ಅವಳೊಳಗಿನ ಕಥೆಗಳು



ಅವಳ ಕಣ್ಣ ಸುತ್ತಲ

ದಟ್ಟ ಕಪ್ಪು ವರ್ತುಲ

ಹೇಳಲಾರವೆ ಅಡಗಿಸಿಟ್ಟ ಕಥೆಗಳ?!

 

ಇತ್ತಲ್ಲ ಜಿಂಕೆ ಕಂಗಳ ಹೊಳಪವುಗಳಲಿ,

ಕತ್ತಲ್ಲಿ ಜೋತಿದ್ದ ಬಿಂಕ-ಬಿಗುಮಾನಗಳೆಡೆಯಲಿ...

ಬೆನ್ನ ಮೇಲಿಳಿದ ನೀಳ ಜಡೆಯ ಬಳುಕಾಟದಲಿ,

ನವಚೇತನ ಚಿಲುಮೆಯಾಗಿ ಚಿಮ್ಮುತಿತ್ತಲ್ಲ!!

 

ಅವಳಂದು ಇನಿಯನ ನೋಟಕೆ ನಾಚಿ ಕೆಂಪಾಗುತ್ತಿರಲಿಲ್ಲವೇ?!

ನಿದ್ದೆಗೆ ಜಾರುವಷ್ಟರಲಿ ಹೊಂಗನಸುಗಳ ಕಂಡು ನಗೆ ಚೆಲ್ಲುತ್ತಿರಲಿಲ್ಲವೇ?!

ಹುಬ್ಬು ಕೊಂಕಿಸಿ ರೇಗಿಸುವಾಗಲೂ ಮಗು ಮನಸ ಬಿಚ್ಚಿಡುತಿರಲಿಲ್ಲವೇ?!

ಇಂದು ಕಪ್ಪು ಛಾಯೆಗಳ ನಡುವಲವಳು ಮರೆಯಾಗಿಲ್ಲವೇ?!

 

ಹನಿ ಸೂಸುವ ಕಣ್ಣುಗಳನಾವರಿಸಿರುವ

ಕಡುಗಪ್ಪಿನ ಗಾಢ ವರ್ತುಲ;

ಹೇಳುತಿಲ್ಲವೇ ಅಡಗಿಸಿಟ್ಟ ಕಥೆಗಳ?!!





                                                -ಪಲ್ಲವಿ ಕಬ್ಬಿನಹಿತ್ಲು

👇👇👇👇👇👇👇👇👇👇👇👇

ಆತ್ಮೀಯರಾದ ಉದಯಣ್ಣ (ಉದಯಭಾಸ್ಕರ್ ಸುಳ್ಯ) "ಅವಳೊಳಗಿನ ಕಥೆಗಳನ್ನು ವಾಚಿಸಿದ ಬಗೆ ಹೀಗೆ....

https://www.youtube.com/watch?v=oOnw6qvv1j0




👉👉👉👉SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE...

WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM

-KADUGUSUMA

Comments

Post a Comment

Popular posts from this blog

ನೀನೊಂದು ಮಾತು ಹೇಳಿದ್ದಿದ್ರೆ?!

ಬೆಳೆಯುತಿದ್ದೇವೆ ಎಂದರೆ ಅಳಿಯುತ್ತಿರುವುದಲ್ಲವೇ?!

ಮುಖವಾಡಗಳು