Posts

Showing posts from October 25, 2020

ಹೀಗಾಗುವುದುಂಟು...

Image
ಒಮ್ಮೊಮ್ಮೆ ನಿನ್ನ ಮೇಲಿನ ಪ್ರೀತಿ, ಹನಿ-ಹನಿಯಾಗಿ ತೊಟ್ಟಿಕ್ಕುವುದುಂಟು... ಮತ್ತೊಮ್ಮೆ, ನಿನ್ನ ನೆನಪಾಗಿ ಕಂಗಳಿಂದ ಜಲಧಾರೆಯಾಗಿ ಧುಮ್ಮಿಕ್ಕುವುದುಂಟು... ಮನಸಿನ ಹಸಿರು ಹಾಸಿನ ಮೇಲೆ ಇಬ್ಬನಿಯಾಗಿ ಕುಳಿತು ಪ್ರೇಮರವಿಯ ಕಿರಣಕ್ಕೆ ಪ್ರಜ್ವಲಿಸಿ ಹೊಳೆಯುವುದುಂಟು... ನೆನಹುಗಳಲೆಗಳು ಭೋರ್ಗರಿಸಿ ಮೇಲೆದ್ದು ಎದೆಯ ಮೂಲೆ-ಮೂಲೆಯನು ತೊಳೆಯುವುದುಂಟು... ಅಲೆಗಳು ಹೊತ್ತು ತಂದ ನೀರು ಅಲ್ಲಲ್ಲಿ ನಿಂತು ನನ್ನೆಲ್ಲ ಸಮಯವನು ಕಳೆಯುವುದುಂಟು ಗೆಳತಿ, ನನ್ನ ಬದುಕಿನಿಂದ ನಿನ್ನಿರುವಿಕೆಯ ಹೆಮ್ಮರವ ಬುಡದಿಂದ ಕಿತ್ತೆಸೆಯುವುನೆಂದರೆ ನಿನ್ನ ಮುಗುಳ್ನಗುವಲುದುರುವ ಮುತ್ತುಗಳು ಮನದ ತುಂಬಾ ಚೆಲ್ಲಿ ಕುಣಿದಾಡಿ ನಾನು ನರಳಾಡುವುದುಂಟು... ಒಮ್ಮೊಮ್ಮೆ ನಿನ್ನ ಮೇಲಿನ ಪ್ರೇಮ ಜಲಧಾರೆಯಾಗಿ ಧುಮ್ಮಿಕ್ಕುವುದುಂಟು... ಮತ್ತೊಮ್ಮೆ ಸಿಹಿ-ಕಹಿ ನೆನಪುಗಳು ಹನಿ-ಹನಿಯಾಗಿ ತೊಟ್ಟಿಕ್ಕುವುದುಂಟು... -ಪಲ್ಲವಿ ಕಬ್ಬಿನಹಿತ್ಲು WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM 👉 👉 👉 👉 SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE.. -KADUGUSUMA

ಅತ್ತು ಹಗುರಾಗು ಮನಸೆ...

Image
“ಭಾರದ ಕರಿ ಮೋಡ ಮಳೆ ಸುರಿಸಿ ಹಗುರಾಗುವಂತೆ, ಭಾರವಾದ ಮನಸ್ಸು ಕಣ್ಣೀರು ಹರಿಸಿ ಹಗುರಾಗುತ್ತದೆ” ಎಂದು ಎಲ್ಲೋ ಓದಿದ ನೆನಪು. ಗಂಡು-ಹೆಣ್ಣಿನ ಒಳಗಿರುವ ಮನಸಿಗೆ ಭೇದವಿಲ್ಲೆಂದರೂ ಅಳು ಎಂದಾಕ್ಷಣ ನೆನಪಾಗುವುದು ಹೆಣ್ಮಗಳು ಎಂದರೆ ಸುಳ್ಳಲ್ಲ! ಅಳುವ ಹುಡುಗರನ್ನು ಕಂಡರೆ ಆತನದ್ದು ಹೆಂಗರಳು ಎನ್ನುವುದಿಲ್ಲವೇ ನಾವು! ಹೀಗೆ ಕಣ್ಣೀರಿಗೂ ಹೆಣ್ಣಿಗೂ ಅವಿನಾಭಾವ ಸಂಬಂಧ, ಅವಳ ಬಾಳ ಹಂತ ಹಂತದಲ್ಲೂ ಜೊತೆಯಾಗಿರುವಂತೆ ಭಾಸವಾಗುತ್ತದೆ ಈ ಅಳು! ಹದಿಹರೆಯದ ಹೆಣ್ಮಗಳು ಹಳ್ಳಿಯಲ್ಲಿದ್ದರೆ ಬಣ್ಣದ ಕನಸುಗಳನ್ನು ಕಣ್ಣಲ್ಲಿ ತುಂಬಿಕೊಂಡು ಮನೆಯಿಂದ ಹೊರಬರಲಾಗದೆ, ಒಳಗುಳಿಯಲೂ ಮನಸೊಪ್ಪದೆ ಕಣ್ಣೀರು ಸುರಿಸಿದರೆ, ಪೇಟೆಯ ಬೆಡಗಿಯರು ಪ್ರೀತಿ-ಪ್ರೇಮದ ಸುಳಿಗೆ ಸಿಲುಕಿಯೋ, ಉದ್ಯೋಗಿ ತಂದೆ-ತಾಯಿಗೆ ತಮ್ಮ ಬಗ್ಗೆ ಕಾಳಜಿಯಿಲ್ಲವೆಂದು ಕೊರಗುತ್ತಾ ಅಳುತ್ತಾರೆ. ಎಮ್ಮ ಮನೆಯಂಗಳದಿ ಬೆಳೆದ ಹೂವನ್ನು ಧಾರೆಯೆರೆಯುವೆವು ಎನ್ನುವಾಗ ಮದುಮಗಳ ಜೊತೆ ಹೆತ್ತವ್ವನ ಕರುಳು, ಅಪ್ಪನ ಎದೆಯಲ್ಲಡಗಿರುವ ಪ್ರೀತಿಯೂ ಅಳುವುದಿಲ್ಲವೇ? ಎಷ್ಟಾದರೂ ಎಳೆಯ ಕಾಲಲ್ಲಿ ಗೆಜ್ಜೆ ಕಟ್ಟಿ ಕುಣಿಯುತಿದ್ದ ಮಗಳು ತವರ ತೊರೆವ ಹೊತ್ತಿಗೆ ಕಣ್ಣಂಚು ಒದ್ದೆಯಾಗದಿದ್ದೀತೇ?! ಅಳುವೆಂದರೆ ಬರೀ ನೋವಲ್ಲ; ಸಂತಸದ, ಭಾವೋದ್ವೇಗದ ಅಭಿವ್ಯಕ್ತಿಯೂ ಹೌದು, ಅತ್ತಿದ್ದ ಮದುಮಗಳ ಬದುಕಲ್ಲಿ ಮೂಡುವ ಹೊಸ ಬೆಳಗಿನ ಹಾಗೆ, ಸಾವಿನ ಮುಂದಿರುವ ಹೊಸ ಬದುಕಿನ ಹಾಗೆ, ಮುಳ್ಳಿನ ಗಿಡದಲರಳುವ ಗುಲಾಬಿಯ ಹಾಗೆ, ಕತ್ತಲೆಯು ಮರೆ

ಶೀರ್ಷಿಕೆಯಿಲ್ಲದ ಕವನ

Image
  ಒಂದಾದ ಮೇಲಿನ್ನೊಂದರಂತೆ ಕವನ ಬರೆದೆ ಅದು ಬೇಡ -ಇದು ಬೇಡವೆಂದು ಕೊರೆದೆ ಎಲ್ಲವನು ಕೂಡಿ ಕಳೆದು ಇದ ಗೀಚಿದೆ   ಎಷ್ಟು ಬರೆದರೂ ಶೀರ್ಷಿಕೆ ಕೊಡಲಾರೆನದಕೆ ಜೀವ ತುಂಬ ಹೊರಟರೂ ತೃಪ್ತಿಯಾಗಲಿಲ್ಲೆನಗೆ ಅದರಿಂದಾಗಿ ಶೀರ್ಷಿಕೆಯೇ ಬೇಡವೆಂದುಕೊಂಡೆನಿದಕೆ   ಭಾವ-ಜೀವಗಳ ಸಮ್ಮಿಳಿಸಿ ಅದಕೆ ಶಬ್ದಗಳನ ರ ಸಿ  ಕುಳ್ಳಿರಿಸಿ, ಪುಸ್ತಕದಿ ರಂಗಿಸಿದೆ ಶಾಯಿ ಸುರಿಸಿ   ಪೆನ್ನನು ಮಸಿಗೆ ಅದ್ದಿ ಕವನವನು ತೀಡಿದೆ ತಿದ್ದಿ ಮತ್ತೆ ನೋಡಿದರೆ ಮನೆ ತುಂಬಾ ರದ್ದಿ!!   ಅಮ್ಮ ಬಂದಳು ಇದ ನೋಡಿ ಕೈಗೆ ಕೊಟ್ಟಳು ಹಿಡಿಸೂಡಿ; ಸಾಕಪ್ಪಾ ಸಾಕು ಈ ಕವನದ ಮೋಡಿ!   ಇಲ್ಲಿಗೆ ಮುಗಿಯಿತು ಆ ದಿನದ ಕಥೆ, ನನ್ನ ರಸಮಯ ವ್ಯಥೆ; ಕೇಳಿದಳಮ್ಮ ಕೊನೆಗೆ ' ಶೀರ್ಷಿಕೆಯಿಲ್ಲದ ಕವನ ರಚನೆ ' ಮುಗಿಯಿತೆ?   -ಪಲ್ಲವಿ ಕಬ್ಬಿನಹಿತ್ಲು (ಇದು ನಾನು ಬರವಣಿಗೆಯ ಪ್ರಯತ್ನಕ್ಕೆ ಕೈ ಹಾಕಿದ ಹೊಸದರಲ್ಲಿ ಬರೆದಿದ್ದ ಕವಿತೆ... ಇದೀಗ ಓದುವಾಗ ಉತ್ತಮ ಎಂದೆನಿಸಿದಿದ್ದರೂ ಮುಖದಲ್ಲಿ ನಗು ಮೂಡಿಸಿದ್ದು ಮಾತ್ರ ಸತ್ಯ... ಇದು ನಿಮಗೆ ಹೇಗನ್ನಿಸಿತು ಎಂದು ಮುಕ್ತವಾಗಿ ಕಾಮೆಂಟ್ ಮಾಡಿ ಅಥವಾ Reaction ಮೂಲಕ ತಿಳಿಸಿ)   WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM 👉 👉 👉 👉 SUPPORT US BY CLICKING THE FOLLOW BY E-MAIL BUTTON On TOP RIGHT CORNER...

ನೀನೊಂದು ಮಾತು ಹೇಳಿದ್ದಿದ್ರೆ?!

Image
  ತಾಯಿಗೆ ಮಗುವಿನ ಮನಸ್ಸನ್ನು ಅರಿಯುವ ಶಕ್ತಿಯನ್ನು ಪ್ರಕೃತಿಯೇ ಕೊಡುತ್ತಂತೆ. ಆದರೆ ಮಗಳೇ, ನಿನ್ನ ತಂದೆಯಾಗಿಯೂ ತಾಯಿಯ ಪ್ರೀತಿ, ಅಕ್ಕರೆಯನ್ನು ಕೊಡುವ ಸಾಮರ್ಥ್ಯವನ್ನು ಕಲಿಸಿದ್ದು ನಿನ್ನ ಅಮ್ಮನಿಲ್ಲದ ‘ಜೀವನ’... ನಿನ್ನ ಅಮ್ಮ ಅಂದು ನಿನಗೆ ಜನ್ಮ ಕೊಟ್ಟು, ತನ್ನ ಕೊನೆಯುಸಿರನೆಳೆದಳು.  ಅಂದಿನಿಂದ ಕಣ್ಣರೆಪ್ಪೆ ಕಣ್ಣನ್ನು ಕಾದಂತೆ, ನಿನ್ನನ್ನು ಜೋಪಾನ ಮಾಡಿದೆ. ನನಗಿದ್ದ ಒಂದೇ ಒಂದು ಸಂಪತ್ತು  ನೀನು ಎಂದು, ನಿನಗೆ ಐಶ್ವರ್ಯಾ ಎಂದು ಹೆಸರಿಟ್ಟೆ. ನೀನು ಕೇಳಿದ್ದಕ್ಕೆಲ್ಲ ಒಲ್ಲೆ ಎನ್ನದೆ, ತಂದುಕೊಟ್ಟೆ. ಹಗಲು-ರಾತ್ರಿ ದುಡಿದು ನಿನಗೆ ಪ್ರೀತಿಯ ಧಾರೆ ಎರೆದೆ. ಅಂದು ಹೈಸ್ಕೂಲಿನಲ್ಲಿ ನೀನು ಗೆಳತಿಯರೊಡನೆ ಶಾಲೆ ತಪ್ಪಿಸಿ ಸಿನೆಮಾ ಹೋಗಿದ್ದು! ಅಂದು ಅಲ್ಲಿದ್ದ ಕೆಲವರು ನಿಮ್ಮನ್ನು ನೋಡಿ ನನ್ನಲ್ಲಿ, ಶಿಕ್ಷಕರಲ್ಲಿ ದೂರು ಕೊಟ್ಟಿದ್ದು, ನಿನಗೆ ನೆನಪಿರಬಹುದು. ಆಗ ಶಿಕ್ಷಕರು ನಿನ್ನನ್ನು ಗದರುತ್ತಿದ್ದಾಗ ಎಲ್ಲ ತಪ್ಪನ್ನು ನನ್ನ ಮೇಲೆ ಹೊತ್ತು ನಿನ್ನನ್ನು ಬಚಾವ್ ಮಾಡಿದ್ದೆ, ಅಲ್ವಾ?! ನಿನ್ನ ಮೇಲೆ ನೂರಾರು ಕನಸುಗಳನ್ನು ಇಟ್ಕೊಂಡಿದ್ದೆ. ಅದರಲ್ಲೂ ಎಸ್ಸೆಸೆಲ್ಸಿಲಿ, ಒಳ್ಳೆ ಮಾರ್ಕ್ಸ್  ತೆಗಿತಾಳೆ  ಅಂದ್ಕೊಂಡ  ಮಹದಾಶೆ ಪೂರೈಸ್ಲೇ ಇಲ್ಲ. ಒಂದು ವರ್ಷ ಮನೇಲೇ ಕೂತ್ಕೊಂಡು ಬಿಟ್ಯಲ್ಲೇ ನೀನು! ಆದ್ರೂ ಏನೂ ಹೇಳ್ಲಿಲ್ಲ ನಾನು, ಯಾಕಂದ್ರೆ, ಹೇಳಿದ್ನಲ್ಲ ಅಮ್ಮನ ಹೃದಯ ನನ್ನಲ್ಲಿತ್ತು ಅಂತ. ಮಗಳೇ, ಪುಟ್ಟ ಮಕ್ಕಳ ಮನಸ್ಸು ಮುಗ್ಧ ಅನ್ನೋದನ್ನ