Posts

Showing posts from November 1, 2020

ಮುಂಜಾವು

Image
ಎಳೆ ಬಿಸಿಲು ಮೆಲ್ಲಗೆ ಹಾಸುತ ಹಸಿರ ಸಿರಿಯನಪ್ಪಿಕೊಳ್ಳಲು ಕತ್ತಲ ಕೂಪದೊಳಗಿಂದ ವನರಾಣಿಯು ರವಿಯೆಡೆ ಕೈಚಾಚಿ ಹೊರಬರುತಿಹಳು ... ಮುಂಜಾನೆ ಅ ದೆ ಲ್ಲಿ ಅವಿತು ಕುಳಿ ತಿ ತ್ತೆಂದು ನೋಡಲು ಜೀವ ಸಂಕುಲವು ಎಚ್ಚೆದ್ದು ಹುಡುಕಾಡುವವು; ಚಿಲಿಪಿಲಿಗುಟ್ಟುವ ಹಕ್ಕಿಗಳು ಆಗಸದಲಿ, ಹೂಂಕರಿಸುವ ವ್ಯಾಘ್ರಗಳು ಕಾನನದೊಳಗೆ,  ಈಜಾಡುವ ಮೀನುಗಳು ನೀರಿನೊಳಗೆ, ಬೆಳಕನು ಅರಸುತ ಅಚ್ಚರಿಪಡುವವು... ಕಾಣುತ ವಿಸ್ಮಿತಗೊ ಳ್ಳು ವವು;   ಕತ್ತಲು ಬೆಳಕಿನ ಕಣ್ಣುಮುಚ್ಚಾಲೆಯಾಟವ  ಸುಳಿಯುವ ಗಾಳಿ ಮಂಜನು ಕದ್ದೊಯುವುದ ನು ನೋಡುವವು:  ಮೆಲ್ಲನೆ ಹೂಗಳು ಪರಿಮಳ ಚೆಲ್ಲುವುದನು  ಸವಿಗನಸುಗಳು ಕರಗಿ ಮಾಯವಾಗವುದನು... ಮುಂಜಾನೆ ಓಡಿ ಬೆಳ್ಳನೆ ಬೆಳಗಾಗಲು ಮುಂಜಾನೆ ಅ ದೆ ಲ್ಲಿ ಅವಿತು ಕುಳಿ ತಿ ತ್ತೆಂದು  ತಿಳಿಯದೆ ಜೀವಗಳು ಸೋತು ಮತ್ತೆ ಮರಳುವವು; ಮುಂಜಾವು ನಿಗೂಢತೆಯನು ಬಚ್ಚಿಟ್ಟು ಪುನಃ ನಗುವುದು... - ಪಲ್ಲವಿ ಕಬ್ಬಿನಹಿತ್ಲು 👉 👉 👉 👉 SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE.. -KADUGUSUMA ( ವಿಶೇಷ ಪ್ರಕಟಣೆ : ಇದೇ ಪ್ರಯತ್ನದಲ್ಲಿ ಇನ್ನೊಂದು ಪ್ರಯತ್ನಕ್ಕೆ ಕೈ ಹಾಕ...

ಮುಖವಾಡಗಳು

Image
ಮುಖ ಮರೆಸಿ ಓಡಾಡುವುದು ತಪ್ಪಂತೆ; ಮುಖವಾಡದೊಳಗೇ ಬದುಕುವವರು ನಾವು!! ಮುಖವಾಡಗಳು ಒಂದಾಗಿ-ಎರಡಾಗಿ-ನೂರಾಗಿ, ನಾನು ನೀನಾಗಿ, ನೀನು ಏನೋ ಆಗಿ! ನಾವಲ್ಲದ ‘ನಮ್ಮನ್ನು’ ತೋರಿಸುವ ಹಂಬಲದಲ್ಲಿ, ಮುಖವಾಡದೊಳಗೇ ಬದುಕುವವರು ನಾವು!! ಕಲೆಯಿರುವ ಮುಖಗಳಿಗೆ, ರಂಗಿನ ಹೊಳಪಿನ ಮುಖವಾಡ!! ಕಪ್ಪು ಮನಸ್ಸಿನ ಧುರೀಣರಿಗೆ, ಶ್ವೇತ ವಸ್ತ್ರದ ಮುಖವಾಡ!! ಕಾಡ ಕಡಿದು ಕಟ್ಟಿದ ಮನೆಗಳ ಗೋಡೆಗಳಿಗೆ, ಹಸಿರು ಹುಲ್ಲಿನ, ಹೂವಿನ ಮುಖವಾಡ!! ಕೊಳೆತು ನಾರುವ ಮನಸುಗಳಿಗೆ, ಸುಗಂಧಿತ ಲೇಪನದ ಸುವಾಸನೆಯ ಮುಖವಾಡ!! ತನ್ನಲ್ಲಿಲ್ಲದ ಗುಣಗಳಿಗೆ, ಲಕ್ಷ್ಮೀಬಲದ ಮುಖವಾಡ!! ಅತ್ತು ಸೊರಗಿದ ಜೀವಗಳಿಗೆ, ನಗುಮೊಗದ ನಲಿಕೆಯ ಮುಖವಾಡ!! ಚಿತೆಯ ಸಾಲಿನಲ್ಲಿ ನಿಂತಿದ್ದರೂ, ಯೌವನದ ಭ್ರಮೆಯ ಮುಖವಾಡ!! ಅಸಭ್ಯತೆಯೇ ಮೈವೆತ್ತಿ ನಿಂತಿದ್ದವರಿಗೂ, ಸಭ್ಯತೆಯ ಸುಂದರ ಮುಖವಾಡ!! ಭೇಟಿಯಾದ ಪ್ರತಿಯೊಬ್ಬರಿಗೊಂದೊಂದರಂತೆ, ನೂರಾರು ಮುಖವಾಡಗಳಲ್ಲೇ ಬದುಕು; “ನಾವಲ್ಲದ ‘ನಮ್ಮನ್ನು’ ತೋರಿಸುವುದಕ್ಕಾಗಿ” ಹಮ್ಮು-ಬಿಮ್ಮಿನ ತೋರಿಕೆಯ ಮುಖವಾಡ; ಕೃತ್ರಿಮತೆಯ ಮಡಿಲಲ್ಲಿ ಸಹಜತೆಯ ಮುಖವಾಡ; ಕ್ರೂರತೆಯ ಮರೆಮಾಚುವ ಸ್ಪಂದನೆಯ ಮುಖವಾಡ; ಸ್ವಾರ್ಥದ ಪರದೆಯ ಮುಂದೆ ನಿಸ್ವಾರ್ಥದ ಮುಖವಾಡ; ಶೂನ್ಯವಾಗಿದ್ದರೂ ಪರಿಪೂರ್ಣತೆಯ ಮುಖವಾಡ!! ಆದರೂ, ಮುಖ ಮರೆಸಿ ಓಡಾಡುವುದು ತಪ್ಪಂತೆ!! ಮುಖವಾಡದೊಳಗೇ ಬದುಕುತ್ತಿರುವವರೊಳಗಿನ, ಮತ್ತೊಂದು ಮುಖವಾಡದ ಮಾತು!! -ಪಲ್ಲವಿ ಕಬ್ಬಿನಹಿತ್ಲು WE WILL POST OUR CONTEN...

ನಿಶೆಯ ನಶೆಯೂ ಚೆನ್ನ...

Image
  ಕತ್ತಲಲ್ಲಿ ಕರಗಿ ಮರೆಯಾಗುವ ಬಯಕೆ ಕಾಡದ್ದು ಯಾರಿಗೆ?! ಪುಟಾಣಿಗಳು ಮನೆಕೆಲಸ ಮಾಡದಿದ್ದಾಗ, ಪ್ರೇಮಿಗಳು ಜಗದ ಕಂಗಳಿಂದ ಮರೆಯಾಗ ಬಯಸಿದಾಗ, ಪ್ರೌಢರಿಗೆ ಜೀವನ ಸೋಲಿನ ರುಚಿಯುಣಿಸಿದಾಗ, ಜೀವನದ ಸಂಧ್ಯಾ ಕಾಲದಲ್ಲಿರುವವರೂ ಕತ್ತಲಾಗುವುದಕ್ಕೆ, ಆ ಕತ್ತಲಲ್ಲಿ ಸದ್ದಿಲ್ಲದೆ ಕಳೆದುಹೋಗುವುದಕ್ಕೆ ಕಾಯುವುದಿಲ್ಲವೆ?! ಹಿರಿಯರು-ಕಿರಿಯರೆನ್ನುವ ಭೇದವನ್ನು ಮುರಿದು ಎಲ್ಲರನ್ನೂ ಒಂದಲ್ಲ ಒಂದು ಸಲ ಅಪ್ಪಿಕೊಂಡ ಭಾವವಿದು.  ಹಳೆತೆಲ್ಲವನ್ನು ಮರೆತು ಹೊಸತು ಶುರುವಾಗಲು ನಿಶೆಯಾಗಮನ ಬೇಡವೇ? ನೇಸರನುದಯಕ್ಕೆ ಕರಿ ಹಾಸಿನ ಕಂಬಳಿಯಿಲ್ಲದಿದ್ದರೆ ಅರ್ಥವಿದ್ದೀತೇ? ಜ್ಞಾನದೀಪದ ಬೆಳಕು ಪಸರಿಸಲು ಅಜ್ಞಾನದ ಕತ್ತಲಾವರಿಸಬೇಡವೇ? ಹಳೆದೇಹವನ್ನು ಕಳಚಿಟ್ಟು ಹೊಸ ದೇಹವೆಂಬ ಅಂಗಿ ಧರಿಸಲು ಬಾಳಸಂಜೆ ಕತ್ತಲೆಡೆಗೆ ಸಾಗುವುದಿಲ್ಲವೇ? ದಿನವಿಡೀ ದುಡಿದು ಕಂಗಾಲಾಗುವ ಜೀವಗಳಿಗೆ ರಾತ್ರಿ, ವಿಶ್ರಾಂತಿಯ ಆಮಂತ್ರಣವನ್ನು ಹೊತ್ತು ತಂದರೆ, ಕೆಲವೆಡೆ ಯುವ ಮನಸುಗಳಿಗೆ ಇದೇ ಹೊತ್ತಿಗೆ ತಮ್ಮ ದಿನಚರಿಯ ಆರಂಭವಾಗುತ್ತದೆ. ಪ್ರೇಮಿಗಳು ಚಂದ್ರನ ಬಿಂಬದಲ್ಲಿ ತನ್ನ ಪ್ರೇಮದ ಸಂದೇಶವನ್ನು ಸಂಗಾತಿಗೆ ತಲುಪಿಸುವ ಕನಸು ಕಾಣುತ್ತಾರೆ. ಆತ್ಮೀಯರನ್ನು ಅಗಲಿದವರು ತಾರೆಗಳೆಡೆಯಲ್ಲಿ ಅವರನ್ನು ಅರಸತೊಡಗುತ್ತಾರೆ. ರಾತ್ರಿಯ ಏಕಾಂತದಲ್ಲಿ ನೆನಪುಗಳು ಒಮ್ಮೊಮ್ಮೆ ತಂಗಾಳಿಯಾಗಿ, ಇನ್ನು ಕೆಲವೊಮ್ಮೆ ಬಿರುಗಾಳಿಯಾಗಿ ಬೀಸಿ ಒಂದರೆ ಘಳಿಗೆ ನಮ್ಮನ್ನು ತನ್ನೊಳಗೆ ಸೆಳೆದುಕೊಳ್ಳುತ್ತವೆ....

ಭಾಷೆಗೊಂದು ದಿನ

Image
  ಇಂದು ನವೆಂಬರ್ 1, ಕನ್ನಡ ಭಾಷೆಗೆಂದು ಮೀಸಲಾದ ದಿವಸ. ಭಾಷೆಯ ಆಧಾರದ ಮೇಲೆ ರಾಜ್ಯಗಳು ವಿಂಗಡಣೆಯಾದ ನಂತರ ನಾವು ಕನ್ನಡಿಗರು ಈ ದಿನವನ್ನು ಆಚರಿಸಿಕೊಂಡು ಬಂದಿದ್ದೇವೆ. ಆದರೆ ಇದು ಕೇವಲ ಆಚರಣೆಯಾಗಿಯೇ ಉಳಿದದ್ದು ವಿಪರ್ಯಾಸ. ಅಲ್ಲದೆ ಇದೇ ಮಾತನ್ನು ಬಂಡವಾಳವಾಗಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವವರಿಗೂ ಕಮ್ಮಿಯಿಲ್ಲ. ಕನ್ನಡದ ವಿಶಿಷ್ಟತೆಯೆಂದರೆ, ಅದರ ವಿಶಾಲ, ಸಮೃದ್ಧವಾದ ಸಾಹಿತ್ಯ ಹಾಗೂ ಅದರ ಸುಂದರ ದುಂಡಾದ ಅಕ್ಷರಗಳೆಂಬುದು ನನ್ನ ಭಾವನೆ. ಕನ್ನಡ ಅಕ್ಷರಗಳನ್ನು ‘ಲಿಪಿಗಳ ರಾಣಿ’ ಎಂದು ಗುರುತಿಸಲಾಗುತ್ತದೆ. ಅಲ್ಲದೆ ಭಾಷೆಯ ಸೌಂದರ್ಯವನ್ನು ಸುಂದರವಾಗಿ ವರ್ಣಿಸಿರುವ ಸಾಲುಗಳಿಗೂ ಕಡಿಮೆಯೇನಿಲ್ಲ.  ( ಈ ಚಿತ್ರವನ್ನು ಫೇಸ್‍ಬುಕ್‍ನ  Alva's DOLLU Kunitha  ಪುಟದಿಂದ ಬಳಸಿಕೊಂಡಿದ್ದೇವೆ. ಡೊಳ್ಳು ಕುಣಿತದ ಸುಂದರವಾದ ಇನ್ನಷ್ಟು ಚಿತ್ರಗಳನ್ನು ಈ ಲಿಂಕ್ ಬಳಸಿಕೊಂಡು ನೋಡಬಹುದು: Alva's DOLLU Kunitha ) ಭಾಷೆಯು ಸಂಸ್ಕೃತಿಯ ಅವಿಭಾಜ್ಯ ಅಂಗ. ಭಾಷೆ ಅಳಿದರೆ ಅದರೊಂದಿಗೆ ಸಂಸ್ಕೃತಿಯೂ ಹೇಳ ಹೆಸರಿಲ್ಲದಂತೆ ಮರೆಯಾಗಬಹುದು. ಈಗ ಆಂಗ್ಲ ಭಾಷೆ ಅಥವಾ ಹಿಂದಿ ಭಾಷೆ ಹೇರಿಕೆಯೆಂದು ಬೊಬ್ಬಿಡುವ ಬದಲು ಕನ್ನಡವನ್ನು ತಮ್ಮ ದಿನ ನಿತ್ಯದ ಬದುಕಿನಲ್ಲಿ ಬಳಸಿದರೆ ಸಾಕು ಭಾಷೆಯನ್ನು ಉಳಿಸಲು. ಭಾಷೆಯ ಬಳಕೆಯಿಂದ ಮಾತ್ರ ಅದನ್ನು ಉಳಿಸಲು ಸಾಧ್ಯ. ಹಾಗೆಂದು ಬೇರಾವುದೇ ಭಾಷೆಯನ್ನು ಕಲಿಯಬಾರದು ಎಂದು ನಾನು ಹೇಳುತ್ತಿಲ್ಲ,...