Posts

Showing posts with the label Kannada Hanigavana

ಹನಿ-ದನಿ

Image
ಮಕ್ಕಳ ಬೆನ್ನಿಗೆ ರೆಕ್ಕೆಯನಂಟಿಸಿದ ಗುರುವು ತನ್ನ ನೆಲವ ಬಿಟ್ಟು ಹಾರಲೇ ಇಲ್ಲ!! *** ವಿನಂತಿಗಳ ಸಂತೆಯಲಿ  ಬೆಲೆಯಿರುವುದು ಬಣ್ಣದ ಮಾತುಗಳಿಗಷ್ಟೇ!! *** ಕಣ್ಣ ರೆಪ್ಪೆಯ ಗೋಡೆಗಳ ಹಿಂದಡಗಿರುವುದು ಬಣ್ಣದ ಕನಸುಗಳು!! *** ಅವಳ ಅಡುಗೆ ಮನೆಯ ಕತೆಗಳು-ವ್ಯಥೆಗಳು ಹಾಳೆಗಳಿಗಿಳಿಯಲೇ ಇಲ್ಲ!! *** ಅಪ್ಪನ ದಪ್ಪ ಮೀಸೆಯ ಮರೆಯಲ್ಲವಿತಿರುವುದು ನೋವಿನ ನಗೆಯೇನು?! *** ಹಸಿವಿನ ಹೊರೆಯಡಿಯಲ್ಲಿ ಮೊನ್ನೆಯ ತಂಗಳನ್ನವೂ ಹಳಸದು!! *** ಮನೆಯೊಡತಿಯ  ಹೆಸರು ಮನೆಯೊಡೆಯನ ಮಡದಿಯೆಂದು!! *** ಸಿರಿವಂತನ ಸಂಪತ್ತಿನ ಮೂಟೆ ಹೊತ್ತವನ ಗೋಣು ಮುರಿದರೂ ಮುಗಿದದ್ದಿಲ್ಲ!! *** ಸಂಸಾರದ ನೊಗ ಅವನಿಗೆಂದೂ ಭಾರವೆನಿಸಲಿಲ್ಲ!! *** ಉಸಿರುಗಟ್ಟಿಸಿದ ಹತ್ತು ಜನರು ಆತ ಸತ್ತ ಮೇಲೆ ಸುತ್ತ ನಿಂತು ಅತ್ತರು!! -ಪಲ್ಲವಿ ಕಬ್ಬಿನಹಿತ್ಲು

ಹುಚ್ಚು ಮನಸಿನ ಸುತ್ತ...

Image
-೧-     ತಲುಪಬೇಕಾದ ಗುರಿಯನು ತಲುಪುವುದು ಕಠಿಣವೇನಲ್ಲ;  ಎಲ್ಲವನು ಬಿಟ್ಟು ಗುರಿಯೆಡೆಗೆ ದೃಷ್ಟಿಯ ನೆಟ್ಟು ಸಾಗಲು...  ಹೀಗಾದಾಗ ನಾನು ಗೆದ್ದೆನೆಂದರೆ ಸರಿಯೇ ನು ?! ತರವಲ್ಲ ಮನಸೇ,  ಗೆಲುವಡಗಿರುವುದು, ಸಾಗುವ ದಾರಿಯುದ್ದಕ್ಕೂ ಸಿಗುವ ಸಂಬಂಧಗಳ ದಾರಗಳನು ಕಡಿಯಗೊಡದೆ, ಬೆಸೆದ ಬಂಧಗಳ ಕೊಂಡಿಯನುಳಿಸಿಕೊಂಡಾಗ... ------------------------------------------------------------------------------------------------------------------------------- -೨-   ಮನ ಮಸಣವಾದರೆ ಸುತ್ತೆಲ್ಲ ಕಾಣುವುದು ಹೆಣಗಳೇ! ನಿನ್ನೊಳಗೆ ನಗೆ ಮಲ್ಲಿಗೆ ಅರಳಿಸುವುದನು ಕಲಿತಾಗ, ಕಲ್ಲಲ್ಲೂ ಕಲೆಯೇ ಕಾಣುವುದಲ್ಲವೇ?! ಕಣ್ಣು ನೋಡಿತಾದರೂ ಕಾಣಿಸುವುದು ನೀನೇ ತಾನೆ?! ಇದೆಲ್ಲವನೂ ಮರೆತು, ಸುತ್ತಲಿನವರೆಲ್ಲರೂ ಶತ್ರುಗಳೆಂದರೆ ಹೇಗೆ, ಮನವೇ?! ಸ್ನೇಹದ ಜೇನ ಸುರಿಸಿ ಮರೆಸಿಬಿಡು ನೋವನು.... -------------------------------------------------------------------------------------------------------------------------------   -೩- ಬೆಳಕಿನೆಡೆಗೆ ನಡೆವ ಹಾದಿಗೆ, ಬೇಲಿ ಹಾಕಿಕೊಂಡದ್ದೂ ನೀನೇ ತಾನೆ?! ನೀನು ಹೊಸತರೆಡೆಗೆ ನಡೆವೆನೆಂದರೆ, ತಡೆವರಾರು ಮನವೇ?! ---------------------------------------------------------...

ಅಳಿವ ಮೊದಲು ಇಳಿ ವಯಸ್ಕನ ಅಳಲು...

Image
  ಇಲ್ಲವೆಂಬ ಸೊಲ್ಲನೆತ್ತಿ ಕಾಡುವುದೇಕೆ ಮನಸೆ?!  ಇಲ್ಲಗಳನು ಉಂಟಾಗಿಸುವ ಛಲದ ಬಲ ಮರೆಯಾಗುತ್ತಿರಲು, ನಿನ್ನಿರುವಿಕೆಯೇ ಮೇಲೆಂದರೆ ಹೇಗೆ?! ನಾನಿಲ್ಲವಾದರೂ ನೀನು ' ಇಲ್ಲ ' ಗಳನು ಬಿಡುವುದೇ ಇಲ್ಲವೇನೋ! ಒಟ್ಟಿನಲ್ಲಿ ಇಲ್ಲಗಳಿಗೆ ಕಲ್ಲಾಗಿ ಅಳಿಯುವುದು, ಇಲ್ಲ ಎನ್ನುತ್ತ ಅಳುವಷ್ಟು ಸುಲಭವಲ್ಲ..‌.   -ಪಲ್ಲವಿ ಕಬ್ಬಿನಹಿತ್ಲು 👉 👉 👉 👉 SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE... WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM -KADUGUSUMA