(ವಿ)ಚಿತ್ರ ಹನಿಗಳು-3

 

----------------------1-------------------------



ಎಲ್ಲವನ್ನೂ ತೊರೆದು ಸಾಧಕನಾಗಬೇಕು

ಎಂದಾತನಿಗೆ ಅಚ್ಚರಿ ಹುಟ್ಟಿಸಿದ್ದು;

ಬದುಕಿನ ಸಂತೆಯಿಂದ ಓಡಿ ಹೋಗುವುದು,

ಸಾಧನೆಯೇ? ಎಂಬ ಪ್ರಶ್ನೆ!!


----------------------2-------------------------



ನನ್ನಿರದಿರುವಿಕೆ ನಿನಗೊಮ್ಮೆ

ಕಾಡಿದರೂ ಸಾಕು, ಗೆಳತಿ,

ಈ ಕಾಯುವಿಕೆ ಸಾರ್ಥಕ!

----------------------3-------------------------



ಆಕಾಶಕೆ ಏಣಿ ಹಾಕುವ,

ಆಸೆ ಹೊತ್ತ ಮನಸಿಗೇನು ಗೊತ್ತು?

ವಾಸ್ತವವಾಗಿ ಆಕಾಶ ಖಾಲಿ ಎಂದು!!

----------------------4-------------------------



ಅಳೆದು ಕೊಡುವಂತಹದ್ದೇನೂ,

ನನ್ನಲಿಲ್ಲ ಗೆಳತಿ,

ಇದ್ದೊಂದು ಹೃದಯದ ಮಹಲಿಗೂ,

ಈಗ ನೀನೇ ಒಡತಿ!!

----------------------5-------------------------


ಚೆಂದುಟಿಗಳ ಮರೆಯಲ್ಲಿ,
ನಗುವನು ಅಡಗಿಸುವುದೇಕೆ ಗೆಳತಿ?!
ನಕ್ಕುಬಿಡು ಒಮ್ಮೆ;
ಬಿದ್ದ ಮುತ್ತುಗಳನೆತ್ತಿಕೊಂಡು,
ಸಿರಿವಂತನಾಗುತ್ತೇನೆ ನಾನು!


-ಪಲ್ಲವಿ ಕಬ್ಬಿನಹಿತ್ಲು


Comments

Post a Comment

Popular posts from this blog

THE LONGING…

One-sided!

Winter Inside!