ಬೆಳೆಯುತಿದ್ದೇವೆ ಎಂದರೆ ಅಳಿಯುತ್ತಿರುವುದಲ್ಲವೇ?!
ಮಾನವನಿಗೆ ಬದುಕಿನ ಪಾಠ ಹೇಳಿಕೊಡುವುದರಲ್ಲಿ ಪ್ರಕೃತಿಯ ಸರಿಸಮಾನರು ಯಾರೂ ಇಲ್ಲ. ಚಳಿಗಾಲದಲ್ಲಿ ಹೊಸ ಚಿಗುರಿನ ಹುಟ್ಟಿಗೆ ಅವಕಾಶ ನೀಡಬೇಕೆಂದು ಹಳೆ ಎಲೆಗಳಲ್ಲಾ ಉದುರುತ್ತವೆ. ಮರ ಬದಲಾಗಲಿಲ್ಲ ಎಂದುಕೊಂಡರೂ ಎಲೆಗಳೆಲ್ಲಾ ಬದಲಾಗುತ್ತವೆ; ಎಲೆಗಳು ಹೀರುವ ಬಿಸಿಲು, ಗಾಳಿಯೂ ಬದಲಾಗುತ್ತದೆ. ಆಗ ನೆರಳೂ ಹೊಸತು, ಅದರ ತಂಪೂ ಹೊಸತು. ಒಂದಿಷ್ಟನ್ನು ಕಳೆದುಕೊಂಡು, ಮತ್ತೊಂದಿಷ್ಟನ್ನು ಪಡೆದುಕೊಂಡು ಬದಲಾಗುವುದೇ ಬದುಕಲ್ಲವೇನು? ಬದಲಾವಣೆ ಬಾಳುತಿದ್ದೇವೆ ಎನ್ನುವುದರ ಸಂಕೇತ. ಉಸಿರೆಳೆದಷ್ಟು ಬಾರಿ ಮನುಜ ಬದಲಾಗಿದ್ದಾನೆ ಎನ್ನುವ ವಿಷಯ ಅದೆಷ್ಟು ಸಹಜ ಸತ್ಯವೇ ಆದರೂ ಅಚ್ಚರಿಯುಂಟು ಮಾಡದಿರದು. ಒಂದೊಂದು ಕ್ಷಣ ಕೈ ಜಾರಿದಂತೆ 'ನಾನಿರುವುದೇ ಹೀಗೆ' ಎನ್ನುವುದರಲ್ಲಿನ 'ಹೀಗೆ'ಯ ವ್ಯಾಖ್ಯಾನ ಬದಲಾಗುತ್ತದೆ. ಇದೇ ಬೆಳವಣಿಗೆ ಅಲ್ವೇ?! 'ಕಲಿಯುವ ಮನಸಿದ್ದರೆ ನಿಮಗೆ ಕಲಿಸುವುದು ಕಲ್ಲಿನ ಗೊಂಬೆ '. ಇದು ಒಂದೆರಡು ವರ್ಷಗಳ ಹಿಂದೆ ಹಿರಿಯರೊಬ್ಬರು ಹೇಳಿದ ಮಾತು. ಇದು ನನ್ನ ಮೇಲೆ ಬೀರಿದ ಪ್ರಭಾವ ಅಗಾಧ. ಇದು ನನ್ನಿಂದ ಅಸಾಧ್ಯ ಎಂಬ ಭಾವ ಕಾಡಿದಾಗಲೆಲ್ಲಾ ಈ ಕಿವಿಮಾತು ಕೈ ಹಿಡಿದು ನಡೆಸಿದ್ದದ್ದುಂಟು. ಹೀಗೆ ಮುಂದೆ ನಡೆದದ್ದರಿಂದ ನಾನೇ ಅಚ್ಚರಿಪಡುವಂತೆ ಬೆಳೆದದ್ದುಂಟು! ಇಂತಹ ಬೆಳೆವು ಅದೆಷ್ಟು ಸಂತಸಕ್ಕೆ ಕಾರಣವಾದರೂ ಅದರಲ್ಲಿ ನಾನಂದುಕೊಂಡ 'ನನ್ನತನ' ಚೂರು ಚೂರೇ ಅಳಿಯುವ ನೋವು ಕೆಣಕದೆ ಉಳಿಯುವುದಿಲ್ಲ. ಈ ಅಸ್ತಿ