Posts

Showing posts from January 1, 2023

ಬಿಳಿ ಬದುಕು...

Image
   https://youtu.be/_K0NqvceTKk "EN LEFKO" (=In White)  Artist: Natassa Bofiliou (Νατάσσα Μποφίλιου)  ಈ ಹಾಡು ಅದೇಕೋ ಮನ ಮುಟ್ಟಿತು ... ಕನ್ನಡಕ್ಕೆ ಸಾಧ್ಯವಾದರೆ ಭಾವಾನುವಾದ ಮಾಡಬೇಕೆಂದುಕೊಂಡೆ... ಅದರ ಫಲಶ್ರುತಿ ಈ ಕೆಳಗಿನ ಪ್ರಯತ್ನ... (ಇಲ್ಲಿ "ಬಿಳಿ" ಯನ್ನು ಶೂನ್ಯ, ಬಣ್ಣ ರಹಿತ, ವ್ಯರ್ಥ ಎಂಬರ್ಥದಲ್ಲಿ ಉಪಯೋಗಿಸಿಕೊಳ್ಳಲಾಗಿದೆ) *ಬಿಳಿ  ಬದುಕು...* ಓ, ನನ್ನ ಬಿಳಿ ಬದುಕಿನ ಬಿಳಿಯ ಹಣೆಯ ಬರಹವೇ, ಕತ್ತಲ ನೆರಳಿನ ಮರೆಯಲ್ಲಿ ಅಡಗುವುದೇಕೆ ನೀನು? ನಿನ್ನ ಕಂಡ ಕ್ಷಣ ಬದುಕು ಪರದೆಯಂತೆ ಕಣ್ಮುಂದೆ ಸುಳಿದು ನನ್ನ ಬಿಂಬವೇ ನಿನ್ನ ಬಿಳಿಯ ರಂಗೆಂದುಕೊಳ್ಳುತ್ತೇನೆ! ಅವಿತುಕೊಳ್ಳದಿರು ಎನ್ನುವ ಧೈರ್ಯವಿದ್ದರೆ,  ಬೇಯಿಸುತ್ತಿರಲಿಲ್ಲ ಅಂತರಂಗವನ್ನು ಅಸಹಾಯಕತೆಯ ತಾಪ... ಈ ಮರುಳಿನ ನೆರಳು ಬಿಳಿ; 'ಸುಳ್ಳು' ಅದರ ಅಸ್ತಿತ್ವ! ಗಡಿಯಾರದ ಮುಳ್ಳು ಸಹ ಕುಣಿಯುತ್ತಿರುವುದು, ನನ್ನ ಬದುಕಿನ ಮೂಕ ಹಾಡಿಗೇ!! ಸ್ತಬ್ಧ ಬದುಕಿನ ಮೌನದ ಸಾಲುಗಳನ್ನು ಇರುವಷ್ಟು ಹೊತ್ತು ಅರಸುತ್ತೇನೆ, ಮೌನವನ್ನೆಲ್ಲಾ ಶಬ್ದಗಳನ್ನಾಗಿಸುತ್ತೇನೆ, ಆ ಶಬ್ದಗಳೊಳಗಡಗಿದ ಅರ್ಥವನ್ನು ವಿವರಿಸುವ ಜೀವವೊಂದಕ್ಕೆ ಹಾತೊರೆಯುತ್ತೇನೆ... ಆ ವ್ಯಕ್ತಿ ಬಂದು ಶಬ್ದಗಳಿಗೆ ವಿವರಣೆಯಾದಾಗ ಅವರೇ ನನ್ನ ಭವಿಷ್ಯದ ನಾವಿಕರಾಗಲೆಂದು ಹಂಬಲಿಸುತ್ತೇನೆ, ನೆನಪುಗಳಿಗೆ ಬೇಡಿ ಹಾಕಲೆಂದು ಬಯಸುತ್ತೇನೆ... ಆದರೇನಾಯಿತು, ಬಿಳಿ ಬದುಕು ನೂಕ

ಒಂದು ನೆನಪು

Image
ಮಂಜು ಬೀಳುವ ಈ ಮುಂಜಾವಿನಲಿ, ನೀ ಯಾಕೆ ನೆನಪಾದೆಯೋ ಮನದಲಿ. ನಿನ್ನೊಂದಿಗೆ ಕಳೆದಂತಹ ಆ ಕ್ಷಣಗಳು, ಮತ್ತೆ-ಮತ್ತೆ ನೆನಪಾಗಿದೆ ಆ ದಿನಗಳು. ನಿನ್ನ ಬಗ್ಗೆ ಎಷ್ಟೇ ಗೀಚಿದರೂ ಕವನ, ನೀನೊಂದು ಮುಗಿಯದ ಕಥನ. ನಿನ್ನ ನಗುವೇ ನನಗೆ ರಸದೌತಣ, ನೀ ನಗುತ್ತಲೇ ಇರು ಪ್ರತಿದಿನ.       - ಹರ್ಷಿತ್ ಎಂ,          ಚೆಂಬು