ಹನಿ-ದನಿ





ಮಕ್ಕಳ ಬೆನ್ನಿಗೆ ರೆಕ್ಕೆಯನಂಟಿಸಿದ

ಗುರುವು

ತನ್ನ ನೆಲವ ಬಿಟ್ಟು ಹಾರಲೇ ಇಲ್ಲ!!

***






ವಿನಂತಿಗಳ ಸಂತೆಯಲಿ 

ಬೆಲೆಯಿರುವುದು

ಬಣ್ಣದ ಮಾತುಗಳಿಗಷ್ಟೇ!!

***



ಕಣ್ಣ ರೆಪ್ಪೆಯ ಗೋಡೆಗಳ

ಹಿಂದಡಗಿರುವುದು

ಬಣ್ಣದ ಕನಸುಗಳು!!

***



ಅವಳ ಅಡುಗೆ ಮನೆಯ

ಕತೆಗಳು-ವ್ಯಥೆಗಳು

ಹಾಳೆಗಳಿಗಿಳಿಯಲೇ ಇಲ್ಲ!!

***



ಅಪ್ಪನ ದಪ್ಪ ಮೀಸೆಯ

ಮರೆಯಲ್ಲವಿತಿರುವುದು

ನೋವಿನ ನಗೆಯೇನು?!

***



ಹಸಿವಿನ ಹೊರೆಯಡಿಯಲ್ಲಿ

ಮೊನ್ನೆಯ ತಂಗಳನ್ನವೂ

ಹಳಸದು!!

***



ಮನೆಯೊಡತಿಯ 

ಹೆಸರು

ಮನೆಯೊಡೆಯನ ಮಡದಿಯೆಂದು!!

***



ಸಿರಿವಂತನ ಸಂಪತ್ತಿನ ಮೂಟೆ

ಹೊತ್ತವನ ಗೋಣು ಮುರಿದರೂ

ಮುಗಿದದ್ದಿಲ್ಲ!!

***



ಸಂಸಾರದ ನೊಗ

ಅವನಿಗೆಂದೂ

ಭಾರವೆನಿಸಲಿಲ್ಲ!!

***



ಉಸಿರುಗಟ್ಟಿಸಿದ ಹತ್ತು ಜನರು

ಆತ ಸತ್ತ ಮೇಲೆ

ಸುತ್ತ ನಿಂತು ಅತ್ತರು!!


-ಪಲ್ಲವಿ ಕಬ್ಬಿನಹಿತ್ಲು

Comments

  1. ತುಂಬ ಚೆನ್ನಾಗಿದೆ..

    ReplyDelete
  2. ಒಂದೊಂದು ಎಸಳು ಅದ್ಭುತ💕😍

    ReplyDelete
  3. ತುಂಬಾ ಚೆನ್ನಾಗಿದೆ.... ಹನಿಗವನಗಳು... ✌
    ಪರದೆಯಡಿ ಹುದುಗಿರುವ ಪದಗಳು😒

    ReplyDelete
  4. ಅದ್ಭುತವಾದ ಅರ್ಥಪೂರ್ಣ ಪದಗಳು.....

    ReplyDelete
  5. ಚೆನ್ನಾಗಿದೆ.. 👌

    ReplyDelete

Post a Comment

Popular posts from this blog

THE LONGING…

One-sided!

Winter Inside!