ಕೊನೆಯ ಅನುಮತಿ...

 


ವನು ಇಷ್ಟವಾಗಿಯೇ ಆಕೆ ಆತನಿಗೆ ತನ್ನ ತನು-ಮನವನ್ನು ಆವರಿಸಿಕೊಳ್ಳಲು ಅನುಮತಿಸಿದ್ದಳು. ಹಿಂದೆ-ಮುಂದೆ ಯೋಚಿಸದೆ ತೆಗೆದುಕೊಂಡ ತೀರ್ಮಾನವಂತು ಅಲ್ಲ, ಹೀಗಿರುವಾಗ ತನ್ನಿಷ್ಟದಿಂದಾದ ಕಷ್ಟ-ನಷ್ಟದ ಲೆಕ್ಕಾಚಾರ ಹಾಕುವಾಗ ಸಂಕಟವಾಗದಿರುತ್ತದೆಯೇ?!

ಇದೀಗ ಎಂಟು ವರ್ಷಗಳ ಸಂಸಾರದ ಅನಂತರ ನನ್ನ ಬಾಳಿಗೆ ದಳ್ಳುರಿಯಾದವಳು ನೀನು ಎಂದ ತನ್ನ ಹೃದಯದೊಡೆಯನ ಮಾತಿಗೆ ಏನೆಂದಾಳು?!

ಅವನ ಮಾತಿಗೆ ಕಟ್ಟುಬಿದ್ದು ಎಂಟು ವರ್ಷಗಳ ಹಿಂದೆ, ತನ್ನ ತಂದೆ-ತಾಯಿ, ಬಂಧು-ಬಳಗ ಎಲ್ಲವನ್ನೂ, ಎಲ್ಲರನ್ನೂ ತೊರೆದು ಬಂದ ತಾನು, ತನ್ನುಸಿರಲ್ಲಿ ಉಸಿರಾಗಿ ಒಳಗಿಳಿವವನ ಬದುಕನ್ನು ಬರಡಾಗಿಸಿದ್ದು ತಾನೆಂಬ ಒಂದು ಮಾತು ಅವಳ ಅಸ್ತಿತ್ವದ ಇರುವನ್ನೇ ಗೆದ್ದಲಿನಂತೆ ಇಂಚಿಂಚಾಗಿ ಕೊರೆದು ಟೊಳ್ಳಾಗಿಸಿತು, ಅದೂ ಸೆಕೆಂಡುಗಳಲ್ಲಿ! ಖಾಲಿ ಕೈಯ ಯೋಚನೆಯಿಲ್ಲದ ಹಾಗೆ ಗಾಣದೆತ್ತಿನ ಹಾಗೆ ಮನೆಯಲ್ಲಿ, ಮನೆಗಾಗಿ ದುಡಿದವಳನ್ನು ಒಂದು ದಿನ  ಬಡತನದ ಭಾರ ಕುಗ್ಗಿಸಿರಲಿಲ್ಲ; ಆದರೆ ನಾಲಗೆಯ ಅಲಗಿನ ಹರಿತ ಆತ್ಮಸ್ಥೈರ್ಯವನ್ನೇ ಹೋಳಾಗಿಸಿತು... ಜೋಡಿಸಲಾದೀತೆ ಅವುಗಳನ್ನು?! 

ತನ್ನ ಮನದಾಲಯದ ದೇವತೆಯಾಗಿದ್ದ ಜೀವ ಗರ್ಭಗುಡಿಯ ಹೊಸ್ತಿಲನ್ನು ಅಸಹ್ಯವೆಂಬಂತೆ ತಿರಸ್ಕರಿಸಿ ಇನ್ನೊಂದು ಬಾಳ ಬೆಳಕಾಗುವ ಆಸೆ ಹೊತ್ತು ನಿಂತಿರುವನು... ಆಕೆಯ ಬದುಕಿಗೆ ಹೆಜ್ಜೆಯಿಡುವಾಗ ಅನುಮತಿ ಕೇಳಿದ್ದಾತನಿಗೆ, ಇಂದು ಹೇಳಿ ಹೋಗುವ ಸೌಜನ್ಯತೆಯೂ ಇಲ್ಲವಾದಾಗ ಹೇಗೆ ನರಳಿರಬಹುದು ಆಕೆ?! 

ಉತ್ತರವಿಲ್ಲದ ಪ್ರಶ್ನೆಗಳ ನಡುವೆ ಅವಳೊಂದು ಪ್ರಶ್ನೆಗೆ ಉತ್ತರಿಸಿಕೊಂಡಳು; ಈ ಬದುಕನ್ನು, ಇದರ ನರಕವನ್ನು ಕೊನೆಗೊಳಿಸುವುದೊಂದೇ ಉಳಿದಿರುವ ದಾರಿಯೆಂದು...ಕೊನೆಗೊಳಿಸುವುದು ಹೇಗೆ?! ದೇಹ ಹಾಗೂ ಉಸಿರಿನ ಸಂಬಂಧವನ್ನು ಕಡಿದುಕೊಳ್ಳೋಣ ಎಂದುಕೊಂಡಳು ಒಮ್ಮೆ ಆದರೆ ಮನಸ್ಸು ಅನುಮತಿ ನೀಡಲಿಲ್ಲ...ಆಕೆ ಅನುಮತಿಸಿದಳು ಮರುಕ್ಷಣವೇ!! ಸಾವಿನ ಹೇಡಿ ಕೊನೆಗಲ್ಲ, ಬದುಕಿನ ಹಳೆ ಅಧ್ಯಾಯವನ್ನು ಕೊನೆಗೊಳಿಸಿ ಹೊಸ ಅಧ್ಯಾಯಕ್ಕೆ ಕಾಲಿಡಲು ಅನಿವಾರ್ಯವಾದ ಕೊನೆಗೆ!! ಹೊಸ ಬದುಕನ್ನು ಹುಟ್ಟಿಸುವ ಕೊನೆಗೆ!! ಮತ್ತೊಮ್ಮೆ ಅನುಮತಿಸಿದಳು ಆಕೆ ಕೊನೆಗೆ, ಅದರಾಚೆಗೆ ಹೊಸ ಬೆಳಕು ಮೂಡುವ ಹುಮ್ಮಸ್ಸಿನಿಂದ....

ಪ್ರತಿಯೊಂದು ಅಂತ್ಯ నిಜಾರ್ಥದಲ್ಲಿ ಕೊನೆಯಾಗಿರುವುದಿಲ್ಲ, ಹೊಸ ಜೀವನದ ಪ್ರಾರಂಭವಾಗಿರುತ್ತದೆ...

-ಪಲ್ಲವಿ ಕಬ್ಬಿನಹಿತ್ಲು

Comments

  1. ಎಲ್ಲಾ ಸಮಸ್ಯೆಗಳಿಗೂ ಸಾವೆ ಉತ್ತರವಲ್ಲ... ಹೇಡಿತನವನ್ನು ಹಿಮ್ಮೆಟ್ಟಿ ತಲೆ ಎತ್ತಿ ಮುನ್ನಡೆವ ಹುಮ್ಮಸ್ಸಿದ್ದರೆ ಸಾಕು.. ಹೊಸ ಬೆಳಕು ತಾನಾಗೆ ತೆರೆದುಕೊಳ್ಳುತ್ತದೆ... ಜೀವನ ಇಷ್ಟೆ ಅಲ್ವಾ? ಕಥೆಯಲ್ಲಿನ ಆಕೆ ನಿರ್ಧಾರ ತುಂಬಾ ಹಿಡಿಸಿತು..👌👌👍

    ReplyDelete
  2. ಕೊನೆಯ ತರ್ಕ ವಾಸ್ತವಿಕ.

    ReplyDelete
  3. 👍🏻👍🏻👍🏻👍🏻👍🏻

    ReplyDelete
  4. GET NOTIFICATION OF NEW POSTS BY CLICKING THE FOLLOW BUTTON On TOP RIGHT CORNER...KEEP SUPPORTING...
    -KADUGUSUMA

    ReplyDelete
    Replies
    1. IN MOBILES YOU CAN CLICK ON 'VIEW WEB VERSION'BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE...

      Delete

Post a Comment

Popular posts from this blog

DREAMS…

ಕಾಫಿಯ ಕಪ್ಪು

ಬಿಳಿ ಬದುಕು...