(ವಿ)ಚಿತ್ರ ಹನಿಗಳು-1
----------------------1-------------------------
ಹನಿಗಳೆಲ್ಲವನು ಬಾಚಿ ಎದೆಯಾಳಕಿಳಿಸುವ ತವಕದಲಿದ್ದೆ;
ಪಿಸುಗುಟ್ಟಿತು ಹನಿಯೊಂದು,
ಬಾಚಬೇಕಿಲ್ಲ ನಮ್ಮೆಲ್ಲರನು ನೀನು,
ಪ್ರೀತಿಯಿಂದ ಕೈ ಚಾಚಿದರೆ ಸಾಕೆಂದು!!!
----------------------2-------------------------
ಮನವ ಮೋಹಿಸುವಷ್ಟು ಕಂಪನ್ನು ಅಡಗಿಸಿಡುವುದು ಮೊಗ್ಗು ತನ್ನೊಳಗೇ!
ಅರಳುವವರೆಗೂ ಅರಿಯಗೊಡದೆ ತನ್ನ ಗುಟ್ಟನಾರಿಗೂ...
ಬಿರಿದ ಕ್ಷಣದಿ ಮೃದುತೆಯನೆ ಸಾರುತಲೆಲ್ಲೆಡೆ,
ಕಾಣಗೊಡದು ಬೆನ್ನ ಹಿಂದಣ ಮುಳ್ಳನು...
----------------------3-------------------------
ಹನಿಗಳಾಗಿ ನಿನ್ನ ನೆನಪುಗಳು ಕಾಡುತ್ತಲೇ ಇರುವವು;
ಸುಡುಬಿಸಿಲ ನಟ್ಟ ಬೇಸಿಗೆಯಲ್ಲೂ...
ಹನಿಗಳು ಕೊಡುವ ತಂಪ ಮಾತ್ರ ಕೊಡವು,
ಕಣ್ಣಂಚನು ತೋಯಿಸುವುದನು ಬಿಟ್ಟು...
----------------------4-------------------------
ಬದುಕಿಡೀ ಭಾರ ಹೊತ್ತಿದ್ದ ಮುದಿಜೀವಕ್ಕೆ;
ಆಸರೆಯಾಗಬೇಕಿದ್ದ ಮಗ ತೊರೆದ ಮೇಲೆ,
ಉಸಿರೂ ಭಾರವಾಗಿದೆ...
----------------------5-------------------------
ಬಾಡ ಹೊರಟ ಹೂವು,
ಬೆನ್ನ ಹಿಂದೆ ಉಳಿಸಿತ್ತು;
ನಾಳೆಗಾಗಿ ಮೊಗ್ಗೊಂದನು....
WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM
👉👉👉👉SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE..
-KADUGUSUMA
(ವಿಶೇಷ ಪ್ರಕಟಣೆ:
ಇದೇ ಪ್ರಯತ್ನದಲ್ಲಿ ಇನ್ನೊಂದು ಪ್ರಯತ್ನಕ್ಕೆ ಕೈ ಹಾಕುತ್ತಿದ್ದೇವೆ. ನಮ್ಮ ಬ್ಲಾಗ್ ಓದುಗರಲ್ಲಿ ಬರೆಯುವವರೂ ಇದ್ದಾರೆ. ಅವರಿಗಾಗಿಯೇ ಒಂದು ದಿನದ ಪ್ರಕಟಣೆಯನ್ನು ಮೀಸಲಿಡುವ ಪ್ರಯತ್ನ. ಆಸಕ್ತಿ ಉಳ್ಳವರು ತಮ್ಮ ಕನ್ನಡ ಬರಹವನ್ನು
kadugusumaofficial@gmail.com
ಗೆ E-Mail ಮಾಡಬಹುದು. ಆಯ್ದ ಬರಹಗಳನ್ನು ಪ್ರತಿ ಭಾನುವಾರ 'ಓದುಗರ ಕಾಲಂ' ನಲ್ಲಿ ಪ್ರಕಟಿಸುತ್ತೇವೆ.
ಧನ್ಯವಾದಗಳೊಂದಿಗೆ,
-ಕಾಡುಗುಸುಮ)
Nice..
ReplyDeletethank you anna...
DeleteWndrful words. . Nice dea😍
ReplyDeletethank you dea👍👍
Delete👌👌
ReplyDelete🙏🙏🙏
DeleteWow super agide
ReplyDeleteNice👍
ReplyDeleteVaastava
ReplyDeleteBhavapoorna.
ReplyDeleteಧನ್ಯವಾದಗಳು🙏🙏
Delete