Posts

Showing posts with the label Kannada Lekhanagalu

ಭಾಷೆಗೂ ಬಣ್ಣ ಉಂಟಂತೆ!!

Image
  ಭಾರತೀಯರು ವರ್ಣಪ್ರಿಯರು. ಭಾವನೆಗಳು, ಸಂಸ್ಕೃತಿಗಳು, ಹಬ್ಬಗಳು ಎಲ್ಲದಕ್ಕೂ ಬಣ್ಣಗಳು ರಾಯಭಾರಿ! ಭಾಷೆಯ ಸೊಗಡನ್ನು ಬಿಂಬಿಸುವ ಬಣ್ಣವೂ ಇರಬಹುದೇನೋ ಎಂಬ ಕುತೂಹಲ ನನಗೆ. ಭಾಷೆಯ ಬಣ್ಣ ಎಂದಾಕ್ಷಣ ಥಟ್ಟನೆ ಹೊಳೆದದ್ದು ಕನ್ನಡ ಭುವನೇಶ್ವರಿಯ ಅರಶಿಣ-ಕುಂಕುಮದ ಪವಿತ್ರ ವರ್ಣ. ಆದರೆ  ಸಂಸ್ಕೃತಿ ಮತ್ತು ಭಾಷೆ ಮರಕ್ಕೆ ಹಬ್ಬಿದ ಬಳ್ಳಿಯ ಹಾಗೆಯೇ ಅಲ್ಲವೇನು? ವೃಕ್ಷದ ಬೇರು ಆಳಕ್ಕಿಳಿದಷ್ಟು ಬಳ್ಳಿಯ ಬದುಕು ಅಷ್ಟರ ಮಟ್ಟಿಗೆ  ಹೆಚ್ಚು ಸುರಕ್ಷಿತ. ಸಂಸ್ಕೃತಿಯ ತರುವಿಗೆ ಸುತ್ತಿಕೊಂಡ ನಮ್ಮ ಮಾತೃಭಾಷೆಯೆಂಬ ಲತೆಯು ಎಲ್ಲ ರಂಗಿನ ಹೂಗಳನ್ನು ಅರಳಿಸುತ್ತದೆಯಾದರೂ ಲತೆಯ ಇರುವನ್ನು ಬೇರೆ ಬಣ್ಣಗಳೂ ಎತ್ತಿ ಹಿಡಿಯಬಹುದಲ್ಲಾ, ಅವು ಯಾವುದಿರಬಹುದೆಂಬ ಹುಚ್ಚು ಯೋಚನೆಯೊಂದು ನನ್ನಲ್ಲಿ ಹುಟ್ಟಿಕೊಂಡಿತು. ಆ ಹೊತ್ತಿಗೆ ಕಾಡಿದ ಕನ್ನಡದ ಬಣ್ಣವು ‘ಕ್ಲಾಸಿಕ್’ ಕಪ್ಪು-ಬಿಳುಪು! ಎಲ್ಲಾ ರಂಗುಗಳು ಹದವಾಗಿ ಬೆರೆತ ಬಿಳುಪು, ಬಣ್ಣಗಳ ಅಸ್ತಿತ್ವಕ್ಕೆ ಸಡ್ಡು ಹೊಡೆಯುವ ಕಪ್ಪು(Black is the absence of colour).  ಅರೇ ಇದೇನಿದು? ಕನ್ನಡದ ಬಣ್ಣ ಎನ್ನುತ್ತಾ ಬಿಳುಪನ್ನು ಒಪ್ಪಿಕೊಳ್ಳಬಹುದೇನೋ, ಆದರೆ ಕಪ್ಪುಎನ್ನುತ್ತಾಳಲ್ಲಾ ಎಂದು ಮೂಗು ಮುರಿಯಬೇಡಿಪ್ಪಾ... ಎಷ್ಟೆಷ್ಟೋ ಹೊತ್ತು ಕುಳಿತು ತಲೆ ಕೆರೆದ ಮೇಲಷ್ಟೆ ನಾನು ಹೀಗಂದದ್ದು! ಕನ್ನಡದ ಬಣ್ಣವು ಅಸ್ತಿತ್ವದ  "ಇರುವಿಕೆ ಹಾಗೂ ಇಲ್ಲದಿರುವಿಕೆ"ಯ ನಡುವಿನ ವಿರೋಧಾಭಾಸವನ್ನು ಪ್ರತಿ...

ತಪ್ಪು-ಒಪ್ಪುಗಳ ಕಪ್ಪು ಹಂಚುವ ಮುನ್ನ...

Image
"ನೀನು ಗುಡ್ ಗರ್ಲ್ ಅಲ್ವಾ ಪುಟ್ಟಿ, ಒಳ್ಳೆ ಮಾರ್ಕ್ಸ್ ತಗೋಬೇಕು" "ಏಯ್ ಪುಟ್ಟ, ಯಾಕೋ ಹುಡುಗಿಯರ ತರ ಅಳ್ತಾ ಇದ್ದೀಯ? ಹುಡುಗರು ಹಾಗೆಲ್ಲ ಅಳೋದಿಲ್ಲ" ಹೀಗೆ ಇದು ಸರಿ, ಇದು ತಪ್ಪು ಎಂದು ಎಲ್ಲಾ ಕೆಲಸಗಳನ್ನು ವಿಶ್ಲೇಷಿಸಿ ವಿಂಗಡಿಸುವ ಮನೋಧರ್ಮ ಎಳವೆಯೆಂದಲೇ ನಮ್ಮೊಳಗೆ ಬೆಳೆಯುತ್ತದೆ. ಈ ಮನೋಧರ್ಮ ನಾವಿರುವಷ್ಟು ದಿನ ನಮ್ಮ ಜೊತೆಗೇ ಬದುಕುತ್ತದೆ. ಎಲ್ಲಾ ಯೋಚನೆಗಳನ್ನು ಕಾರ್ಯರೂಪಕ್ಕೆ ತರುವ ಮುನ್ನ ಅದು  ನ್ಯಾಯಯುತವಾಗಿದ್ದು, 'ಸರಿ' ಎಂಬ ಅರ್ಹತೆಯನ್ನು ಪಡೆದುಕೊಳ್ಳಲೇಬೇಕು. ಹಾಗಿಲ್ಲದಿದ್ದರೆ ಆ ಯೋಚನೆ ಜನರೆದುರು ಬಿತ್ತರಗೊಳ್ಳಲು ನಾಲಯಕ್ಕು ಎಂಬುದು ನಮ್ಮ ಸಹಜ ಮನಸ್ಥಿತಿ. ಅಪ್ಪಿ-ತಪ್ಪಿ ಬುದ್ಧಿ ತಪ್ಪು ಎಂದುಕೊಂಡ ಕೆಲಸಕ್ಕೆ ಕೈ ಹಾಕಿದರೆ, ಅಪರಾಧಿ ಭಾವದ ಕೊರಗು ಕಾಡಲು ಶುರುವಾಗುತ್ತದೆ. ಈ ಯೋಚನೆಗೆ ಹೊರತಾದವರು ಯಾರಿಲ್ಲವಾದರೂ ತಪ್ಪುಗಳು, ಅಪರಾಧಗಳು 'ಇಲ್ಲ'ದಾಗುವುದಿಲ್ಲ ಎಂಬುವುದು ವಿಶಿಷ್ಟವಾದ ವಿಚಿತ್ರ ಸತ್ಯ...   ನೋಡಿದ್ದು, ಕೇಳಿದ್ದು ಎಲ್ಲವನ್ನೂ ನಮ್ಮೊಳಗೇ ಇರುವ ತಕ್ಕಡಿಯಲ್ಲಿ ತೂಗಿ ಈ ಎರಡರಲ್ಲಿ ಒಂದು ಪಟ್ಟಿಗೆ ಸೇರಿಸುತ್ತೇವೆ. ಹೀಗೆ ಮೊದಲೇ ನಮ್ಮೊಳಗೆ ತುಂಬಿಕೊಂಡಿರುವ ಮನಸ್ಥಿತಿಯಿಂದಾಗಿಯೇ ಹಲವಾರು ಬಾರಿ, ನಮ್ಮಿಂದ ಸರಿಪಡಿಸಲಾಗದಂತಹ ತಪ್ಪುಗಳಾದದ್ದನ್ನು ಅಲ್ಲಗಳೆಯಲಾಗದು. ಒಂದು ನಾಣ್ಯಕ್ಕೆ ಇರುವ ಇನ್ನೊಂದು ಮುಖವನ್ನು ಕಾಣುವ ಪ್ರಯತ್ನಕ್ಕೆ ನಾವ್ಯಾರೂ ಕೈ ಹಾಕುವುದೇ...

ಹುಚ್ಚುಕೋಡಿ ಮನಸು, ಅದು ಹದಿನಾರರ ವಯಸು.... (ನೆನಪುಗಳಿವೆ ಹಲವು)

Image
  "ಹುಚ್ಚುಕೋಡಿ ಮನಸು, ಅದು ಹದಿನಾರರ ವಯಸು" ಎಷ್ಟು ವಾಸ್ತವವಾದ ಸಾಲುಗಳು... ಆ ವಯಸ್ಸಿನಲ್ಲಿ ಭಾವನೆಗಳು, ಗೊಂದಲಗಳು ಬೆಳೆದಂತೆ ಬದಲಾಗುತ್ತಲೇ ಇರುತ್ತವೆ... ಒಂದು ಕ್ಷಣದ ಭಾವ ಇನ್ನೊಂದು ಕ್ಷಣದಲ್ಲಿ ಸುಳ್ಳೆನಿಸುತ್ತದೆ. ಆ ಬೆಳವಣಿಗೆಯ ವಯಸ್ಸೇ ಹಾಗಿರಬೇಕು, ನಾನಂದದ್ದೇ ಸರಿ, ಅದಕ್ಕಿಂತ ಹೊರಗಿನ ಜಗತ್ತೇ ಸುಳ್ಳು ಎಂಬ ಭ್ರಮೆಯೊಳಗಿನ ಬದುಕು! ಹೊತ್ತು ಸರಿದ ಹಾಗೆ ಭ್ರಮೆಯ ಮಂಜು ಕರಗಿ ಅರಿವಿನ ಕಿರಣಗಳು ಕಾಣಿಸತೊಡಗುತ್ತವೆ. ಒಂದಷ್ಟು ವಿಚಾರಗಳು ಬಹಳಷ್ಟು ಪ್ರಭಾವಶಾಲಿಯಾಗಿ ನಮ್ಮ ಬದುಕನ್ನು ಕಟ್ಟಿಕೊಳ್ಳುವಲ್ಲಿಯೂ ಸಹ ತನ್ನ ಕೊಡುಗೆಯನ್ನು ನೀಡುತ್ತದೆ. ನಾನು ಹೈಸ್ಕೂಲಿನಲ್ಲಿದ್ದಾಗ ದೇವರು ಇದ್ದಾನೋ-ಇಲ್ಲವೋ ಎಂದು ಚರ್ಚೆಯ ಹೆಸರಲ್ಲಿ ವಾಗ್ವಾದಗಳಾಗುತಿದ್ದದ್ದು ಈಗ ತಮಾಷೆ ಎನಿಸುವುದರಲ್ಲಿ ಅಚ್ಚರಿಯಿಲ್ಲ, ಆಗ ನನ್ನ ವಿಚಾರಗಳನ್ನು ಎಲ್ಲರೂ ಒಪ್ಪಬೇಕೆಂಬ ಮಹದಾಶೆಯ ಎದುರಿಗೆ ವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯೇ ನನ್ನನ್ನು ಕಾಡುತ್ತಿರಲಿಲ್ಲ,  ನನಗೆ ಆ ಹೊತ್ತಿಗೆ ಈ ವಿಚಾರದ (ವ್ಯಕ್ತಿಸ್ವಾತಂತ್ರ್ಯದ)  ಬಗ್ಗೆ ತಿಳಿದಿರಲಿಲ್ಲವೆಂಬುದು ಸಹ ನಿಜವೇ. ಇದು ೨೦೧೫ರಲ್ಲಿ ಬರೆದಿದ್ದ ಕವನ,  ನನ್ನ ಈ ಬರವಣಿಗೆ ಬಾಲಿಶ ಎಂದೆನಿಸಿದರೂ ಸರಿಯೇ, ಆ ಹೊತ್ತಿಗೆ ಲೇಖನಿಯ ಅಲಗು ಜಗತ್ತಿನ ವಿಚಾರಗಳನ್ನೆಲ್ಲಾ ಬುಡಮೇಲು ಮಾಡಿಬಿಡುತ್ತದೆ ಎಂಬ ಭಂಢ ಧೈರ್ಯವೂ ಜೊತೆಗಿತ್ತು, ಮನಸಿಗೆ ತೋಚಿದ ವಿಚಾರ, ತೋಚಿದ ರೀತಿಯಲ್ಲಿ ಗೀಚಿದ್ದು.....

ಹೊಸತನದ ಸೋಗಿನಲ್ಲಿ...

Image
ಇನ್ನೇನು ಗೋಡೆಗೆ ನೇತು ಹಾಕಿರುವ ಕ್ಯಾಲೆಂಡರ್ ಬದಲಾಯಿಸುವ ದಿನ ಬಂತು... ಹೊಸ ವರ್ಷ ಎಂಬ ಸೋಗಿನಲ್ಲಿ ಎಲ್ಲರಿಗೆ ಸಿಹಿಯನ್ನು ಬಯಸುವ, ಬದುಕಿನಲ್ಲಿ ಎದುರಾಗುವ ಕಹಿಯನ್ನು ಎದುರಿಸುವ ಶಕ್ತಿ ಇರಲೆಂದು ಹಾರೈಸುವ ಸಂದೇಶಗಳು ರವಾನೆಯಾಗುತ್ತಲಿದೆ, ಕಳೆದ 2020ರಲ್ಲಿ ಕಷ್ಟ-ನಷ್ಟಗಳ ನಡುವೆಯೂ ಜೊತೆಯಾದ ಆತ್ಮೀಯರಿಗೆ ಧನ್ಯವಾದಗಳು, ಬಿರುಕು ಬಿಟ್ಟ ಸಂಬಂಧಗಳ ಸವಿಯನ್ನು ನೆನಪಿಸಿ ಅವರವರ ಪಾಲಿನ ಕ್ಷಮೆ ಯಾಚನೆಯ ಸಂದೇಶಗಳು ಸಹಾ ಮತ್ತೊಮ್ಮೆ ಹರಿದಾಡತೊಡಗಿವೆ. ಮತ್ತೊಮ್ಮೆ ನ್ಯೂ ಈಯರ್ ರೆಸೊಲ್ಯೂಶನ್ (New Year Resolution) ತೆಗೆದುಕೊಂಡು, ಈ ಬಾರಿ ಯಾರು ಏನೆಂದರೂ ನಾನು ಹಾಕಿದ ಗುರಿಯನ್ನು ಮುಟ್ಟಿಯೇ ತೀರುತ್ತೇನೆ ಎಂಬ (ಆರಂಭ!) ಶೂರತ್ವದ ಮಾತುಗಳು ಎದೆಯೊಳಗಿನಿಂದ ಮೊಳಗುತ್ತಿವೆ... ಇವೆಲ್ಲ ಪ್ರತಿ ಹೊಸವರ್ಷದಲ್ಲಿ ಮತ್ತೆ-ಮತ್ತೆ ಮರುಕಳಿಸುವಂತಹವೇ ಹಾಗಾದರೆ ಹೊಸತೇನಿದೆ ಎಂದು ಕೇಳಿದರೆ ನನ್ನಲ್ಲಿ ಉತ್ತರವಿಲ್ಲ! ಹಿಂದಿನ ಬಾರಿ ಹೊಸ ವರುಷಕ್ಕೆ ನಾನೇ ಹಾಕಿಟ್ಟುಕೊಂಡ ಬೇಲಿಯನ್ನು ದಾಟಿಕೊಂಡು ಹೊಸ ಮುಖಗಳ ಪರಿಚಯವಾದ ಹಾಗೆಯೇ, ಗೆಳೆತನದ ನಂಟನ್ನು ಬೆಸೆದುಕೊಂಡು ಬಹಳಷ್ಟು ಗೆಳೆಯ-ಗೆಳತಿಯರನ್ನು ಸಂಪಾದಿಸಿಕೊಳ್ಳಬೇಕೆಂದುಕೊಂಡಿದ್ದೆ, ಆದರೇನಾಯಿತು, ಈಗಲೂ ಮೊದಲಿದ್ದ ಗೆಳೆಯ-ಗೆಳತಿಯರನ್ನು ನಾನು ಕಳೆದುಕೊಳ್ಳಲಿಲ್ಲ ಎಂಬ ತೃಪ್ತಿ ಮಾತ್ರ ನನ್ನೊಂದಿಗೆ ಉಳಿದದ್ದು. ಅದಕ್ಕಿಂತಲೂ ಹೆಚ್ಚಾಗಿ ನನ್ನ ಸ್ನೇಹವಿದ್ದದ್ದು ಗ್ರಂಥಾಲಯದೊಂದಿಗೆ, ಪುಸ್ತಕಗಳೊಂದಿ...

(ಅ)ಪರಿಪೂರ್ಣತೆಯ ಸುಖ

Image
 ಬದುಕಿನಲ್ಲಿ ಅರ್ಧವಾಗಿ ಉಳಿಯುವುದೇ ಖುಷಿಯಲ್ಲವೆ? ಅರೆರೆ, ಇದೇನು ಹುಚ್ಚು ಕಲ್ಪನೆ ಎಂದೆನಿಸಿದರೆ ತಪ್ಪಿಲ್ಲ... ತಪ್ಪು-ಒಪ್ಪುಗಳ ನಡುವೆಯೇ ಬದುಕಿನ ಸೊಗಡು ಅಡಗಿರುವುದು, ಆದರೆ, ಪರಿಪೂರ್ಣತೆಯಲ್ಲಿ ತಪ್ಪುಗಳಿಗೆ ಎಡೆಯಿಲ್ಲ, ಅಲ್ಲಿ ಎಲ್ಲವೂ, ಎಲ್ಲರೂ ಸರಿಯೇ; ಸಂಪೂರ್ಣವೇ! ಆದರೆ ಅರ್ಧವಾಗಿ, ಅಪರಿಪೂರ್ಣ, ಅಪಕ್ವವಾಗಿ ಉಳಿಯುವುದರಲ್ಲಿ ಇವೆಲ್ಲಕ್ಕೂ ಅವಕಾಶವಿದೆ... ಅನುಭವಗಳ ಪಾಠಕ್ಕೆ ಬೆಲೆಯಿದೆ, ಅಲ್ಲಲ್ಲಿ ಎಡೆವಿದರೂ ನಡೆಯುವ ನಿಲುವಿದೆ... ಪರಿಪೂರ್ಣರಾಗುವ ಕನಸು ಕಾಣುವುದಕ್ಕೂ ಅಪೂರ್ಣರಾಗುವ ಅಗತ್ಯತೆಯಿದೆ. ಸೋಲಿನಿಂದ ಕಲಿತು ಗೆದ್ದವನಿಗೆ ಎಂದಿದ್ದರೂ ಸೋಲಿನ ಬಳಿಕದ ಹಾದಿಯ ಮೇಲೆ ಅಪಾರ ಪ್ರೀತಿ, ಬಾಂಧವ್ಯಗಳಿರುತ್ತದೆ. ಆ ನಂಟು ಗೆಲುವಿನ ಸವಿಗಿಂತಲೂ ದಟ್ಟವಾಗಿರುತ್ತದೆ. ಹಾಗೆಯೇ ಅರ್ಧ ತಿಳಿದುಕೊಂಡು ಪೂರ್ತಿಯನ್ನು ಹುಡುಕುವಾಗಿನ ಕುತೂಹಲ, ಉತ್ಸಾಹ, ಅಲ್ಲಡಗಿರುವ ಗಾಬರಿ, ಆತುರತೆ-ಕಾತುರತೆ ಎಲ್ಲವೂ ಚಂದ... ಅದು ಗೆಲುವಿ(ಅರಿವಿ)ನ ಕ್ಷಣದಲ್ಲೊಮ್ಮೆ ಕಾಡಿ ಹೋದಾಗ ಎದೆ ತುಂಬಿ ಬಂದು ಕಣ್ಣು ತುಂಬಿಕೊಳ್ಳುತ್ತದೆ.  ಇದೇಕೆ ಹೀಗೆ? ಎಂದರೆ ಇರುವುದೆಲ್ಲವನು ಬಿಟ್ಟು ಇಲ್ಲದುದರೆಡೆಗೆ ತುಡಿವ ಮನಕ್ಕೇನನ್ನೋಣ! ಹುಡುಕಿದ್ದು ಸಿಕ್ಕಿತು ಎನ್ನುವಾಗ ಇನ್ನೊಂದು ಹುಡುಕಾಟಕ್ಕೆ ವಿಷಯವನ್ನು ಮನಸ್ಸು ಹುಡುಕಿಕೊಳ್ಳುತ್ತದೆ, ಅದಕ್ಕೂ ಪೂರ್ಣವಾಗುವುದಕ್ಕೆ ಇಷ್ಟವಿಲ್ಲ!  ಅಜ್ಞಾನ ದ ಖಾಲಿತನದಲ್ಲಿ ಅದು ವಿಹರಿಸುವ ಜಾಗವನ್ನು ಹುಡು...

ನೆನಪುಗಳ ದಿಬ್ಬಣ

Image
ನೆನಪುಗಳಿಗೆ ನೆನಪುಗಳು ನೆನಪಾದೀತೆ? ಅರ್ಥವಿಲ್ಲದ ಪ್ರಶ್ನೆ! ಈ ಹುಚ್ಚು ಯೋಚನೆಯ ಕೊಡುಗೆ ನನ್ನಲ್ಲಿ ಉಳಿದಿರುವ ಖಾಲಿ ಹೊತ್ತಿನದ್ದು, ಕೆಲಸವಿಲ್ಲದ ಖಾಲಿ ತಲೆಯದ್ದು... ಕೈಗೆ, ಮನಸಿಗೆ, ಬುದ್ಢಿಗೆ ಕೆಲಸವಿಲ್ಲದಿದ್ದರೆ ಕುಳಿತಲ್ಲಿಯೇ ನೂರು ಯೋಚನೆಗಳು ಕಾಡುತ್ತವೆ, ಅದರಲ್ಲಿ ಶೇಕಡ ತೊಂಬತ್ತರಷ್ಟು ನೆನಪುಗಳದ್ದೇ ಸಾಮ್ರಾಜ್ಯ. ಅಲ್ಲಿಯವರೆಗೆ ಕಾಣದ ಹಾಗೆ ಅವಿತು ಕುಳಿತಿದ್ದ ಈ ನೆನಪುಗಳು ಅದೆಲ್ಲಿಂದ ಸಮಯ ಸಾಧಿಸಿಕೊಂಡು ಕಣ್ಣೆದುರು ಮೆಲ್ಲನೆ ಜಗತ್ತೊಂದನ್ನು ತೆರೆಯುತ್ತದೆಯೋ ಅದು ಅಚ್ಚರಿಯಲ್ಲವೇ!! ಅದೆಲ್ಲೋ ಓದಿದ ನೆನಪು, ಬದುಕಲ್ಲಿ ನಡೆದದ್ದೆಲ್ಲವೂ ನೆನಪಿದ್ದರೆ ಒಳ್ಳೆಯದೋ ಕೆಟ್ಟದೋ ಎಂಬುವುದಕ್ಕೆ ನೀಡಿದ್ದ ಪ್ರತ್ಯುತ್ತರ ಹೆಚ್ಚು-ಕಡಿಮೆ ಹೀಗಿತ್ತು: ನೆನಪುಗಳು ಮತ್ತೆ-ಮತ್ತೆ ಕಾಡುತ್ತವೆಂದರೆ ನಾವಿನ್ನೂ ಅದೇ ಹೊತ್ತಲ್ಲಿ ಉಳಿದುಕೊಂಡಿದ್ದೇವೆ, ಅಲ್ಲಿಂದ ಮುಂದೆ ಹೆಜ್ಜೆ ಇಡಲೇ ಇಲ್ಲ ಎಂದು!! ಸತ್ತ 'ಹೊತ್ತಿನಲ್ಲೇ' ಉಳಿದುಕೊಳ್ಳುವುದು ಸರಿಯೇನು?! ಬದುಕು ಅಲ್ಲೇ ಸಿಲುಕಿಕೊಂಡಾಗ ಮುಂದೆ ಹೆಜ್ಜೆ ಹಾಕುವುದು ಕಷ್ಟವಲ್ಲವೇ?  ಹಾಗೆಂದು ನೆನಪುಗಳೆಲ್ಲ ಅಳಿಸಿಹೋಗುತ್ತದೆಂದರೆ, ಈ ಹೊತ್ತಿನ ನಗು, ಅಳು, ನಮ್ಮವರೊಂದಿಗೆ ಕುಳಿತು ಕಳೆಯುವ ಕ್ಷಣ, ಒಮ್ಮೆ ಕಾಡಿ ಮರೆಯಾಗುವ ಅವಮಾನ, ಅಭಿಮಾನ, ಕೋಪ-ತಾಪಗಳಿಗೆ ಅರ್ಥವೇ ಉಳಿಯುವುದಿಲ್ಲ. ಈ ಮಾನವೀಯ ಸಂಬಂಧಗಳು, ಪರಿವಾರ, ಗೆಳೆತನ, ಬಾಂಧವ್ಯ, ಪ್ರೀತಿ, ಪ್ರೇಮ ಯಾವುದಕ್ಕೂ ಅಸ್ತಿತ್ವವೇ ಇಲ್...

ಬೆಳಕೆಂಬ ಭರವಸೆ ಬದುಕಿನೆಡೆಗೆ...

Image
ಈ ಬಾರಿ ದೀಪಾವಳಿಯ ಸಂಜೆ ಹಣತೆ ಹಚ್ಚಿದಾಗ ಅದು ಕತ್ತಲನ್ನು ಹೇಗೆ ತನ್ನೊಳಗೆ ನುಂಗಿಕೊಳ್ಳುತ್ತದೆ ಎಂಬ ಪ್ರಶ್ನೆ ಸುಳಿದು ಮರೆಯಾಯಿತು... ಈ ಕತ್ತಲು-ಬೆಳಕಿನ ಕಣ್ಣು ಮುಚ್ಚಾಲೆಯಾಟವನ್ನು ಎಷ್ಟು ಬಾರಿ ಕಂಡರೂ ಅದು ನನ್ನನ್ನು ಹೊಸ-ಹೊಸ ರೂಪದೊಂದಿಗೆ-ರೀತಿಯೊಂದಿಗೆ ಬೆರಗುಗೊಳಿಸುವುದರಲ್ಲಿ ಹಿಂದುಳಿಯದು. ಅದಕ್ಕೇ ಇರಬೇಕು, ದೀಪಾವಳಿ, ಎಂದಿದ್ದರೂ ನನಗೆ ಎಲ್ಲದಕ್ಕಿಂತಲೂ ಆಪ್ತವೆನಿಸುವ, ವಿಶೇಷವೆನಿಸುವ, ಎಲ್ಲದಕ್ಕಿಂತಲೂ ಹೆಚ್ಚಾಗಿ ನನ್ನದೆನಿಸುವ ಹಬ್ಬ... ಇದಕ್ಕೆ ಇನ್ನೊಂದು ಕಾರಣ, ಈ ಬೆಳಕಿನ ಹಬ್ಬದಲ್ಲಿ ಒಂದೆಡೆ ಕತ್ತಲನ್ನು ಸೀಳುವ ಬೆಳಕು ಆಕರ್ಷಕವಾಗಿ ಕಂಡರೆ, ಮತ್ತೊಂದೆಡೆ ಆ ಬೆಳಕಿಗೆ ಕರಗುವ ಕತ್ತಲು ಹೆಚ್ಚು ಆಕರ್ಷಕ ಎಂದೆನಿಸುವ ದ್ವಂದ್ವ ಕಾಡುವುದಿರಬೇಕು. ಇಷ್ಟಲ್ಲದೆ ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ  ಜ್ಞಾನದೆಡೆಗೆ ಎಂದು ಕೂಗಾಡುವ ನಮಗೆ, ಈ ಹಬ್ಬವು ನಮ್ಮೊಳಗೇ ಇರುವ ಕತ್ತಲನ್ನೂ ಅಜ್ಞಾನವನ್ನೂ ಒಪ್ಪಿಕೊಳ್ಳುವ ಛಾತಿಯನ್ನು ಕೊಡುತ್ತದೆ ಎಂದು ನನಗನಿಸುತ್ತದೆ. ಅಹಂಕಾರವನ್ನು ಸದ್ದಿಲ್ಲದೆ ಸುಡುವ ಜ್ಯೋತಿ, ನಮಗೆ ಸಾತ್ವಿಕತೆಯ ಬೆಳಕಿನ ರುಚಿಯನುಣಿಸುತ್ತದೆ.  ಆದರೆ ಈ ಬಾರಿ ಕೊರೆದ ಯೋಚನೆಯೆಂದರೆ, ಬದುಕಿನಲ್ಲಿ ಬೆಳಕಿರಬೇಕು ಎಂಬುವುದು ಒಪ್ಪುವ ಮಾತಾದರೂ ಬದುಕೇ ಬೆಳಕಾಗಬಾರದೇಕೆ? ಎಂಬುವುದು.  ಒಳಗೆಲ್ಲ ಕತ್ತಲನ್ನು ತುಂಬಿಕೊಂಡು ಅಲ್ಲೊಂದು ಇಲ್ಲೊಂದು ದೀಪವನ್ನು ಹಚ್ಚಿ ಬೆಳಕು ತುಂಬಿಕೊಳ್ಳುವುದು ತಪ್ಪ...

ಹನಿ ಎಂಬ ಕಹಾನಿ

Image
ಮೊದಲ ಮಳೆಯ ಹನಿಗಳು ನೆಲವನಪ್ಪುವಾಗ ನೆನಪಿನ ಹನಿಗಳುದುರುವುದು ಅತಿ ಸಹಜ. ಸಿಹಿ ನೆನಪುಗಳು ನಗೆ ಹೊನಲನು ಹರಿಸಿದರೆ, ಕಹಿ ನೆನಪುಗಳು ಹನಿಗೂಡಿಸುತ್ತವೆ ಕಣ್ಣಂಚನು. ಮಳೆಯ ರಭಸದೊಂದಿಗೆ ನೆನಪಿನ ಹರಿವು ತೀವ್ರವಾಗುತ್ತಾ ಸಾಗುತ್ತದೆ. ಈ ಭಾವವು ವಯಸ್ಸಿನ ಭೇದವಿಲ್ಲದೆ ಸರ್ವರನ್ನು ಏಕರೂಪದಿಂದ ಕಾಡುತ್ತದೆಂಬುದೇ ಇದರ ವಿಶೇಷತೆ. ಮಳೆಗಾಲದೊಂದಿಗೆ ಕೆಲವು ಎಂದೂ ಬದಲಾಗದ ಪರಿಪಾಠಗಳು ಪರಂಪರೆಯಾದಂತೆ ತೋರುತ್ತದೆ.  “ನಮ್ಮ ಕಾಲದ ಮಳೆಯ ಮುಂದೆ ಈಗಿನ ಮಳೆ ಏನೇನು ಅಲ್ಲ” ಎಂದು ಶುರುವಾಗುವ ಆನುಭವಿ ಹಿರಿಜೀವಿಗಳ ಮಾತು, ತಮ್ಮ ಜೀವನದ ಸಾಹಸಗಾಥೆಗಳನ್ನು ಅನಾವರಣಗೊಳಿಸುವ ಹಾದಿಯಾಗುತ್ತದೆ. ತಮ್ಮ ಜೀವನದ ನೋವು-ನಲಿವುಗಳು ಮುಂದಿನ ಪೀಳಿಗೆಯ ಹೃದಯಗಳಿಗೆ ತಲುಪಿ ಸ್ಪೂರ್ತಿದಾಯಕವಾಗುವುದು ಎಂಬ ಅರಿವು ಅವರಲ್ಲಿ ಸುಪ್ತವಾಗಿರುವುದಲ್ಲವೆ! ಮೊದಲ ಬಾರಿಗೆ ತಮ್ಮ ಜೀವನ ಸಂಗಾತಿಯನ್ನು ಕಂಡದ್ದು, ಚಿಕ್ಕವಯಸ್ಸಿನಲ್ಲಿಯೆ ಮದುವೆ ಮಾಡಿದ್ದು, ಮೊದಲ ಸಲ ಅಡುಗೆ ಮಾಡಿದ್ದು ಶಾಲೆಯ ಅಂಗಳಕ್ಕೇರಲು ಪಟ್ಟ ಪಾಡು ಹೀಗೆ ನೆನಪಿನ ಬುತ್ತಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಇದು ಹಳೆ ದೇಹಗಳ ಕಥೆಯಾದರೆ ಅವರ ಮಡಿಲಲ್ಲಿ ಮಲಗುವ ಎಳೆ ಜೀವಗಳ ಜಗತ್ತೇ ವಿಭಿನ್ನ-ವಿಶಿಷ್ಟ.  ಕೈಗೂಸು ಗುಡುಗು-ಸಿಡಿಲಿನ ಆರ್ಭಟಕ್ಕೆ ಬೆದರಿಕೊಂಡರೂ ಮಳೆ ನೀರು ಕೆಳಗಿಳಿಯುವುದು ಮೊಗದಲ್ಲಿ ಹೂನಗುವನ್ನರಳಿಸುತ್ತದೆ. ಇನ್ನು ಶಾಲೆಯ ಮೆಟ್ಟಿಲು ಹತ್ತಿರುವ ಮಕ್ಕಳಲ್ಲಿ ಬೆಳ್ಳಂಬೆಳಗ್ಗೆ ಸುರಿ...

ನಿಶೆಯ ನಶೆಯೂ ಚೆನ್ನ...

Image
  ಕತ್ತಲಲ್ಲಿ ಕರಗಿ ಮರೆಯಾಗುವ ಬಯಕೆ ಕಾಡದ್ದು ಯಾರಿಗೆ?! ಪುಟಾಣಿಗಳು ಮನೆಕೆಲಸ ಮಾಡದಿದ್ದಾಗ, ಪ್ರೇಮಿಗಳು ಜಗದ ಕಂಗಳಿಂದ ಮರೆಯಾಗ ಬಯಸಿದಾಗ, ಪ್ರೌಢರಿಗೆ ಜೀವನ ಸೋಲಿನ ರುಚಿಯುಣಿಸಿದಾಗ, ಜೀವನದ ಸಂಧ್ಯಾ ಕಾಲದಲ್ಲಿರುವವರೂ ಕತ್ತಲಾಗುವುದಕ್ಕೆ, ಆ ಕತ್ತಲಲ್ಲಿ ಸದ್ದಿಲ್ಲದೆ ಕಳೆದುಹೋಗುವುದಕ್ಕೆ ಕಾಯುವುದಿಲ್ಲವೆ?! ಹಿರಿಯರು-ಕಿರಿಯರೆನ್ನುವ ಭೇದವನ್ನು ಮುರಿದು ಎಲ್ಲರನ್ನೂ ಒಂದಲ್ಲ ಒಂದು ಸಲ ಅಪ್ಪಿಕೊಂಡ ಭಾವವಿದು.  ಹಳೆತೆಲ್ಲವನ್ನು ಮರೆತು ಹೊಸತು ಶುರುವಾಗಲು ನಿಶೆಯಾಗಮನ ಬೇಡವೇ? ನೇಸರನುದಯಕ್ಕೆ ಕರಿ ಹಾಸಿನ ಕಂಬಳಿಯಿಲ್ಲದಿದ್ದರೆ ಅರ್ಥವಿದ್ದೀತೇ? ಜ್ಞಾನದೀಪದ ಬೆಳಕು ಪಸರಿಸಲು ಅಜ್ಞಾನದ ಕತ್ತಲಾವರಿಸಬೇಡವೇ? ಹಳೆದೇಹವನ್ನು ಕಳಚಿಟ್ಟು ಹೊಸ ದೇಹವೆಂಬ ಅಂಗಿ ಧರಿಸಲು ಬಾಳಸಂಜೆ ಕತ್ತಲೆಡೆಗೆ ಸಾಗುವುದಿಲ್ಲವೇ? ದಿನವಿಡೀ ದುಡಿದು ಕಂಗಾಲಾಗುವ ಜೀವಗಳಿಗೆ ರಾತ್ರಿ, ವಿಶ್ರಾಂತಿಯ ಆಮಂತ್ರಣವನ್ನು ಹೊತ್ತು ತಂದರೆ, ಕೆಲವೆಡೆ ಯುವ ಮನಸುಗಳಿಗೆ ಇದೇ ಹೊತ್ತಿಗೆ ತಮ್ಮ ದಿನಚರಿಯ ಆರಂಭವಾಗುತ್ತದೆ. ಪ್ರೇಮಿಗಳು ಚಂದ್ರನ ಬಿಂಬದಲ್ಲಿ ತನ್ನ ಪ್ರೇಮದ ಸಂದೇಶವನ್ನು ಸಂಗಾತಿಗೆ ತಲುಪಿಸುವ ಕನಸು ಕಾಣುತ್ತಾರೆ. ಆತ್ಮೀಯರನ್ನು ಅಗಲಿದವರು ತಾರೆಗಳೆಡೆಯಲ್ಲಿ ಅವರನ್ನು ಅರಸತೊಡಗುತ್ತಾರೆ. ರಾತ್ರಿಯ ಏಕಾಂತದಲ್ಲಿ ನೆನಪುಗಳು ಒಮ್ಮೊಮ್ಮೆ ತಂಗಾಳಿಯಾಗಿ, ಇನ್ನು ಕೆಲವೊಮ್ಮೆ ಬಿರುಗಾಳಿಯಾಗಿ ಬೀಸಿ ಒಂದರೆ ಘಳಿಗೆ ನಮ್ಮನ್ನು ತನ್ನೊಳಗೆ ಸೆಳೆದುಕೊಳ್ಳುತ್ತವೆ....