ದರ್ಪಣ
ಅರೆ! ಅವಳೇ ಇವಳಾ? ಎಂದು ನನ್ನ ಮನಸ್ಸು
ಅಚ್ಚರಿಗೊಂಡಿತು, ಮತ್ತೊಮ್ಮೆ ತಿರುಗಿದೆ. ಗೊಂದಲ ನಿವಾರಣೆಗೆ. ಹೌದು, ಅವಳೇ... ಅವಳು ನನ್ನ
ಬಾಲ್ಯದ ಗೆಳತಿ ದರ್ಪಣ. ಇಂದು ಕಂಕುಳಲ್ಲೊಂದು ಕೂಸು, ಕೈಯಲ್ಲಿ ತರಕಾರಿಯ ಕಟ್ಟನ್ನು ಹಿಡಿದು
ವಿವಾಹಿತ ಮಹಿಳೆಯ ಗಾಂಭೀರ್ಯದೊಂದಿಗೆ ನನ್ನೆದುರಿನಿಂದಲೇ ಸುಳಿದು ಮರೆಯಾದಳು. ಅವಳ ಜೊತೆಗೆ ನನ್ನ
ಮನಸ್ಸು ಕೂಡ ಮರೆಯಾಯಿತು. ಅವಳ ಗುರಿ ಯಾವುದೆಂದು ತಿಳಿಯದಿದ್ದರೂ ನನ್ನ ಮನಸ್ಸು
ಹೆಜ್ಜೆಯಿಟ್ಟಿದ್ದು ಬಾಲ್ಯದ ಕಡೆಗೆ...
ದಪ್ಪು! ಅವಳೇ ದರ್ಪಣ, ಅದಾಗ ಎಳೇ ಹುಡುಗಿ, ಗುಂಡು-ಗುಂಡಾಗಿ ತನ್ನ ಕರ್ರಗಿನ ಕೇಶರಾಶಿಯನ್ನು ಬಾಚದೆ, ಸಿಂಬಳ ಸುರಿಸುತ್ತಾ ನನ್ನೊಂದಿಗೆ ಕಲ್ಲಾಟ ಆಡುವುದರಲ್ಲಿ ಸಂತಸ ಪಡುತ್ತಿದ್ದಳು. ಹರಿದ ಫ್ರಾಕು ಹಾಕಿಕೊಂಡು ನನ್ನ ಜೊತೆಗೆ ಅಂಗನವಾಡಿಗೂ ಓಡಿ ಬರುತ್ತಿದ್ದಳು. ನಾನೋ ಅವಳಿಂದ ಎರಡು ವರ್ಷ ದೊಡ್ಡವನು. ನನ್ನಲ್ಲಿ, ನಾನವಳ 'ದೊಡ್ಡಣ್ಣ' ಎಂಬ ಭಾವನೆ ಮನೆ ಮಾಡಿತ್ತು. ಕೊಂಕು ತೆಗೆದು, ಕಾಲೆಳೆದು ರೇಗಿಸಿ, ಅವಳನ್ನಳಿಸಿ, ಕೊನೆಗೆ ಅವಳ ಮನೆ ತಲುಪುವಷ್ಟರಲ್ಲಿ 'ಅಕ್ರೋಟ್' ಕೊಟ್ಟು ನಗಿಸುತ್ತಿದ್ದೆ. ಅಷ್ಟಲ್ಲದೆ ಬೆಳೆದಂತೆ 'ದೊಡ್ಡ ಶಾಲೆ'ಗೆ ಹೋದಾಗಲೂ ಸಹ ಕ್ರಿಕೆಟ್ ಬ್ಯಾಟ್ ಹಿಡಿದು ಮೈದಾನಕ್ಕಿಳಿಯುತ್ತಿದ್ದ ಪೋರಿ ಆಕೆ! ಏಳನೆಯಲ್ಲಂತೂ ಅವಳ ಮಂಗನಾಟ ಸಹಿಸದೆ, ಟೀಚರ್ ಎರಡು ದಿನ ಅವಳನ್ನು ತರಗತಿಯಿಂದ ಹೊರಗಟ್ಟಿದ್ದರು. ಆದರೆ ಅದೇನೋ ಗೊತ್ತಿಲ್ಲ, ಹೈಸ್ಕೂಲು ತಲುಪಿದಾಕ್ಷಣ ಅವಳ ತುಂಡು ಲಂಗ, ಚೂಡಿದಾರಾಗಿಬಿಟ್ಟಿತು. ಮೈದಾನಕ್ಕಿಳಿಯುವುದನ್ನು ಬಿಟ್ಟು ಅಮ್ಮನ ಸೆರಗಿಡಿದು ಮನೆಯೊಳಗೆ ಕುಳಿತು ತನ್ನವ್ವನಿಗೆ ತನ್ನ ಅಜ್ಞಾನದ, ತುಂಟತನದ ಪರಿಚಯ ಕೊಡುತ್ತಿದ್ದಳು. ಅಂದು ನಾನವಳ ಮನೆಗೆ ಹೋದಾಗ ಅವಳು ಅಡುಗೆ ವಿದ್ಯಾರ್ಥಿನಿಯಾಗಿದ್ದು ಬಿಸಿ-ಬಿಸಿ ಚಹ(ನೀರು)ದ ಕಪ್ಪಿನೊಂದಿಗೆ ಆತಿಥ್ಯ ನೀಡಿದ್ದಳು.
ಇನ್ನೇನು ಕಾಲೇಜು ಮೆಟ್ಟಿಲು ಹತ್ತುತ್ತಾಳೆ ಎಂಬಷ್ಟರಲ್ಲಿ ಅವಳ ತಂದೆಗೆ ವರ್ಗವಾಗಿ ದೂರದ ತಿಪಟೂರಿಗೆ ತೆರಳಿದ್ದಳು. ಮುಂದೆ ಅವಳು ಸಹಾ ನನ್ನ ಸ್ಕೃತಿ ಪಟಲದ ಮೂಲೆಯಲ್ಲಿ ಸದ್ದಿಲ್ಲದೆ ಅಡಗಿ ಕುಳಿತಿದ್ದಳು.
* * * * *
ಇದೀಗ ನನ್ನ ಮುಂದೆ ಅದೇ ಮುಖದ ಹೋಲಿಕೆ ಹಾದು ಹೋಗಿ ನೆನಪಿನ ಬುತ್ತಿಯದು ತೆರೆದುಕೊಳ್ಳುವಂತಾಯಿತು. ಹಿಂದಿನ ಕಥೆ ನೆನಪಿಸುತ್ತಿದ್ದಾಗ, ಇಂದಿನ ಕಥೆಯೇನು? ಎಂಬ ಪ್ರಶ್ನೆ ಹಾದು ಹೋಗಿ , ನನ್ನ ಕಂಗಳು ಅತ್ತಿತ್ತ ಹುಡುಕಾಡತೊಡಗಿದವು. ದೂರದಲ್ಲಿ ಮಗುವಿನ ಕೈ ಹಿಡಿದು ಸಾಗುತ್ತಿದ್ದ ಅವಳೆಡೆಗೆ ತುಸು ವೇಗವಾಗಿ ನಡೆದೆ. "ದಪ್ಪು " ಎಂದಾಗ ಅವಳ ಮುಖದಲ್ಲಿ ಒಂದರೆ ಕ್ಷಣ ಪ್ರಶ್ನಾರ್ಥಕ ಚಿಹ್ನೆ ಮೂಡಿ ಮರೆಯಾಗಿ ಮುಗುಳ್ನಗು ಅರಳಿತು. ಆದರೆ ನನ್ನ ಕಣ್ಣಂಚು ಒದ್ದೆಯಾಗಿತ್ತು, ಅವಳ ಬೋಳುಹಣೆ, ಕೊರಳನ್ನು ಕಂಡು. ಮನದ ಮಾತನ್ನರಿತಂತೆ ಅವಳು, "ಅಣ್ಣಯ್ಯ, ಅವರು ಭಾರತೀಯ ಸೇನೆಯ ಹೆಮ್ಮೆಯ ಯೋಧರಾಗಿ ಹುತಾತ್ಮರಾದರು. ಇಂದು ಅವರ ಮನೆಯೆಂಬ ಜಗತ್ತಿನ ಸುರಕ್ಷತೆಯ ಜವಾಬ್ಧಾರಿ ನನ್ನ ಹೆಗಲ ಮೇಲಿದೆ " ಎಂದಳು. ಕಣ್ಣಾಲೆಗಳು ತುಂಬಿಕೊಂಡವು.
"ಮನೆಗೆ ಬರುವೆಯಾ? ಅತ್ತೆಮ್ಮ ದಾರಿ ಕಾಯ್ತಾ ಇರ್ತಾರೆ" ಎಂದಾಗ ಇಲ್ಲವೆಂದು ತಲೆಯಾಡಿಸಿದೆ, ನಿಂತಿದ್ದ ಕಂದಮ್ಮನನ್ನು ಮತ್ತೆ ಹೆಗಲಿಗೇರಿಸಿ, "ಇವಳೂ ಅವಳಪ್ಪನ ಹಾಗೆ ಸೇನೆಗೆ ಸೇನೆಗೆ ಸೇರುತ್ತಾಳೆ" ಎಂದು ಕಣ್ಣು ಹೊಳೆಯಿಸಿ ಮುಂದೆ ಸಾಗಿದಳು. ನಾನು ನಿಂತೇ ಇದ್ದೆ, ಅವಳು ಮರೆಯಾಗುವ ತನಕ....
ಮನಸ್ಸೆಂದಿತು, 'ಕಾಲ ಎಲ್ಲವನ್ನೂ ಕಲಿಸುತ್ತದೆ.' ನನ್ನ ಅಳುಬುರುಕಿ, ಗಂಡುಬೀರಿ ದಪ್ಪುವೆಲ್ಲಿ? ಇಂದಿನ ತ್ಯಾಗಮಯಿ, ದೇಶಪ್ರೇಮಿ, ದಿಟ್ಟ ಹೆಂಡತಿ ದರ್ಪಣನೆಲ್ಲಿ? ಅನುಭವವೆಂಬ ಪಾಠಶಾಲೆಯಲ್ಲಿ ಕಲಿಯುವ ಪಾಠಗಳ ತೀವ್ರತೆ ಮನಸ್ಸನ್ನು ಕಾಡಿತು, ಅಸ್ಥಿರ ಮನಸ್ಸು ಮುಳುಗುವ ಸೂರ್ಯನೆಡೆಗೆ ಕಣ್ಣು ನೆಟ್ಟು ನಿಂತಿತ್ತು...
👉👉👉👉SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE...
WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM
-KADUGUSUMA
So heart touching
ReplyDeleteThank You Sir
Delete👌👌..😍👏
ReplyDeleteNice
ReplyDeleteThank you...Keep Encouraging us
DeleteSuper Pallavi..👌👌
ReplyDeleteThank You dear
DeleteSuper 👍👍👍👍
ReplyDeleteThank you...Keep Encouraging us
DeleteThank you...Keep Encouraging us
ReplyDeleteAmazing story 😍fantastic dear👌
ReplyDeleteThank you dear
Deleteತುಂಬಾ ಒಳ್ಳೆಯ ಬರವಣಿಗೆ👌👍
ReplyDeleteThank You
Deleteತುಂಬಾ ಒಳ್ಳೆಯ ಬರವಣಿಗೆ👌👍
ReplyDelete