(ವಿ)ಚಿತ್ರ ಹನಿಗಳು-1
----------------------1------------------------- ಹನಿಗಳೆಲ್ಲವನು ಬಾಚಿ ಎದೆಯಾಳಕಿಳಿಸುವ ತವಕದಲಿದ್ದೆ; ಪಿಸುಗುಟ್ಟಿತು ಹನಿಯೊಂದು, ಬಾಚಬೇಕಿಲ್ಲ ನಮ್ಮೆಲ್ಲರನು ನೀನು, ಪ್ರೀತಿಯಿಂದ ಕೈ ಚಾಚಿದರೆ ಸಾಕೆಂದು!!! ----------------------2------------------------- ಮನವ ಮೋಹಿಸುವಷ್ಟು ಕಂಪನ್ನು ಅಡಗಿಸಿಡುವುದು ಮೊಗ್ಗು ತನ್ನೊಳಗೇ! ಅರಳುವವರೆಗೂ ಅರಿಯಗೊಡದೆ ತನ್ನ ಗುಟ್ಟನಾರಿಗೂ... ಬಿರಿದ ಕ್ಷಣದಿ ಮೃದುತೆಯನೆ ಸಾರುತಲೆಲ್ಲೆಡೆ, ಕಾಣಗೊಡದು ಬೆನ್ನ ಹಿಂದಣ ಮುಳ್ಳನು... ----------------------3------------------------- ಹನಿಗಳಾಗಿ ನಿನ್ನ ನೆನಪುಗಳು ಕಾಡುತ್ತಲೇ ಇರುವವು; ಸುಡುಬಿಸಿಲ ನಟ್ಟ ಬೇಸಿಗೆಯಲ್ಲೂ... ಹನಿಗಳು ಕೊಡುವ ತಂಪ ಮಾತ್ರ ಕೊಡವು, ಕಣ್ಣಂಚನು ತೋಯಿಸುವುದನು ಬಿಟ್ಟು... ----------------------4------------------------- ಬದುಕಿಡೀ ಭಾರ ಹೊತ್ತಿದ್ದ ಮುದಿಜೀವಕ್ಕೆ; ಆಸರೆಯಾಗಬೇಕಿದ್ದ ಮಗ ತೊರೆದ ಮೇಲೆ, ಉಸಿರೂ ಭಾರವಾಗಿದೆ... ----------------------5------------------------- ಬಾಡ ಹೊರಟ ಹೂವು, ಬೆನ್ನ ಹಿಂದೆ ಉಳಿಸಿತ್ತು; ನಾಳೆಗಾಗಿ ಮೊಗ್ಗೊಂದನು.... -ಪಲ್ಲವಿ ಕಬ್ಬಿನಹಿತ್ಲು WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM 👉 👉 👉 👉 SUPPORT US BY CLICKING THE FOLLOW BY E-MAIL...