ತಪ್ಪು-ಒಪ್ಪುಗಳ ಕಪ್ಪು ಹಂಚುವ ಮುನ್ನ...
"ನೀನು ಗುಡ್ ಗರ್ಲ್ ಅಲ್ವಾ ಪುಟ್ಟಿ, ಒಳ್ಳೆ ಮಾರ್ಕ್ಸ್ ತಗೋಬೇಕು" "ಏಯ್ ಪುಟ್ಟ, ಯಾಕೋ ಹುಡುಗಿಯರ ತರ ಅಳ್ತಾ ಇದ್ದೀಯ? ಹುಡುಗರು ಹಾಗೆಲ್ಲ ಅಳೋದಿಲ್ಲ" ಹೀಗೆ ಇದು ಸರಿ, ಇದು ತಪ್ಪು ಎಂದು ಎಲ್ಲಾ ಕೆಲಸಗಳನ್ನು ವಿಶ್ಲೇಷಿಸಿ ವಿಂಗಡಿಸುವ ಮನೋಧರ್ಮ ಎಳವೆಯೆಂದಲೇ ನಮ್ಮೊಳಗೆ ಬೆಳೆಯುತ್ತದೆ. ಈ ಮನೋಧರ್ಮ ನಾವಿರುವಷ್ಟು ದಿನ ನಮ್ಮ ಜೊತೆಗೇ ಬದುಕುತ್ತದೆ. ಎಲ್ಲಾ ಯೋಚನೆಗಳನ್ನು ಕಾರ್ಯರೂಪಕ್ಕೆ ತರುವ ಮುನ್ನ ಅದು ನ್ಯಾಯಯುತವಾಗಿದ್ದು, 'ಸರಿ' ಎಂಬ ಅರ್ಹತೆಯನ್ನು ಪಡೆದುಕೊಳ್ಳಲೇಬೇಕು. ಹಾಗಿಲ್ಲದಿದ್ದರೆ ಆ ಯೋಚನೆ ಜನರೆದುರು ಬಿತ್ತರಗೊಳ್ಳಲು ನಾಲಯಕ್ಕು ಎಂಬುದು ನಮ್ಮ ಸಹಜ ಮನಸ್ಥಿತಿ. ಅಪ್ಪಿ-ತಪ್ಪಿ ಬುದ್ಧಿ ತಪ್ಪು ಎಂದುಕೊಂಡ ಕೆಲಸಕ್ಕೆ ಕೈ ಹಾಕಿದರೆ, ಅಪರಾಧಿ ಭಾವದ ಕೊರಗು ಕಾಡಲು ಶುರುವಾಗುತ್ತದೆ. ಈ ಯೋಚನೆಗೆ ಹೊರತಾದವರು ಯಾರಿಲ್ಲವಾದರೂ ತಪ್ಪುಗಳು, ಅಪರಾಧಗಳು 'ಇಲ್ಲ'ದಾಗುವುದಿಲ್ಲ ಎಂಬುವುದು ವಿಶಿಷ್ಟವಾದ ವಿಚಿತ್ರ ಸತ್ಯ... ನೋಡಿದ್ದು, ಕೇಳಿದ್ದು ಎಲ್ಲವನ್ನೂ ನಮ್ಮೊಳಗೇ ಇರುವ ತಕ್ಕಡಿಯಲ್ಲಿ ತೂಗಿ ಈ ಎರಡರಲ್ಲಿ ಒಂದು ಪಟ್ಟಿಗೆ ಸೇರಿಸುತ್ತೇವೆ. ಹೀಗೆ ಮೊದಲೇ ನಮ್ಮೊಳಗೆ ತುಂಬಿಕೊಂಡಿರುವ ಮನಸ್ಥಿತಿಯಿಂದಾಗಿಯೇ ಹಲವಾರು ಬಾರಿ, ನಮ್ಮಿಂದ ಸರಿಪಡಿಸಲಾಗದಂತಹ ತಪ್ಪುಗಳಾದದ್ದನ್ನು ಅಲ್ಲಗಳೆಯಲಾಗದು. ಒಂದು ನಾಣ್ಯಕ್ಕೆ ಇರುವ ಇನ್ನೊಂದು ಮುಖವನ್ನು ಕಾಣುವ ಪ್ರಯತ್ನಕ್ಕೆ ನಾವ್ಯಾರೂ ಕೈ ಹಾಕುವುದೇ...