ಅತ್ತು ಹಗುರಾಗು ಮನಸೆ...
“ಭಾರದ ಕರಿ ಮೋಡ ಮಳೆ ಸುರಿಸಿ ಹಗುರಾಗುವಂತೆ, ಭಾರವಾದ ಮನಸ್ಸು ಕಣ್ಣೀರು ಹರಿಸಿ
ಹಗುರಾಗುತ್ತದೆ” ಎಂದು ಎಲ್ಲೋ ಓದಿದ ನೆನಪು. ಗಂಡು-ಹೆಣ್ಣಿನ ಒಳಗಿರುವ ಮನಸಿಗೆ
ಭೇದವಿಲ್ಲೆಂದರೂ ಅಳು ಎಂದಾಕ್ಷಣ ನೆನಪಾಗುವುದು ಹೆಣ್ಮಗಳು ಎಂದರೆ ಸುಳ್ಳಲ್ಲ! ಅಳುವ
ಹುಡುಗರನ್ನು ಕಂಡರೆ ಆತನದ್ದು ಹೆಂಗರಳು ಎನ್ನುವುದಿಲ್ಲವೇ ನಾವು! ಹೀಗೆ ಕಣ್ಣೀರಿಗೂ ಹೆಣ್ಣಿಗೂ
ಅವಿನಾಭಾವ ಸಂಬಂಧ, ಅವಳ ಬಾಳ ಹಂತ ಹಂತದಲ್ಲೂ ಜೊತೆಯಾಗಿರುವಂತೆ ಭಾಸವಾಗುತ್ತದೆ
ಈ ಅಳು!
ಹದಿಹರೆಯದ ಹೆಣ್ಮಗಳು ಹಳ್ಳಿಯಲ್ಲಿದ್ದರೆ ಬಣ್ಣದ ಕನಸುಗಳನ್ನು ಕಣ್ಣಲ್ಲಿ ತುಂಬಿಕೊಂಡು
ಮನೆಯಿಂದ ಹೊರಬರಲಾಗದೆ, ಒಳಗುಳಿಯಲೂ ಮನಸೊಪ್ಪದೆ ಕಣ್ಣೀರು ಸುರಿಸಿದರೆ, ಪೇಟೆಯ
ಬೆಡಗಿಯರು ಪ್ರೀತಿ-ಪ್ರೇಮದ ಸುಳಿಗೆ ಸಿಲುಕಿಯೋ, ಉದ್ಯೋಗಿ ತಂದೆ-ತಾಯಿಗೆ ತಮ್ಮ ಬಗ್ಗೆ
ಕಾಳಜಿಯಿಲ್ಲವೆಂದು ಕೊರಗುತ್ತಾ ಅಳುತ್ತಾರೆ. ಎಮ್ಮ ಮನೆಯಂಗಳದಿ ಬೆಳೆದ ಹೂವನ್ನು
ಧಾರೆಯೆರೆಯುವೆವು ಎನ್ನುವಾಗ ಮದುಮಗಳ ಜೊತೆ ಹೆತ್ತವ್ವನ ಕರುಳು, ಅಪ್ಪನ
ಎದೆಯಲ್ಲಡಗಿರುವ ಪ್ರೀತಿಯೂ ಅಳುವುದಿಲ್ಲವೇ? ಎಷ್ಟಾದರೂ ಎಳೆಯ ಕಾಲಲ್ಲಿ ಗೆಜ್ಜೆ ಕಟ್ಟಿ
ಕುಣಿಯುತಿದ್ದ ಮಗಳು ತವರ ತೊರೆವ ಹೊತ್ತಿಗೆ ಕಣ್ಣಂಚು ಒದ್ದೆಯಾಗದಿದ್ದೀತೇ?!
ಅಳುವೆಂದರೆ ಬರೀ ನೋವಲ್ಲ; ಸಂತಸದ, ಭಾವೋದ್ವೇಗದ ಅಭಿವ್ಯಕ್ತಿಯೂ ಹೌದು, ಅತ್ತಿದ್ದ
ಮದುಮಗಳ ಬದುಕಲ್ಲಿ ಮೂಡುವ ಹೊಸ ಬೆಳಗಿನ ಹಾಗೆ, ಸಾವಿನ ಮುಂದಿರುವ ಹೊಸ ಬದುಕಿನ
ಹಾಗೆ, ಮುಳ್ಳಿನ ಗಿಡದಲರಳುವ ಗುಲಾಬಿಯ ಹಾಗೆ, ಕತ್ತಲೆಯು ಮರೆಯಾಗಿ ಮೂಡುವ ಹಗಲಿನ
ಹಾಗೆ...
ಅಳುವಿನ ಮತ್ತೊಂದು ವಿಶಿಷ್ಟತೆಯೆಂದರೆ, ವಿಪರೀತ ಸಂದರ್ಭಗಳಲ್ಲಿ ಜೊತೆಯಾಗುವುದು:
ಹುಟ್ಟಿದ ಮಗುವಿನ ಅಳು ಕೇಳದಿದ್ದಾಗಲೂ ಅಳುತ್ತೇವೆ; ಕೇಳಿದಾಗಲೂ ಅಳುತ್ತೇವೆ.
ಅಸಾಧ್ಯವೆಂದುಕೊಂಡದ್ದು ಸಾಧ್ಯವಾದಾಗಲೂ ಅತ್ತು ಬಿಡುತ್ತೇವೆ. ಅಲ್ಲಿ ವಿಫಲರಾದಾಗಲೂ
ಕಣ್ಣೀರು ಹಾಕದಿರುತ್ತೇವೆಯೇ! ನಾವು ಹೊಸ ದಾರಿಯಲ್ಲಿ ಹೆಜ್ಜೆ ಹಾಕಿದಾಗ ಒಬ್ಬಂಟಿಯಾದೆವಲ್ಲ
ಎಂದು ಮರುಗುತ್ತೇವೆ, ಎಲ್ಲರ ಜೊತೆಯಲ್ಲಿಯೇ ನಡೆದಾಗ ವಿಶಿಷ್ಟರಾಗಲಿಲ್ಲವಲ್ಲ ಎಂದು
ಪರದಾಡುತ್ತೇವೆ. ಹುಟ್ಟು- ಸಾವು, ನೋವು-ನಲಿವು, ಸೋಲು-ಗೆಲುವು ಎಲ್ಲದರೊಡನೆ
ಜೊತೆಯಾಗುವ ಈ ಭಾವ ವಿಚಿತ್ರವಾದದ್ದು ಎಂದರೆ ತಪ್ಪಲ್ಲವೇನೋ!
ಸಿಹಿ-ಕಹಿಗಳೆರಡೂ ಇದ್ದರೆ ಬದುಕು ಸೊಗಸು, ಸಿಹಿಯನ್ನು ಸಿಹಿಯಾಗಿಸುವುದು ಕಹಿಯೇ ತಾನೆ!
ಬದುಕನ್ನು ಬಾಳಬೇಕೆಂದಾಗ ಎಲ್ಲ ಭಾವಗಳು ಹದವಾಗಿ ಬೆರೆತಾಗ ಮಾತ್ರ ಸಾಧ್ಯ... ಕಣ್ಣೀರು
ಸುರಿಸುವ ಪುಟ್ಟ ಕಂಗಳು ಜಗತ್ತನ್ನೇ ನಮ್ಮೆದುರು ತೆರೆದಿಡುತ್ತವೆ. ಹೀಗಿರುವಾಗ ಅಳುವೆವೆಂದಾಗ
ಒಳಗಿಂದ ಕುಗ್ಗಿ ಟೊಳ್ಳಾಗಿದ್ದೇವೆ ಎಂದು ಭಾವಿಸಿದರೆ ತಪ್ಪು... ಆ ಹೊತ್ತು, ಎದೆಯೊಳಗಿನ ನೋವು
ಕರಗಿ ಖಾಲಿಯಾಗುವ ಹೊತ್ತು; ಭಾವನೆಗಳಿಗೆ ಶಬ್ದಗಳು ಹೊಂದಿಕೆಯಾಗದಿದ್ದಾಗ ಅಂತರಂಗದ
ದುಗುಡವನ್ನು ಹೊರ ಹಾಕುವ ಹೊತ್ತು; ಕಾಡುತ್ತಲೇ ಮನದೊಡನೆ ಕಾದಾಡುವ ನೆನಪುಗಳನ್ನು
ತೊಳೆದುಹಾಕುವ ಹೊತ್ತು; ಅಸಹಾಯಕತೆಯ ಕೂಪದಿಂದ ಸಹಾಯಕ್ಕಾಗಿ ಹೊರಗೆ ಕೈ ಚಾಚುವ
ಹೊತ್ತು; ಸಂತಸದ ಕ್ಷಣಗಳನ್ನು ನಮ್ಮೊಳಗಿಳಿಸಿಕೊಳ್ಳುವ ಹೊತ್ತು; ನಾವು ನಾವಾಗಿಯೇ
ನಮಗಾಗಿಯೇ ಬಾಳುವ ಹೊತ್ತು...
ಎಲ್ಲ ದುಗುಡಗಳನ್ನು ಹೊರ ಹಾಕಿ, ಗೆಲುವಿನ ಅಹಂ ಕರಗಿ
ಸಾರ್ಥಕತೆಯ ಭಾವನೆ ಹುಟ್ಟಿ ಇನ್ನಷ್ಟು ಗಟ್ಟಿಯಾಗುವ ಈ ಹೊತ್ತು ನಮ್ಮ ಆತ್ಮ ಗೌರವಕ್ಕೆ
ಕುತ್ತಾಯಿತೆಂದುಕೊಂಡರೆ ತಪ್ಪಲ್ಲವೆ?!
-ಪಲ್ಲವಿ ಕಬ್ಬಿನಹಿತ್ಲು
WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM
👉👉👉👉SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE..
-KADUGUSUMA
nice lines...🙌🏻👍🏻👍🏻
ReplyDeleteWow super lines friend
Deleteಚಂದದ ಬರಹ ತಂಗೆ
Deleteಧನ್ಯವಾದಂಗೊ
Delete🙌🏻🙌🏻
ReplyDeletenice lines...🙌🏻👍🏻👍🏻
ReplyDeleteAww...😒 😒
ReplyDeleteAww...😢
ReplyDeleteThank You
DeleteGood
ReplyDeletespr
ReplyDeleteThank You
DeleteNice lines keep it up
ReplyDeleteThank You
Deletesuperb heart touching lines ...all the best....
ReplyDeleteIt's amazing
ReplyDeleteThank You
DeleteIt's amazing
ReplyDeleteI like the title Kaadugusum, so special,saalugalu saha.
ReplyDeleteThank You for your appreciation, it means a lot to us
DeleteWww... Nice lines😍😍😍
ReplyDeleteThank you so much for your support and kind words
Delete👌
ReplyDeleteThank You
Delete👍🙏
ReplyDeleteThank You🙏🙏
DeleteNice
ReplyDeleteThank you so much
Delete👌👍
ReplyDeleteSuper akka😢.....
ReplyDeleteKeep going...
All the best .
Thank You
DeleteSuper...
ReplyDeleteFrom: Adishree B K
Dakshina Kannada
Thank You
Delete