ಮುಖವಾಡಗಳು



ಮುಖ ಮರೆಸಿ ಓಡಾಡುವುದು ತಪ್ಪಂತೆ;

ಮುಖವಾಡದೊಳಗೇ ಬದುಕುವವರು ನಾವು!!


ಮುಖವಾಡಗಳು ಒಂದಾಗಿ-ಎರಡಾಗಿ-ನೂರಾಗಿ,

ನಾನು ನೀನಾಗಿ, ನೀನು ಏನೋ ಆಗಿ!

ನಾವಲ್ಲದ ‘ನಮ್ಮನ್ನು’ ತೋರಿಸುವ ಹಂಬಲದಲ್ಲಿ,

ಮುಖವಾಡದೊಳಗೇ ಬದುಕುವವರು ನಾವು!!


ಕಲೆಯಿರುವ ಮುಖಗಳಿಗೆ,

ರಂಗಿನ ಹೊಳಪಿನ ಮುಖವಾಡ!!

ಕಪ್ಪು ಮನಸ್ಸಿನ ಧುರೀಣರಿಗೆ,

ಶ್ವೇತ ವಸ್ತ್ರದ ಮುಖವಾಡ!!

ಕಾಡ ಕಡಿದು ಕಟ್ಟಿದ ಮನೆಗಳ ಗೋಡೆಗಳಿಗೆ,

ಹಸಿರು ಹುಲ್ಲಿನ, ಹೂವಿನ ಮುಖವಾಡ!!

ಕೊಳೆತು ನಾರುವ ಮನಸುಗಳಿಗೆ,

ಸುಗಂಧಿತ ಲೇಪನದ ಸುವಾಸನೆಯ ಮುಖವಾಡ!!

ತನ್ನಲ್ಲಿಲ್ಲದ ಗುಣಗಳಿಗೆ,

ಲಕ್ಷ್ಮೀಬಲದ ಮುಖವಾಡ!!


ಅತ್ತು ಸೊರಗಿದ ಜೀವಗಳಿಗೆ,

ನಗುಮೊಗದ ನಲಿಕೆಯ ಮುಖವಾಡ!!

ಚಿತೆಯ ಸಾಲಿನಲ್ಲಿ ನಿಂತಿದ್ದರೂ,

ಯೌವನದ ಭ್ರಮೆಯ ಮುಖವಾಡ!!

ಅಸಭ್ಯತೆಯೇ ಮೈವೆತ್ತಿ ನಿಂತಿದ್ದವರಿಗೂ,

ಸಭ್ಯತೆಯ ಸುಂದರ ಮುಖವಾಡ!!

ಭೇಟಿಯಾದ ಪ್ರತಿಯೊಬ್ಬರಿಗೊಂದೊಂದರಂತೆ,

ನೂರಾರು ಮುಖವಾಡಗಳಲ್ಲೇ ಬದುಕು;

“ನಾವಲ್ಲದ ‘ನಮ್ಮನ್ನು’ ತೋರಿಸುವುದಕ್ಕಾಗಿ”

ಹಮ್ಮು-ಬಿಮ್ಮಿನ ತೋರಿಕೆಯ ಮುಖವಾಡ;

ಕೃತ್ರಿಮತೆಯ ಮಡಿಲಲ್ಲಿ ಸಹಜತೆಯ ಮುಖವಾಡ;

ಕ್ರೂರತೆಯ ಮರೆಮಾಚುವ ಸ್ಪಂದನೆಯ ಮುಖವಾಡ;

ಸ್ವಾರ್ಥದ ಪರದೆಯ ಮುಂದೆ ನಿಸ್ವಾರ್ಥದ ಮುಖವಾಡ;

ಶೂನ್ಯವಾಗಿದ್ದರೂ ಪರಿಪೂರ್ಣತೆಯ ಮುಖವಾಡ!!

ಆದರೂ, ಮುಖ ಮರೆಸಿ ಓಡಾಡುವುದು ತಪ್ಪಂತೆ!!

ಮುಖವಾಡದೊಳಗೇ ಬದುಕುತ್ತಿರುವವರೊಳಗಿನ,

ಮತ್ತೊಂದು ಮುಖವಾಡದ ಮಾತು!!


-ಪಲ್ಲವಿ ಕಬ್ಬಿನಹಿತ್ಲು



WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM

👉👉👉👉SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE..

-KADUGUSUMA

(ವಿಶೇಷ ಪ್ರಕಟಣೆ:

ಇದೇ ಪ್ರಯತ್ನದಲ್ಲಿ ಇನ್ನೊಂದು ಪ್ರಯತ್ನಕ್ಕೆ ಕೈ ಹಾಕುತ್ತಿದ್ದೇವೆ. ನಮ್ಮ ಬ್ಲಾಗ್ ಓದುಗರಲ್ಲಿ ಬರೆಯುವವರೂ ಇದ್ದಾರೆ. ಅವರಿಗಾಗಿಯೇ ಒಂದು ದಿನದ ಪ್ರಕಟಣೆಯನ್ನು ಮೀಸಲಿಡುವ ಪ್ರಯತ್ನ. ಆಸಕ್ತಿ ಉಳ್ಳವರು ತಮ್ಮ ಕನ್ನಡ ಬರಹವನ್ನು 

kadugusumaofficial@gmail.com 

ಗೆ E-Mail   ಮಾಡಬಹುದು. ಆಯ್ದ ಬರಹಗಳನ್ನು ಪ್ರತಿ ಭಾನುವಾರ 'ಓದುಗರ ಕಾಲಂ' ನಲ್ಲಿ ಪ್ರಕಟಿಸುತ್ತೇವೆ.

ಧನ್ಯವಾದಗಳೊಂದಿಗೆ,

-ಕಾಡುಗುಸುಮ)

Comments

  1. Nivu aieke maadida chitragalu nimma kavitheyannu innu sundaravagisive, keep writing 👍

    ReplyDelete
  2. ನಿಜ ಮನುಷ್ಯನು ಬದುಕುತ್ತಿರುವುದು ಮುಖವಾಡದ ಮೇಲೆ. ... ಸತ್ಯಕ್ಕೆ ಕನ್ನಡಿ ಈ ಕವನ👍👍👏👏

    ReplyDelete

Post a Comment

Popular posts from this blog

ನೀನೊಂದು ಮಾತು ಹೇಳಿದ್ದಿದ್ರೆ?!

ಬೆಳೆಯುತಿದ್ದೇವೆ ಎಂದರೆ ಅಳಿಯುತ್ತಿರುವುದಲ್ಲವೇ?!