ್ತಾ; ನಲುಗಿ ಮರೆಯಾದೆ ನಾನೂ ಅವರ ಕೈಗಳಲಿ ನಲುಗುತ್ತಾ!! ಹಳೆ ಕಥೆಯಿದಲ್ಲ, ದಿನ-ದಿನದ ವ್ಯಥೆಯು; ಒಂದೆರಡು ದಿನಗಳೊಳಗೆ ದೀಪದ ಬೆಳಕಿನಲಿ, ಸುಟ್ಟು ಮರೆಯಾಗುವಂಥವು!! ಹತ್ತಾರು ಬಾಯಿಗಳಿಗೆ ಕರೆಯಾಗುವಂಥವು!! ಈಗಲೂ ಬೆತ್ತಲಾಗಿ ನಿಂತಿರುವೆನು ಬಯಲಲಿ, ಸುಮ್ಮನಾಗದಿರಿ ನೀವ್ಯಾರು: ಬಟ್ಟೆ ಹೊಲಿಯುವವರೆಗೆ; ಅಥವಾ ನೀವೂ ಬೆತ್ತಲಾಗುವವರೆಗೆ... ಸುಮ್ಮನಾಗದಿರಿ ನೀವ್ಯಾರೂ... -ಪಲ್ಲವಿ ಕಬ್ಬಿನಹಿತ್ಲು WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM 👉 👉 👉 👉 SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VI...