ಕಥೆಗಳಲ್ಲಿನ ಹುಡುಗಿ


ಅವನ ಪುಟ್ಟ-ಅಚ್ಚುಕಟ್ಟಾದ ಜಗತ್ತಲ್ಲಿ ಅವನು ಕಟ್ಟಿ ಹಾಕಿಕೊಂಡದ್ದು, ನೂರಾರು ಪುಸ್ತಕಗಳು, ಮನೆಯ ಅಂಗಳದಲ್ಲಿರುವ ಹೂದೋಟ ಮತ್ತು ಹಬೆಯಾಡುವ ಬಿಸಿ ಕಾಫಿ... ಎರಡು ವರ್ಷಗಳ ಹಿಂದೆ ತಾಯಿಯನ್ನು ಕಳೆದುಕೊಂಡ ನಂತರ ಅನಾಥನಾದೆ ಎಂಬ ಭಾವದೊಡನೆ ಹಳ್ಳಿಯ ನಂಟನ್ನು ಕಳೆದುಕೊಂಡು ಬೆಂಗಳೂರಿಗೆ ಕಾಲಿಟ್ಟವನು ಕಟ್ಟಿಕೊಂಡ ಜಗತ್ತಿದು... ಎರಡು ವರ್ಷಗಳಲ್ಲಿ ಆಫೀಸು, ಲೈಬ್ರರಿ, ಮಾರ್ಕೆಟ್ಟು ಇವನ್ನು ಬಿಟ್ಟು ಬೇರೆ ಎಲ್ಲಿಗೂ ಇವನ ಗಾಳಿ ಸುಳಿದದ್ದಿಲ್ಲ... ಅವನಾಯಿತು, ಅವನ ಕೆಲಸವಾಯಿತು ಎಂದಿದ್ದವನು ಹೊತ್ತು ಸಿಕ್ಕಾಗಲೆಲ್ಲಾ ಕಲ್ಪನೆಗಳಲ್ಲಿ ತೇಲಾಡಿ; ಅವುಗಳನ್ನು ಕಥೆಯಾಗಿ ಹೆಣೆಯುತ್ತಿದ್ದ, ಆ ಕಥೆಗಳು ಪುಸ್ತಕಗಳಿಗೆ ಇಳಿಯುತ್ತಿತ್ತಾದರೂ, ಯಾರ ಕೈಗೂ ಸಿಗದಂತೆ ಜೋಪಾನವಾಗಿ ಇಡುವುದೂ ಸಹಾ ಅವನ ಬದುಕಿನ ಭಾಗವಾಗಿತ್ತು!!




ಆದರೆ ಇಂದೇಕೋ ಅವನಿಗೆ ಅಂಗಳದಲ್ಲಿರುವ ಸೂಜಿ ಮಲ್ಲಿಗೆಯ ಕಂಪು ಹೆಚ್ಚಾಗಿದೆ ಎನ್ನಿಸುತ್ತಿತ್ತು, ಗುಲಾಬಿಯೂ ಕೊಂಚ ಜಾಸ್ತಿಯೇ ನಗೆ ಚೆಲ್ಲುತ್ತಿದೆ ಎಂದೆನಿಸಿದಾಗ ಹುಚ್ಚು ಯೋಚನೆಯನ್ನು ಕೊಡವಿಕೊಳ್ಳುತ್ತಾ ಕಾಫಿ ಕಪ್ ಗಾಗಿ ಒಳನಡೆದ. ಹೊರಬರುವಾಗ ಅವನು ಕಂಡದ್ದು ಇಪ್ಪತ್ತರ ಆಸುಪಾಸಿನ ಒಬ್ಬ  ತರುಣಿಯನ್ನು!

ತಿರುಗಿ ನೋಡುವಷ್ಟು ಸುಂದರಿಯಲ್ಲದಿದ್ದರೂ ತಕ್ಕ ಮಟ್ಟಿಗೆ ಲಕ್ಷಣವಾಗಿದ್ದಳು. ಐದುವರೆ ಅಡಿ ಎತ್ತರದ, ಗುಂಗುರು ಕೂದಲಿನ, ತುಸುಕಪ್ಪಿನ ಹುಡುಗಿ. ನೀಳ ರೆಪ್ಪೆಯ ಬೆಕ್ಕಿನ ಕಣ್ಣು ಆಕರ್ಷಕವಾಗಿತ್ತು..

ಅವನಿಗನಿಸಿತು ತನ್ನ ಕಥೆಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಕಥಾನಾಯಕಿ ಇವಳೇ ಇರಬೇಕು ಎಂದು! ಅವನು ಏನನ್ನೂ ಕೇಳದೆ ಅವಳನ್ನು ನೋಡಿ ಕಳೆದುಹೋದ. ಅವಳು ಹೂದೋಟವನ್ನೊಮ್ಮೆ ಸುತ್ತಾಡಿ ಹೂಗಳ ಅಂದ-ಚಂದದ ಬಗ್ಗೆ ಮಾತನಾಡಿ ನಾಳೆ ಒಂದೆರಡು ಹೂವಿನ ಸಸಿಗಳನ್ನು ಕೊಡಬೇಕೆನ್ನುತ್ತಾ ಹೋಗಿಯೇ ಬಿಟ್ಟಳು...




ಅವನು ಅಚ್ಚರಿಯಿಂದ ತಾನು ಬರೆದ ಕಥೆಗಳನ್ನೆಲ್ಲ ತಿರುವಿ ಹಾಕಿದ. ಎಲ್ಲಾ ಕಡೆ ಅವಳ ಹೋಲಿಕೆಯಿದೆ, ಅವಳೇ ಇದ್ದಾಳೆ , ತನಗಾಗಿ ಬಂದಿದ್ದಾಳೆ ಎಂದು ಸಂಭ್ರಮಿಸಿದ. 
ಮರುದಿನ ಅವಳು ಬಂದಾಗ ಸಸಿಗಳೊಂದಿಗೆ ಹೃದಯವನ್ನೂ ಕೊಟ್ಟೇಬಿಟ್ಟ, ಹೇಳಲಿಲ್ಲ ಮಾತ್ರ! 

ಮತ್ತೆರಡು ವರ್ಷ ಕಳೆಯಿತು. ಅವಳು ಬರುತ್ತಿದ್ದಳು, ಬಾಯಿ ತುಂಬಾ ಮಾತನಾಡಿ ಚಿಕ್ಕದು-ದೊಡ್ಡದೆನ್ನದೆ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದಳು. ಅವನು ಎಲ್ಲವನ್ನೂ ಕೇಳುತ್ತಲಿದ್ದ, ಪ್ರೀತಿಯ ಒಡನಾಡಿ ಅವಳೆಂದು ಕನಸು ಕಾಣುತ್ತಲಿದ್ದ. ಏನನ್ನೂ ಹೇಳಲಿಲ್ಲ ಅವನು, ಹೇಳಲೇ ಇಲ್ಲ!!

ಓದು ಮುಗಿಯಿತು, ಬಂದಂತೆ ಕ್ಷಣದಲ್ಲಿ ಮಾಯವಾದಳು ಅವಳು. ಯಾರೂ ತನ್ನವರಲ್ಲ ಎಂದುಕೊಂಡ ಇವನು!!



ಪುನಃ ಮತ್ತೊಂದು ಅಗಲಿಕೆಯ ನೋವಲ್ಲಿ ಜೊತೆಯಾಗಿಸಿಕೊಂಡ; ನೂರಾರು ಪುಸ್ತಕಗಳ, ಅಂಗಳದ ಹೂದೋಟ ಮತ್ತು ಹಬೆಯಾಡುವ ಬಿಸಿ ಕಾಫಿಯನ್ನು...

-ಪಲ್ಲವಿ ಕಬ್ಬಿನಹಿತ್ಲು

WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM

👉👉👉👉SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE..

-KADUGUSUMA

(ವಿಶೇಷ ಪ್ರಕಟಣೆ:

ಇದೇ ಪ್ರಯತ್ನದಲ್ಲಿ ಇನ್ನೊಂದು ಪ್ರಯತ್ನಕ್ಕೆ ಕೈ ಹಾಕುತ್ತಿದ್ದೇವೆ. ನಮ್ಮ ಬ್ಲಾಗ್ ಓದುಗರಲ್ಲಿ ಬರೆಯುವವರೂ ಇದ್ದಾರೆ. ಅವರಿಗಾಗಿಯೇ ಒಂದು ದಿನದ ಪ್ರಕಟಣೆಯನ್ನು ಮೀಸಲಿಡುವ ಪ್ರಯತ್ನ. ಆಸಕ್ತಿ ಉಳ್ಳವರು ತಮ್ಮ ಕನ್ನಡ ಬರಹವನ್ನು 

kadugusumaofficial@gmail.com 

ಗೆ E-Mail   ಮಾಡಬಹುದು. ಆಯ್ದ ಬರಹಗಳನ್ನು ಪ್ರತಿ ಭಾನುವಾರ 'ಓದುಗರ ಕಾಲಂ' ನಲ್ಲಿ ಪ್ರಕಟಿಸುತ್ತೇವೆ.

ಧನ್ಯವಾದಗಳೊಂದಿಗೆ,

-ಕಾಡುಗುಸುಮ)


Comments

Post a Comment

Popular posts from this blog

DREAMS…

ಕಾಫಿಯ ಕಪ್ಪು

ಬಿಳಿ ಬದುಕು...