ಶೀರ್ಷಿಕೆಯಿಲ್ಲದ ಕವನ

 

ಒಂದಾದ ಮೇಲಿನ್ನೊಂದರಂತೆ ಕವನ ಬರೆದೆ

ಅದು ಬೇಡ -ಇದು ಬೇಡವೆಂದು ಕೊರೆದೆ

ಎಲ್ಲವನು ಕೂಡಿ ಕಳೆದು ಇದ ಗೀಚಿದೆ

 

ಎಷ್ಟು ಬರೆದರೂ ಶೀರ್ಷಿಕೆ ಕೊಡಲಾರೆನದಕೆ

ಜೀವ ತುಂಬ ಹೊರಟರೂ ತೃಪ್ತಿಯಾಗಲಿಲ್ಲೆನಗೆ

ಅದರಿಂದಾಗಿ ಶೀರ್ಷಿಕೆಯೇ ಬೇಡವೆಂದುಕೊಂಡೆನಿದಕೆ

 

ಭಾವ-ಜೀವಗಳ ಸಮ್ಮಿಳಿಸಿ

ಅದಕೆ ಶಬ್ದಗಳನಸಿ ಕುಳ್ಳಿರಿಸಿ,

ಪುಸ್ತಕದಿ ರಂಗಿಸಿದೆ ಶಾಯಿ ಸುರಿಸಿ

 

ಪೆನ್ನನು ಮಸಿಗೆ ಅದ್ದಿ

ಕವನವನು ತೀಡಿದೆ ತಿದ್ದಿ

ಮತ್ತೆ ನೋಡಿದರೆ ಮನೆ ತುಂಬಾ ರದ್ದಿ!!

 




ಅಮ್ಮ ಬಂದಳು ಇದ ನೋಡಿ

ಕೈಗೆ ಕೊಟ್ಟಳು ಹಿಡಿಸೂಡಿ;

ಸಾಕಪ್ಪಾ ಸಾಕು ಈ ಕವನದ ಮೋಡಿ!

 

ಇಲ್ಲಿಗೆ ಮುಗಿಯಿತು ಆ ದಿನದ ಕಥೆ,

ನನ್ನ ರಸಮಯ ವ್ಯಥೆ; ಕೇಳಿದಳಮ್ಮ ಕೊನೆಗೆ

'ಶೀರ್ಷಿಕೆಯಿಲ್ಲದ ಕವನ ರಚನೆ' ಮುಗಿಯಿತೆ?

 

-ಪಲ್ಲವಿ ಕಬ್ಬಿನಹಿತ್ಲು


(ಇದು ನಾನು ಬರವಣಿಗೆಯ ಪ್ರಯತ್ನಕ್ಕೆ ಕೈ ಹಾಕಿದ ಹೊಸದರಲ್ಲಿ ಬರೆದಿದ್ದ ಕವಿತೆ... ಇದೀಗ ಓದುವಾಗ ಉತ್ತಮ ಎಂದೆನಿಸಿದಿದ್ದರೂ ಮುಖದಲ್ಲಿ ನಗು ಮೂಡಿಸಿದ್ದು ಮಾತ್ರ ಸತ್ಯ... ಇದು ನಿಮಗೆ ಹೇಗನ್ನಿಸಿತು ಎಂದು ಮುಕ್ತವಾಗಿ ಕಾಮೆಂಟ್ ಮಾಡಿ ಅಥವಾ Reaction ಮೂಲಕ ತಿಳಿಸಿ)

 


WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM

👉👉👉👉SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE..

-KADUGUSUMA

Comments

  1. 😃😃😀 nannadu haage aagide akka bredashtu page wast aagthide.. .Super👏👏

    ReplyDelete
    Replies
    1. All the best... Hope that would lead you to write a masterpiece

      Delete
  2. ಚೆನ್ನಾಗಿದೆ.....ಹೀಗೆಯೇ ಮುಂದುವರೆಸಿರಿ...

    ReplyDelete
  3. ಸೂಪರ್ ಅಕ್ಕಾ 😂😁😁😁👍👍👍

    ReplyDelete

Post a Comment

Popular posts from this blog

DREAMS…

ಕಾಫಿಯ ಕಪ್ಪು

ಬಿಳಿ ಬದುಕು...