ಹೀಗಾಗುವುದುಂಟು...



ಒಮ್ಮೊಮ್ಮೆ ನಿನ್ನ ಮೇಲಿನ ಪ್ರೀತಿ,

ಹನಿ-ಹನಿಯಾಗಿ ತೊಟ್ಟಿಕ್ಕುವುದುಂಟು...

ಮತ್ತೊಮ್ಮೆ, ನಿನ್ನ ನೆನಪಾಗಿ ಕಂಗಳಿಂದ

ಜಲಧಾರೆಯಾಗಿ ಧುಮ್ಮಿಕ್ಕುವುದುಂಟು...

ಮನಸಿನ ಹಸಿರು ಹಾಸಿನ ಮೇಲೆ

ಇಬ್ಬನಿಯಾಗಿ ಕುಳಿತು ಪ್ರೇಮರವಿಯ ಕಿರಣಕ್ಕೆ

ಪ್ರಜ್ವಲಿಸಿ ಹೊಳೆಯುವುದುಂಟು...




ನೆನಹುಗಳಲೆಗಳು ಭೋರ್ಗರಿಸಿ ಮೇಲೆದ್ದು

ಎದೆಯ ಮೂಲೆ-ಮೂಲೆಯನು ತೊಳೆಯುವುದುಂಟು...

ಅಲೆಗಳು ಹೊತ್ತು ತಂದ ನೀರು ಅಲ್ಲಲ್ಲಿ ನಿಂತು

ನನ್ನೆಲ್ಲ ಸಮಯವನು ಕಳೆಯುವುದುಂಟು

ಗೆಳತಿ, ನನ್ನ ಬದುಕಿನಿಂದ ನಿನ್ನಿರುವಿಕೆಯ

ಹೆಮ್ಮರವ ಬುಡದಿಂದ ಕಿತ್ತೆಸೆಯುವುನೆಂದರೆ

ನಿನ್ನ ಮುಗುಳ್ನಗುವಲುದುರುವ ಮುತ್ತುಗಳು

ಮನದ ತುಂಬಾ ಚೆಲ್ಲಿ ಕುಣಿದಾಡಿ

ನಾನು ನರಳಾಡುವುದುಂಟು...


ಒಮ್ಮೊಮ್ಮೆ ನಿನ್ನ ಮೇಲಿನ ಪ್ರೇಮ

ಜಲಧಾರೆಯಾಗಿ ಧುಮ್ಮಿಕ್ಕುವುದುಂಟು...

ಮತ್ತೊಮ್ಮೆ ಸಿಹಿ-ಕಹಿ ನೆನಪುಗಳು

ಹನಿ-ಹನಿಯಾಗಿ ತೊಟ್ಟಿಕ್ಕುವುದುಂಟು...


-ಪಲ್ಲವಿ ಕಬ್ಬಿನಹಿತ್ಲು


WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM

👉👉👉👉SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE..

-KADUGUSUMA

Comments

  1. Replies
    1. 😍😍😍 Thank You for your whole-hearted support dear

      Delete
  2. Replies
    1. Thank You so much for keep encouraging us to come up with new and unique thoughts...

      Delete
  3. Awesome dear ... First 7 line really nice . 👍😍👏👏🙏

    ReplyDelete
  4. ಪದಗಳ ಜೋಡಣೆ ಅದ್ಭುತವಾಗಿದೆ..ಎರಡು ಮೂರು ಸಲ ಒದಬೇಕಾಯಿತು ಅರ್ಥವನ್ನು ಗ್ರಹಿಸಲು...

    ReplyDelete
  5. Amazing...🥰
    -adishree B K
    JNV mangaluru

    ReplyDelete

Post a Comment

Popular posts from this blog

THE LONGING…

One-sided!

Winter Inside!