Posts

Showing posts with the label Kannada Short Story

ನಾನೂ, ನೀವೂ ಹೆಸರಿಲ್ಲದ ಭಾವವೂ...

Image
ಜನುಮದ ಗೆಳೆತನಕ್ಕೆ ಒಪ್ಪಿಗೆ ಹಾಕಿ ಅದೆಷ್ಟು ವರ್ಷಗಳು ಸಂದವು?! ನನ್ನ ಮುಖದಲ್ಲಿ ನೆರಿಗೆಗಳಿರದ ನಿಮ್ಮ ಮೊಗದಲ್ಲಿದ್ದ ಮೀಸೆ ಕಪ್ಪಾಗಿದ್ದ ಸಮಯವಲ್ಲವೆ ಅದು! ಹೆದರಿಕೆಯ ಮುದ್ದೆಯಾದ ನನ್ನನ್ನು ನೀವು ಅಂದಿನ 'ನಿಮ್ಮ' ಇಂದಿನ 'ನಮ್ಮ' ಮನೆಗೆ ನನ್ನ ತಂದುಕೊಂಡದ್ದು... ಈಗ ಕೂದಲು ನರೆತಿದೆ, ಕಣ್ಣು ಮಂಜಾಗಿದೆ... ಆದರೂ ಜೊತೆಯಾಗಿಯೇ ಇರುವೆವಲ್ಲ!!  ಪ್ರೀತಿ-ಪ್ರೇಮ ಎಂದರೆ ಇದುವೆಯೇ? ನಾನಾಗಲೀ-ನೀವಾಗಲೀ ಭಾವನೆಗಳಿಗೆ ಹೆಸರಿಟ್ಟಿದ್ದಿಲ್ಲ, ಪ್ರೀತಿಯೋ, ಕೋಪವೋ, ಮಮತೆಯೋ, ರೋಷವೋ ಎಲ್ಲವನ್ನೂ ಸ್ವಭಾವ ಎಂದು ಒಪ್ಪಿಕೊಂಡೆವು.  ಮದುವೆಯ ಬಂಧ ಬಂಧನವಾಗಿದ್ದ ಕಾಲದಲ್ಲೂ ನನಗೆ ಹಾಗನಿಸಲಿಲ್ಲ. ನಿಮ್ಮೆದೆಗೆ ಒರಗಿಕೊಂಡು ಕನಸುಗಳ ಹೆಣೆದದ್ದೂ ಇಲ್ಲ, ನಿಮ್ಮ ಕೋಪ ತಣಿಸಲು ನಾನು ನಿಮ್ಮಿಷ್ಟದ ಅಡುಗೆ ಮಾಡಿ ತಂದಿಟ್ಟದ್ದೂ ಇಲ್ಲ... ಈ ಇಲ್ಲಗಳ ನಡುವೆ ಇದ್ದದ್ದೇನು ಹಾಗಾದರೆ?! ಅತ್ತೆ-ಮಾವನ ಇಳಿ ವಯಸ್ಸಿನ ಜವಾಬ್ದಾರಿಗಳೇ? ಮಕ್ಕಳ ಸಾಲು-ಸಾಲು ಕರ್ತವ್ಯದ ಕರೆಗಳೇ? ಮನೆ ಖರ್ಚುಗಳ ನಿಭಾಯಿಸಬೇಕಾದ ಹೊಣೆಗಾರಿಕೆಯೇ? ಮನೆಗೆಲಸದ ನಡುವಿನಲ್ಲೂ ನೋವು- ನಲಿವುಗಳಿಗೆ ಹೆಗಲುಗೊಡಲೇ ಬೇಕಾದ ಅನಿವಾರ್ಯತೆಯೇ? ಹೌದು ಎಂದು ಬದುಕು ಒಪ್ಪಿಕೊಳ್ಳದು... ಈ ಜವಾಬ್ದಾರಿಗಳು ಒಂದೊಂದಾಗಿ ಮುಗಿದರೂ ನಾವಿಬ್ಬರೂ ಜೊತೆಯಾಗಿದ್ದೇವೆ... ಇಲ್ಲ ಅನ್ನಲೂ ಸಾಧ್ಯವಿಲ್ಲ, ಇವುಗಳನ್ನು ಒಡಗೂಡಿ ಎದುರಿಸಿದವರು ನಾವು... ಇವೆಲ್ಲವನ್ನೂ ಮೀರಿದ ಭಾವವೊಂದು ನಮ್ಮನ್ನು ಕ...

ಕಥೆಗಳಲ್ಲಿನ ಹುಡುಗಿ

Image
ಅವನ ಪುಟ್ಟ-ಅಚ್ಚುಕಟ್ಟಾದ ಜಗತ್ತಲ್ಲಿ ಅವನು ಕಟ್ಟಿ ಹಾಕಿಕೊಂಡದ್ದು, ನೂರಾರು ಪುಸ್ತಕಗಳು, ಮನೆಯ ಅಂಗಳದಲ್ಲಿರುವ ಹೂದೋಟ ಮತ್ತು ಹಬೆಯಾಡುವ ಬಿಸಿ ಕಾಫಿ... ಎರಡು ವರ್ಷಗಳ ಹಿಂದೆ ತಾಯಿಯನ್ನು ಕಳೆದುಕೊಂಡ ನಂತರ ಅನಾಥನಾದೆ ಎಂಬ ಭಾವದೊಡನೆ ಹಳ್ಳಿಯ ನಂಟನ್ನು ಕಳೆದುಕೊಂಡು ಬೆಂಗಳೂರಿಗೆ ಕಾಲಿಟ್ಟವನು ಕಟ್ಟಿಕೊಂಡ ಜಗತ್ತಿದು... ಎರಡು ವರ್ಷಗಳಲ್ಲಿ ಆಫೀಸು, ಲೈಬ್ರರಿ, ಮಾರ್ಕೆಟ್ಟು ಇವನ್ನು ಬಿಟ್ಟು ಬೇರೆ ಎಲ್ಲಿಗೂ ಇವನ ಗಾಳಿ ಸುಳಿದದ್ದಿಲ್ಲ... ಅವನಾಯಿತು, ಅವನ ಕೆಲಸವಾಯಿತು ಎಂದಿದ್ದವನು ಹೊತ್ತು ಸಿಕ್ಕಾಗಲೆಲ್ಲಾ ಕಲ್ಪನೆಗಳಲ್ಲಿ ತೇಲಾಡಿ; ಅವುಗಳನ್ನು ಕಥೆಯಾಗಿ ಹೆಣೆಯುತ್ತಿದ್ದ, ಆ ಕಥೆಗಳು ಪುಸ್ತಕಗಳಿಗೆ ಇಳಿಯುತ್ತಿತ್ತಾದರೂ, ಯಾರ ಕೈಗೂ ಸಿಗದಂತೆ ಜೋಪಾನವಾಗಿ ಇಡುವುದೂ ಸಹಾ ಅವನ ಬದುಕಿನ ಭಾಗವಾಗಿತ್ತು!! ಆದರೆ ಇಂದೇಕೋ ಅವನಿಗೆ ಅಂಗಳದಲ್ಲಿರುವ ಸೂಜಿ ಮಲ್ಲಿಗೆಯ ಕಂಪು ಹೆಚ್ಚಾಗಿದೆ ಎನ್ನಿಸುತ್ತಿತ್ತು, ಗುಲಾಬಿಯೂ ಕೊಂಚ ಜಾಸ್ತಿಯೇ ನಗೆ ಚೆಲ್ಲುತ್ತಿದೆ ಎಂದೆನಿಸಿದಾಗ ಹುಚ್ಚು ಯೋಚನೆಯನ್ನು ಕೊಡವಿಕೊಳ್ಳುತ್ತಾ ಕಾಫಿ ಕಪ್ ಗಾಗಿ ಒಳನಡೆದ. ಹೊರಬರುವಾಗ ಅವನು ಕಂಡದ್ದು ಇಪ್ಪತ್ತರ ಆಸುಪಾಸಿನ ಒಬ್ಬ  ತರುಣಿಯನ್ನು! ತಿರುಗಿ ನೋಡುವಷ್ಟು ಸುಂದರಿಯಲ್ಲದಿದ್ದರೂ ತಕ್ಕ ಮಟ್ಟಿಗೆ ಲಕ್ಷಣವಾಗಿದ್ದಳು. ಐದುವರೆ ಅಡಿ ಎತ್ತರದ, ಗುಂಗುರು ಕೂದಲಿನ, ತುಸುಕಪ್ಪಿನ ಹುಡುಗಿ. ನೀಳ ರೆಪ್ಪೆಯ ಬೆಕ್ಕಿನ ಕಣ್ಣು ಆಕರ್ಷಕವಾಗಿತ್ತು.. ಅವನಿಗನಿಸಿತು ತನ್ನ ಕ...

ನೀನೊಂದು ಮಾತು ಹೇಳಿದ್ದಿದ್ರೆ?!

Image
  ತಾಯಿಗೆ ಮಗುವಿನ ಮನಸ್ಸನ್ನು ಅರಿಯುವ ಶಕ್ತಿಯನ್ನು ಪ್ರಕೃತಿಯೇ ಕೊಡುತ್ತಂತೆ. ಆದರೆ ಮಗಳೇ, ನಿನ್ನ ತಂದೆಯಾಗಿಯೂ ತಾಯಿಯ ಪ್ರೀತಿ, ಅಕ್ಕರೆಯನ್ನು ಕೊಡುವ ಸಾಮರ್ಥ್ಯವನ್ನು ಕಲಿಸಿದ್ದು ನಿನ್ನ ಅಮ್ಮನಿಲ್ಲದ ‘ಜೀವನ’... ನಿನ್ನ ಅಮ್ಮ ಅಂದು ನಿನಗೆ ಜನ್ಮ ಕೊಟ್ಟು, ತನ್ನ ಕೊನೆಯುಸಿರನೆಳೆದಳು.  ಅಂದಿನಿಂದ ಕಣ್ಣರೆಪ್ಪೆ ಕಣ್ಣನ್ನು ಕಾದಂತೆ, ನಿನ್ನನ್ನು ಜೋಪಾನ ಮಾಡಿದೆ. ನನಗಿದ್ದ ಒಂದೇ ಒಂದು ಸಂಪತ್ತು  ನೀನು ಎಂದು, ನಿನಗೆ ಐಶ್ವರ್ಯಾ ಎಂದು ಹೆಸರಿಟ್ಟೆ. ನೀನು ಕೇಳಿದ್ದಕ್ಕೆಲ್ಲ ಒಲ್ಲೆ ಎನ್ನದೆ, ತಂದುಕೊಟ್ಟೆ. ಹಗಲು-ರಾತ್ರಿ ದುಡಿದು ನಿನಗೆ ಪ್ರೀತಿಯ ಧಾರೆ ಎರೆದೆ. ಅಂದು ಹೈಸ್ಕೂಲಿನಲ್ಲಿ ನೀನು ಗೆಳತಿಯರೊಡನೆ ಶಾಲೆ ತಪ್ಪಿಸಿ ಸಿನೆಮಾ ಹೋಗಿದ್ದು! ಅಂದು ಅಲ್ಲಿದ್ದ ಕೆಲವರು ನಿಮ್ಮನ್ನು ನೋಡಿ ನನ್ನಲ್ಲಿ, ಶಿಕ್ಷಕರಲ್ಲಿ ದೂರು ಕೊಟ್ಟಿದ್ದು, ನಿನಗೆ ನೆನಪಿರಬಹುದು. ಆಗ ಶಿಕ್ಷಕರು ನಿನ್ನನ್ನು ಗದರುತ್ತಿದ್ದಾಗ ಎಲ್ಲ ತಪ್ಪನ್ನು ನನ್ನ ಮೇಲೆ ಹೊತ್ತು ನಿನ್ನನ್ನು ಬಚಾವ್ ಮಾಡಿದ್ದೆ, ಅಲ್ವಾ?! ನಿನ್ನ ಮೇಲೆ ನೂರಾರು ಕನಸುಗಳನ್ನು ಇಟ್ಕೊಂಡಿದ್ದೆ. ಅದರಲ್ಲೂ ಎಸ್ಸೆಸೆಲ್ಸಿಲಿ, ಒಳ್ಳೆ ಮಾರ್ಕ್ಸ್  ತೆಗಿತಾಳೆ  ಅಂದ್ಕೊಂಡ  ಮಹದಾಶೆ ಪೂರೈಸ್ಲೇ ಇಲ್ಲ. ಒಂದು ವರ್ಷ ಮನೇಲೇ ಕೂತ್ಕೊಂಡು ಬಿಟ್ಯಲ್ಲೇ ನೀನು! ಆದ್ರೂ ಏನೂ ಹೇಳ್ಲಿಲ್ಲ ನಾನು, ಯಾಕಂದ್ರೆ, ಹೇಳಿದ್ನಲ್ಲ ಅಮ್ಮನ ಹೃದಯ ನನ್ನಲ್ಲಿತ್ತು ಅಂತ. ಮಗಳೇ, ಪುಟ್ಟ...

ದರ್ಪಣ

Image
  ಅರೆ! ಅವಳೇ ಇವಳಾ? ಎಂದು ನನ್ನ ಮನಸ್ಸು ಅಚ್ಚರಿಗೊಂಡಿತು, ಮತ್ತೊಮ್ಮೆ ತಿರುಗಿದೆ. ಗೊಂದಲ ನಿವಾರಣೆಗೆ. ಹೌದು, ಅವಳೇ... ಅವಳು ನನ್ನ ಬಾಲ್ಯದ ಗೆಳತಿ ದರ್ಪಣ. ಇಂದು ಕಂಕುಳಲ್ಲೊಂದು ಕೂಸು, ಕೈಯಲ್ಲಿ ತರಕಾರಿಯ ಕಟ್ಟನ್ನು ಹಿಡಿದು ವಿವಾಹಿತ ಮಹಿಳೆಯ ಗಾಂಭೀರ್ಯದೊಂದಿಗೆ ನನ್ನೆದುರಿನಿಂದಲೇ ಸುಳಿದು ಮರೆಯಾದಳು. ಅವಳ ಜೊತೆಗೆ ನನ್ನ ಮನಸ್ಸು ಕೂಡ ಮರೆಯಾಯಿತು. ಅವಳ ಗುರಿ ಯಾವುದೆಂದು ತಿಳಿಯದಿದ್ದರೂ ನನ್ನ ಮನಸ್ಸು ಹೆಜ್ಜೆಯಿಟ್ಟಿದ್ದು ಬಾಲ್ಯದ ಕಡೆಗೆ...                         *                              *                              *                              *                              * ದಪ್ಪು! ಅವಳೇ ದರ್ಪಣ, ಅದಾಗ ಎಳೇ ಹುಡುಗಿ, ಗುಂಡು-ಗುಂಡಾಗಿ ತನ್ನ ಕರ್ರಗಿನ...

ಕೊನೆಯ ಅನುಮತಿ...

Image
  ಅ ವನು ಇಷ್ಟವಾಗಿಯೇ ಆಕೆ ಆತನಿಗೆ ತನ್ನ ತನು-ಮನವನ್ನು ಆವರಿಸಿಕೊಳ್ಳಲು ಅನುಮತಿಸಿದ್ದಳು. ಹಿಂದೆ-ಮುಂದೆ ಯೋಚಿಸದೆ ತೆಗೆದುಕೊಂಡ ತೀರ್ಮಾನವಂತು ಅಲ್ಲ, ಹೀಗಿರುವಾಗ ತನ್ನಿಷ್ಟದಿಂದಾದ ಕಷ್ಟ-ನಷ್ಟದ ಲೆಕ್ಕಾಚಾರ ಹಾಕುವಾಗ ಸಂಕಟವಾಗದಿರುತ್ತದೆಯೇ?! ಇದೀಗ ಎಂಟು ವರ್ಷಗಳ ಸಂಸಾರದ ಅನಂತರ ನನ್ನ ಬಾಳಿಗೆ ದಳ್ಳುರಿಯಾದವಳು ನೀನು ಎಂದ ತನ್ನ ಹೃದಯದೊಡೆಯನ ಮಾತಿಗೆ ಏನೆಂದಾಳು?! ಅವನ ಮಾತಿಗೆ ಕಟ್ಟುಬಿದ್ದು ಎಂಟು ವರ್ಷಗಳ ಹಿಂದೆ, ತನ್ನ ತಂದೆ-ತಾಯಿ, ಬಂಧು-ಬಳಗ ಎಲ್ಲವನ್ನೂ, ಎಲ್ಲರನ್ನೂ ತೊರೆದು ಬಂದ ತಾನು, ತನ್ನುಸಿರಲ್ಲಿ ಉಸಿರಾಗಿ ಒಳಗಿಳಿವವನ ಬದುಕನ್ನು ಬರಡಾಗಿಸಿದ್ದು ತಾನೆಂಬ ಒಂದು ಮಾತು ಅವಳ ಅಸ್ತಿತ್ವದ ಇರುವನ್ನೇ ಗೆದ್ದಲಿನಂತೆ ಇಂಚಿಂಚಾಗಿ ಕೊರೆದು ಟೊಳ್ಳಾಗಿಸಿತು, ಅದೂ ಸೆಕೆಂಡುಗಳಲ್ಲಿ! ಖಾಲಿ ಕೈಯ ಯೋಚನೆಯಿಲ್ಲದ ಹಾಗೆ ಗಾಣದೆತ್ತಿನ ಹಾಗೆ ಮನೆಯಲ್ಲಿ, ಮನೆಗಾಗಿ ದುಡಿದವಳನ್ನು ಒಂದು ದಿನ  ಬಡತನದ ಭಾರ ಕುಗ್ಗಿಸಿರಲಿಲ್ಲ; ಆದರೆ ನಾಲಗೆಯ ಅಲಗಿನ ಹರಿತ ಆತ್ಮಸ್ಥೈರ್ಯವನ್ನೇ ಹೋಳಾಗಿಸಿತು... ಜೋಡಿಸಲಾದೀತೆ ಅವುಗಳನ್ನು?!  ತನ್ನ ಮನದಾಲಯದ ದೇವತೆಯಾಗಿದ್ದ ಜೀವ ಗರ್ಭಗುಡಿಯ ಹೊಸ್ತಿಲನ್ನು ಅಸಹ್ಯವೆಂಬಂತೆ ತಿರಸ್ಕರಿಸಿ ಇನ್ನೊಂದು ಬಾಳ ಬೆಳಕಾಗುವ ಆಸೆ ಹೊತ್ತು ನಿಂತಿರುವನು... ಆಕೆಯ ಬದುಕಿಗೆ ಹೆಜ್ಜೆಯಿಡುವಾಗ ಅನುಮತಿ ಕೇಳಿದ್ದಾತನಿಗೆ, ಇಂದು ಹೇಳಿ ಹೋಗುವ ಸೌಜನ್ಯತೆಯೂ ಇಲ್ಲವಾದಾಗ ಹೇಗೆ ನರಳಿರಬಹುದು ಆಕೆ?! ...