ಬೆತ್ತಲೆ ಹೆಣ್ಣು (ಬಯಲಿನ ಬೆಳಕಲ್ಲಿ ನಿಂತಾಗ...)

 (ಹೆಣ್ಣಿನ ಅಂತರಂಗದ ಅರಿಕೆ)





ನಿಮ್ಮೆದುರಲ್ಲೇ ಬೆತ್ತಲಾದರೂ ನಾನು
ಹೊರಬೀಳಲಿಲ್ಲವಲ್ಲ ಒಂದಕ್ಷರವೂ ಬಾಯಿಂದ?!


ತುಂಡು ಬಟ್ಟೆಯಾಗಿದ್ದರೇನಾಯ್ತು, 
ಮಾನದ ಅರಿವೆ ಹರಿದಿರಲಿಲ್ಲವಲ್ಲ?!!
ತೊಂಡೆತುಟಿಗಳಿಗೆ ಬಣ್ಣ ಹಚ್ಚಿದರೇನಾಯ್ತು,
ಭಾವಗಳೆಲ್ಲ ತಿಳಿಯಾಗಿ-ಬಿಳಿಯಾಗಿ ಇತ್ತಲ್ಲ?!!

ಮೈಯೊಡ್ಡಿದ್ದಿಲ್ಲ ಪ್ರೇಮದ ಮತ್ತಲ್ಲಿ;
ಮೈಮಾರಿದ್ದಿಲ್ಲ ಕಾಂಚಾಣದಾಸೆಯ ಕುರುಡಲ್ಲಿ;
ಮೈಮಾಟ ತುಳುಕಿಸಿಲ್ಲ ಸೌಂದರ್ಯ ಮೆರೆವಲ್ಲಿ;
ಆದರೂ ಬೆತ್ತಲೆಯಾಗಿಯೇ ಬಿಟ್ಟೆ ನಾ ಬಯಲಲ್ಲಿ!!




ಇವರಿಬ್ಬರೆಡೆಯಲ್ಲಿ ಮತ್ತೊಬ್ಬಳಿರುವೆನು,
ಅಮ್ಮನ ತೋಳತೆಕ್ಕೆಯಲಿ ಬೆಚ್ಚನೆ ಮಲಗುತ್ತಾ;
ಕಂಗಳ ಹೊಳಪೊಡನೆ ಕಿಲ-ಕಿಲನೆ ನಗುತ್ತಾ;
ನಲುಗಿ ಮರೆಯಾದೆ ನಾನೂ ಅವರ ಕೈಗಳಲಿ ನಲುಗುತ್ತಾ!!


ಹಳೆ ಕಥೆಯಿದಲ್ಲ, ದಿನ-ದಿನದ ವ್ಯಥೆಯು;
ಒಂದೆರಡು ದಿನಗಳೊಳಗೆ ದೀಪದ ಬೆಳಕಿನಲಿ,
ಸುಟ್ಟು ಮರೆಯಾಗುವಂಥವು!!
ಹತ್ತಾರು ಬಾಯಿಗಳಿಗೆ ಕರೆಯಾಗುವಂಥವು!!




ಈಗಲೂ ಬೆತ್ತಲಾಗಿ ನಿಂತಿರುವೆನು ಬಯಲಲಿ,
ಸುಮ್ಮನಾಗದಿರಿ ನೀವ್ಯಾರು:
ಬಟ್ಟೆ ಹೊಲಿಯುವವರೆಗೆ;
ಅಥವಾ ನೀವೂ ಬೆತ್ತಲಾಗುವವರೆಗೆ...
ಸುಮ್ಮನಾಗದಿರಿ ನೀವ್ಯಾರೂ...

-ಪಲ್ಲವಿ ಕಬ್ಬಿನಹಿತ್ಲು

WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM

👉👉👉👉SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE..

-KADUGUSUMA

(ವಿಶೇಷ ಪ್ರಕಟಣೆ:

ಇದೇ ಪ್ರಯತ್ನದಲ್ಲಿ ಇನ್ನೊಂದು ಪ್ರಯತ್ನಕ್ಕೆ ಕೈ ಹಾಕುತ್ತಿದ್ದೇವೆ. ನಮ್ಮ ಬ್ಲಾಗ್ ಓದುಗರಲ್ಲಿ ಬರೆಯುವವರೂ ಇದ್ದಾರೆ. ಅವರಿಗಾಗಿಯೇ ಒಂದು ದಿನದ ಪ್ರಕಟಣೆಯನ್ನು ಮೀಸಲಿಡುವ ಪ್ರಯತ್ನ. ಆಸಕ್ತಿ ಉಳ್ಳವರು ತಮ್ಮ ಕನ್ನಡ ಬರಹವನ್ನು 

kadugusumaofficial@gmail.com 

ಗೆ E-Mail   ಮಾಡಬಹುದು. ಆಯ್ದ ಬರಹಗಳನ್ನು ಪ್ರತಿ ಭಾನುವಾರ 'ಓದುಗರ ಕಾಲಂ' ನಲ್ಲಿ ಪ್ರಕಟಿಸುತ್ತೇವೆ.

ಧನ್ಯವಾದಗಳೊಂದಿಗೆ,

-ಕಾಡುಗುಸುಮ)

Comments

Post a Comment

Popular posts from this blog

ನೀನೊಂದು ಮಾತು ಹೇಳಿದ್ದಿದ್ರೆ?!

ಬೆಳೆಯುತಿದ್ದೇವೆ ಎಂದರೆ ಅಳಿಯುತ್ತಿರುವುದಲ್ಲವೇ?!

ಮುಖವಾಡಗಳು