ಅಸ್ತಿತ್ವವೇ ಇಲ್ಲದ ಅಪರಾಧಿ!!




ತಿಳಿಯಲೇ ಇಲ್ಲ 

ಬದುಕಿನ ಓಟದಲ್ಲಿ!!

ಅದಾಗಲೇ ತನ್ನ ಗುರುತನ್ನು ಕಳೆದುಕೊಂಡಾಗಿತ್ತು...

ಕಪಟ ಸಂಬಂಧಗಳನು ಕಳಚಿಕೊಳ್ಳುವ ಪ್ರಯತ್ನದಲಿ;

ಎಲ್ಲರನ್ನೂ ತೃಪ್ತಿಗೊಳಿಸುವ ಹುಚ್ಚು ಆಕಾಂಕ್ಷೆಯಲಿ;

ಷಡ್ಯಂತ್ರಗಳ ವ್ಯೂಹದಿಂದ ಹೊರಬರುವ ಪ್ರಯತ್ನದಲಿ;



ಮುಖವಾಡಧಾರಿಗಳ ಹಿಡಿತದಿಂದ ಪರಾರಿಯಾಗುವ ಪ್ರಯಾಸದಲಿ;

ದ್ವೇಷ-ಸಾಧನೆಯ ಹುಚ್ಚು ಹಠದಲಿ;

ಅದಾಗಲೇ ತನ್ನನ್ನು ಕಳೆದುಕೊಂಡಾಗಿತ್ತು!




ಈಗ ಮೌನಕೆ ಶರಣಾಗಿಹೆನು...

ತನ್ನತನದ ಹುಡುಕಾಟದಲ್ಲಿರುವೆನು...

ಆತ್ಮದ ಕಟಕಟೆಯಲಿ ಆರೋಪಿಯಾಗಿ ನಿಂತಿರುವೆನು!!

ತನ್ನ ಕರ್ಮಗಳನು ಸರಿಯೆಂದು ಸಾಬೀತುಪಡಿಸುವ 

ಹುಚ್ಚು ಪ್ರಯತ್ನದಲ್ಲಿರುವೆನು...



ಕ್ಷಣಗಳು ಉರುಳುತಲಿದೆ...

ಮನದ ಹೊಯ್ದಾಟ ಮುಂದುವರೆದಿದೆ...

ಆದರೆ ಸೋತಿರುವೆನು!!

ತನ್ನತನವನೇ ಕಳೆದುಕೊಂಡಿರುವ ಅಪರಾಧಿಯಾಗಿರುವೆನು;

ಅಸ್ತಿತ್ವವೇ ಇಲ್ಲದ ಅಪರಾಧಿಯಾಗಿರುವೆನು!!




ಇದೀಗ ಹೊರಟಿರುವೆನು...

ತನ್ನತನದ ಜಾಡ ಹಿಡಿದು;

ಏಕೆಂದರೆ, ಇನ್ನೂ ಮನದ ಮೂಲೆಯಲಿ ಹಸಿರಾಗಿಹುದು

ಹೊಸ 'ನನ್ನನ್ನು' ರೂಪಿಸುವ ಆಸೆ,

ಹೊಸ ಅಸ್ತಿತ್ವದ ಕನಸು...



                                                                                 -ಪಂಚಮಿ ಕಬ್ಬಿನಹಿತ್ಲು

Comments

Post a Comment

Popular posts from this blog

THE LONGING…

One-sided!

Winter Inside!