(ವಿ)ಚಿತ್ರ ಹನಿಗಳು-3

 


ಹಾಕಬೇಕೆನ್ನಿಸಿತು ಖುಷಿಗೊಂದಷ್ಟು ಕಡಿವಾಣ,

ಆದರೆ ಖುಷಿಯೆಲ್ಲಿದೆ ನನ್ನಲ್ಲಿ?!

*********************************************



ಹುಡುಕಾಟದ ಕಿಡಿಯೊಂದು ಹುಟ್ಟಿತು:

ಕಾಳೊಂದು ಮೆಲ್ಲನೆ ಮೊಳಕೆಯೊಡೆದ ಹಾಗೆ,

ರವಿಯ ಕಿರಣ ಭುವಿಯನಪ್ಪಿದ ಹಾಗೆ,

ಮಳೆಯ ಮೊದಲ ಹನಿ ಮಣ್ಣಿನೊಳಗೆ ಇಳಿದ ಹಾಗೆ,

ಸದ್ದಿಲ್ಲದೆ, ಸುದ್ದಿಯೇ ಇಲ್ಲದೆ!!

**********************************************



ಸುಳಿವೇ ಸಿಗದಂತೆ ಮರೆಯಾಗುವುನೆಂದರೆ,

ಹಾಳು ಮನಸೇ ನನ್ನಲ್ಲಿಲ್ಲವಲ್ಲ!!

ನಿನ್ನಲ್ಲೇ ಅದ ಬಿಟ್ಟರೆ ನನ್ನುಸಿರು ಮುನಿಸಿಕೊಂಡೀತೆಂದು,

ಉಳಿದುಕೊಂಡಿರುವೆನಿಲ್ಲಿಯೇ!!

***********************************************



ಕಚ್ಚಾಡುವ ಮಾತೂ ವಿಚ್ಛೇದನ ಕೊಟ್ಟಂತಿದೆ,

ಹೆಚ್ಚಾಡುವ ಮೌನವೂ ಮುನಿಸಿಕೊಂಡಂತಿದೆ,

ಇಲ್ಲದವುಗಳನ್ನು ಇದೆಯೆನ್ನುವ,

ಇರುವುದರ ಅರಿವನ್ನೂ ಅಲ್ಲಗಳೆಯುವ,

'ಜಗ್ಗಾಟ'ದಲಿ...

*************************************************



ಅವಳು ಎಂದೂ ಅಳುವವಳಲ್ಲ,

ಯಾವ ಸಂದರ್ಭವೂ ಅವಳ ಮೊಗದ ನಗುವನ್ನು 'ಅಳಿಸು'ವುದಿಲ್ಲ;

ಕಾರಣ;

ಕಾಲ ಕಲಿಸಿದೆ ಅವಳಿಗೆ

ನೋವಿಗೂ ನಗಲು ಕಲಿಸುವುದನ್ನು....



-ಪಲ್ಲವಿ ಕಬ್ಬಿನಹಿತ್ಲು 

Comments

Post a Comment

Popular posts from this blog

DREAMS…

ಕಾಫಿಯ ಕಪ್ಪು

ಬಿಳಿ ಬದುಕು...