Posts

Showing posts from January 3, 2021

ಹುಚ್ಚುಕೋಡಿ ಮನಸು, ಅದು ಹದಿನಾರರ ವಯಸು.... (ನೆನಪುಗಳಿವೆ ಹಲವು)

Image
  "ಹುಚ್ಚುಕೋಡಿ ಮನಸು, ಅದು ಹದಿನಾರರ ವಯಸು" ಎಷ್ಟು ವಾಸ್ತವವಾದ ಸಾಲುಗಳು... ಆ ವಯಸ್ಸಿನಲ್ಲಿ ಭಾವನೆಗಳು, ಗೊಂದಲಗಳು ಬೆಳೆದಂತೆ ಬದಲಾಗುತ್ತಲೇ ಇರುತ್ತವೆ... ಒಂದು ಕ್ಷಣದ ಭಾವ ಇನ್ನೊಂದು ಕ್ಷಣದಲ್ಲಿ ಸುಳ್ಳೆನಿಸುತ್ತದೆ. ಆ ಬೆಳವಣಿಗೆಯ ವಯಸ್ಸೇ ಹಾಗಿರಬೇಕು, ನಾನಂದದ್ದೇ ಸರಿ, ಅದಕ್ಕಿಂತ ಹೊರಗಿನ ಜಗತ್ತೇ ಸುಳ್ಳು ಎಂಬ ಭ್ರಮೆಯೊಳಗಿನ ಬದುಕು! ಹೊತ್ತು ಸರಿದ ಹಾಗೆ ಭ್ರಮೆಯ ಮಂಜು ಕರಗಿ ಅರಿವಿನ ಕಿರಣಗಳು ಕಾಣಿಸತೊಡಗುತ್ತವೆ. ಒಂದಷ್ಟು ವಿಚಾರಗಳು ಬಹಳಷ್ಟು ಪ್ರಭಾವಶಾಲಿಯಾಗಿ ನಮ್ಮ ಬದುಕನ್ನು ಕಟ್ಟಿಕೊಳ್ಳುವಲ್ಲಿಯೂ ಸಹ ತನ್ನ ಕೊಡುಗೆಯನ್ನು ನೀಡುತ್ತದೆ. ನಾನು ಹೈಸ್ಕೂಲಿನಲ್ಲಿದ್ದಾಗ ದೇವರು ಇದ್ದಾನೋ-ಇಲ್ಲವೋ ಎಂದು ಚರ್ಚೆಯ ಹೆಸರಲ್ಲಿ ವಾಗ್ವಾದಗಳಾಗುತಿದ್ದದ್ದು ಈಗ ತಮಾಷೆ ಎನಿಸುವುದರಲ್ಲಿ ಅಚ್ಚರಿಯಿಲ್ಲ, ಆಗ ನನ್ನ ವಿಚಾರಗಳನ್ನು ಎಲ್ಲರೂ ಒಪ್ಪಬೇಕೆಂಬ ಮಹದಾಶೆಯ ಎದುರಿಗೆ ವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯೇ ನನ್ನನ್ನು ಕಾಡುತ್ತಿರಲಿಲ್ಲ,  ನನಗೆ ಆ ಹೊತ್ತಿಗೆ ಈ ವಿಚಾರದ (ವ್ಯಕ್ತಿಸ್ವಾತಂತ್ರ್ಯದ)  ಬಗ್ಗೆ ತಿಳಿದಿರಲಿಲ್ಲವೆಂಬುದು ಸಹ ನಿಜವೇ. ಇದು ೨೦೧೫ರಲ್ಲಿ ಬರೆದಿದ್ದ ಕವನ,  ನನ್ನ ಈ ಬರವಣಿಗೆ ಬಾಲಿಶ ಎಂದೆನಿಸಿದರೂ ಸರಿಯೇ, ಆ ಹೊತ್ತಿಗೆ ಲೇಖನಿಯ ಅಲಗು ಜಗತ್ತಿನ ವಿಚಾರಗಳನ್ನೆಲ್ಲಾ ಬುಡಮೇಲು ಮಾಡಿಬಿಡುತ್ತದೆ ಎಂಬ ಭಂಢ ಧೈರ್ಯವೂ ಜೊತೆಗಿತ್ತು, ಮನಸಿಗೆ ತೋಚಿದ ವಿಚಾರ, ತೋಚಿದ ರೀತಿಯಲ್ಲಿ ಗೀಚಿದ್ದು... ಇದರ ಜೊತ