ಬೆಳಕಿನ ಭಯ

                             

ಕತ್ತಲಿನೊಳಗೆ ಕರಗಿ

ಯಾರಿಲ್ಲವೆಂದು ಕೊರಗುವ ನಾನು,

ಹೆದರುತ್ತಿದ್ದೇನೆ ಬೆಳಕಿನ ಸುಳಿವು ಸಿಕ್ಕಾಗ...


ಬೆಳಕ ಕಂಡು

ಅವಿತುಕೊಳ್ಳಲು ಮರೆಯನರಸುವಾಗ,

ಕತ್ತಲ ಕಣ್ಣುಪಟ್ಟಿ ನನ್ನನ್ನು ಬಿಟ್ಟು

ಉಳಿದೆಲ್ಲವನು ತನ್ನೊಳಗೆ ಅಡಗಿಸಿಕೊಳ್ಳುತ್ತದೆ...

ತಡಕಾಡುತ್ತಾ ಇನ್ನಷ್ಟು ಹುಡುಕುತ್ತೇನೆ;

ಅಲ್ಲಲ್ಲಿ ಎಡವುತ್ತೇನೆ,

ನೋವನ್ನು ಕಣ್ಣಿನೊಳಗೆ ಕದಡಿ ಕಣ್ಣೀರಾಗುತ್ತೇನೆ,



ಯಾರಿಗೂ ನಿಜ ಹೇಳದೆ

ನೂರು ಜನರೊಳಗೆ ನೂರು ಕಥೆಯಾಗುತ್ತೇನೆ,

ಅವರೊಳಗೆ ಕುಳಿತ ರೇಜಿಗೆಗಳಿಗೆ ಚಿತೆಯಾಗುತ್ತೇನೆ,

ಅವರು, ಹೆಣೆದಿಟ್ಟುಕೊಂಡ ನೂರು ಕಥೆಗಳನು ಉಸುರಿ,

ನಮಗ್ಯಾಕೆ ಅವಳ ಉಸಾಬರಿ ಎನ್ನುತ್ತಾ

ಎಲ್ಲರೂ ಹಗುರಾಗುತ್ತಾರೆ;

ನಾನು, ಮತ್ತೆ ಎಲ್ಲವನು ಕೇಳಿ ಭಾರವಾಗಿ 

ಭಯಬಿದ್ದು ಇನ್ನಷ್ಟು ಕತ್ತಲಿನೊಳಗೆ,

ಕತ್ತಲೂ ಹೆದರುವ ಕರಿಕೂಪದೊಳಗೆ

ಹೋಗಬೇಕೆಂದುಕೊಳ್ಳುತ್ತೇನೆ...



ಕಾರಣ, ನೂರಾರು ಸುಳ್ಳುಗಳೆಡೆಯಲಿ

ನನ್ನದೊಂದು ಸತ್ಯ ಬೆತ್ತಲಾಗಲು ಹೆಣಗುತ್ತಿದೆ,

ಆದರೆ,

ಮಿಥ್ಯದ ಹೊದಿಕೆಗಳನು ಸರಿಸುವುದಕ್ಕಿಂತಲೂ

ಅದರೊಳಗೆ ಹೂತು ಹೋಗುವುದು ಸರಳವೆಂದು,

ಕೂಪದೊಳಗೆ ನುಸುಳಿರುವೆನು ನಾನು;



ಈಗ ಹೆದರುತ್ತಿದ್ದೇನೆ

ಬೆಳಕಿನ ಸುಳಿವು ಸಿಕ್ಕಿತೆಂದು...

ಕತ್ತಲಿನೊಳಗೆ ಕರಗಿ

ಯಾರಿಲ್ಲವೆಂದು ಕೊರಗುವ ನಾನು,

ಹೆದರುತ್ತಿದ್ದೇನೆ ಬೆಳಕಿನ ಸುಳಿವು ಸಿಕ್ಕಾಗ...

-ಪಲ್ಲವಿ ಕಬ್ಬಿನಹಿತ್ಲು

 ಇಲ್ಲಿ ಕವನವನ್ನು ಆಲಿಸಿರಿ👈👈



WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM

👉👉👉👉SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE..

-KADUGUSUMA

(ವಿಶೇಷ ಪ್ರಕಟಣೆ:

ಇದೇ ಪ್ರಯತ್ನದಲ್ಲಿ ಇನ್ನೊಂದು ಪ್ರಯತ್ನಕ್ಕೆ ಕೈ ಹಾಕುತ್ತಿದ್ದೇವೆ. ನಮ್ಮ ಬ್ಲಾಗ್ ಓದುಗರಲ್ಲಿ ಬರೆಯುವವರೂ ಇದ್ದಾರೆ. ಅವರಿಗಾಗಿಯೇ ಒಂದು ದಿನದ ಪ್ರಕಟಣೆಯನ್ನು ಮೀಸಲಿಡುವ ಪ್ರಯತ್ನ. ಆಸಕ್ತಿ ಉಳ್ಳವರು ತಮ್ಮ ಕನ್ನಡ ಬರಹವನ್ನು 

kadugusumaofficial@gmail.com 

ಗೆ E-Mail   ಮಾಡಬಹುದು. ಆಯ್ದ ಬರಹಗಳನ್ನು ಪ್ರತಿ ಭಾನುವಾರ 'ಓದುಗರ ಕಾಲಂ' ನಲ್ಲಿ ಪ್ರಕಟಿಸುತ್ತೇವೆ.

ಧನ್ಯವಾದಗಳೊಂದಿಗೆ,

-ಕಾಡುಗುಸುಮ)



Comments

Post a Comment

Popular posts from this blog

DREAMS…

ಕಾಫಿಯ ಕಪ್ಪು

ಬಿಳಿ ಬದುಕು...