Posts

(ವಿ)ಚಿತ್ರ ಹನಿಗಳು-1

Image
----------------------1------------------------- ಹನಿಗಳೆಲ್ಲವನು ಬಾಚಿ ಎದೆಯಾಳಕಿಳಿಸುವ ತವಕದಲಿದ್ದೆ; ಪಿಸುಗುಟ್ಟಿತು ಹನಿಯೊಂದು, ಬಾಚಬೇಕಿಲ್ಲ ನಮ್ಮೆಲ್ಲರನು ನೀನು, ಪ್ರೀತಿಯಿಂದ ಕೈ ಚಾಚಿದರೆ ಸಾಕೆಂದು!!! ----------------------2------------------------- ಮನವ ಮೋಹಿಸುವಷ್ಟು ಕಂಪನ್ನು ಅಡಗಿಸಿಡುವುದು ಮೊಗ್ಗು ತನ್ನೊಳಗೇ! ಅರಳುವವರೆಗೂ ಅರಿಯಗೊಡದೆ ತನ್ನ ಗುಟ್ಟನಾರಿಗೂ... ಬಿರಿದ ಕ್ಷಣದಿ ಮೃದುತೆಯನೆ ಸಾರುತಲೆಲ್ಲೆಡೆ,  ಕಾಣಗೊಡದು ಬೆನ್ನ ಹಿಂದಣ ಮುಳ್ಳನು... ----------------------3------------------------- ಹನಿಗಳಾಗಿ ನಿನ್ನ ನೆನಪುಗಳು ಕಾಡುತ್ತಲೇ ಇರುವವು; ಸುಡುಬಿಸಿಲ ನಟ್ಟ ಬೇಸಿಗೆಯಲ್ಲೂ... ಹನಿಗಳು ಕೊಡುವ ತಂಪ ಮಾತ್ರ ಕೊಡವು,  ಕಣ್ಣಂಚನು ತೋಯಿಸುವುದನು ಬಿಟ್ಟು... ----------------------4------------------------- ಬದುಕಿಡೀ ಭಾರ ಹೊತ್ತಿದ್ದ ಮುದಿಜೀವಕ್ಕೆ; ಆಸರೆಯಾಗಬೇಕಿದ್ದ ಮಗ ತೊರೆದ ಮೇಲೆ,  ಉಸಿರೂ ಭಾರವಾಗಿದೆ... ----------------------5------------------------- ಬಾಡ ಹೊರಟ ಹೂವು, ಬೆನ್ನ ಹಿಂದೆ ಉಳಿಸಿತ್ತು; ನಾಳೆಗಾಗಿ ಮೊಗ್ಗೊಂದನು.... -ಪಲ್ಲವಿ ಕಬ್ಬಿನಹಿತ್ಲು WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM 👉 👉 👉 👉 SUPPORT US BY CLICKING THE FOLLOW BY E-MAIL...

ಬೆಳಕೆಂಬ ಭರವಸೆ ಬದುಕಿನೆಡೆಗೆ...

Image
ಈ ಬಾರಿ ದೀಪಾವಳಿಯ ಸಂಜೆ ಹಣತೆ ಹಚ್ಚಿದಾಗ ಅದು ಕತ್ತಲನ್ನು ಹೇಗೆ ತನ್ನೊಳಗೆ ನುಂಗಿಕೊಳ್ಳುತ್ತದೆ ಎಂಬ ಪ್ರಶ್ನೆ ಸುಳಿದು ಮರೆಯಾಯಿತು... ಈ ಕತ್ತಲು-ಬೆಳಕಿನ ಕಣ್ಣು ಮುಚ್ಚಾಲೆಯಾಟವನ್ನು ಎಷ್ಟು ಬಾರಿ ಕಂಡರೂ ಅದು ನನ್ನನ್ನು ಹೊಸ-ಹೊಸ ರೂಪದೊಂದಿಗೆ-ರೀತಿಯೊಂದಿಗೆ ಬೆರಗುಗೊಳಿಸುವುದರಲ್ಲಿ ಹಿಂದುಳಿಯದು. ಅದಕ್ಕೇ ಇರಬೇಕು, ದೀಪಾವಳಿ, ಎಂದಿದ್ದರೂ ನನಗೆ ಎಲ್ಲದಕ್ಕಿಂತಲೂ ಆಪ್ತವೆನಿಸುವ, ವಿಶೇಷವೆನಿಸುವ, ಎಲ್ಲದಕ್ಕಿಂತಲೂ ಹೆಚ್ಚಾಗಿ ನನ್ನದೆನಿಸುವ ಹಬ್ಬ... ಇದಕ್ಕೆ ಇನ್ನೊಂದು ಕಾರಣ, ಈ ಬೆಳಕಿನ ಹಬ್ಬದಲ್ಲಿ ಒಂದೆಡೆ ಕತ್ತಲನ್ನು ಸೀಳುವ ಬೆಳಕು ಆಕರ್ಷಕವಾಗಿ ಕಂಡರೆ, ಮತ್ತೊಂದೆಡೆ ಆ ಬೆಳಕಿಗೆ ಕರಗುವ ಕತ್ತಲು ಹೆಚ್ಚು ಆಕರ್ಷಕ ಎಂದೆನಿಸುವ ದ್ವಂದ್ವ ಕಾಡುವುದಿರಬೇಕು. ಇಷ್ಟಲ್ಲದೆ ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ  ಜ್ಞಾನದೆಡೆಗೆ ಎಂದು ಕೂಗಾಡುವ ನಮಗೆ, ಈ ಹಬ್ಬವು ನಮ್ಮೊಳಗೇ ಇರುವ ಕತ್ತಲನ್ನೂ ಅಜ್ಞಾನವನ್ನೂ ಒಪ್ಪಿಕೊಳ್ಳುವ ಛಾತಿಯನ್ನು ಕೊಡುತ್ತದೆ ಎಂದು ನನಗನಿಸುತ್ತದೆ. ಅಹಂಕಾರವನ್ನು ಸದ್ದಿಲ್ಲದೆ ಸುಡುವ ಜ್ಯೋತಿ, ನಮಗೆ ಸಾತ್ವಿಕತೆಯ ಬೆಳಕಿನ ರುಚಿಯನುಣಿಸುತ್ತದೆ.  ಆದರೆ ಈ ಬಾರಿ ಕೊರೆದ ಯೋಚನೆಯೆಂದರೆ, ಬದುಕಿನಲ್ಲಿ ಬೆಳಕಿರಬೇಕು ಎಂಬುವುದು ಒಪ್ಪುವ ಮಾತಾದರೂ ಬದುಕೇ ಬೆಳಕಾಗಬಾರದೇಕೆ? ಎಂಬುವುದು.  ಒಳಗೆಲ್ಲ ಕತ್ತಲನ್ನು ತುಂಬಿಕೊಂಡು ಅಲ್ಲೊಂದು ಇಲ್ಲೊಂದು ದೀಪವನ್ನು ಹಚ್ಚಿ ಬೆಳಕು ತುಂಬಿಕೊಳ್ಳುವುದು ತಪ್ಪ...

ಬೆತ್ತಲೆ ಹೆಣ್ಣು (ಬಯಲಿನ ಬೆಳಕಲ್ಲಿ ನಿಂತಾಗ...)

Image
  (ಹೆಣ್ಣಿನ ಅಂತರಂಗದ ಅರಿಕೆ) ನಿಮ್ಮೆದುರಲ್ಲೇ ಬೆತ್ತಲಾದರೂ ನಾನು ಹೊರಬೀಳಲಿಲ್ಲವಲ್ಲ ಒಂದಕ್ಷರವೂ ಬಾಯಿಂದ?! ತುಂಡು ಬಟ್ಟೆಯಾಗಿದ್ದರೇನಾಯ್ತು,  ಮಾನದ ಅರಿವೆ ಹರಿದಿರಲಿಲ್ಲವಲ್ಲ?!! ತೊಂಡೆತುಟಿಗಳಿಗೆ ಬಣ್ಣ ಹಚ್ಚಿದರೇನಾಯ್ತು, ಭಾವಗಳೆಲ್ಲ ತಿಳಿಯಾಗಿ-ಬಿಳಿಯಾಗಿ ಇತ್ತಲ್ಲ?!! ಮೈಯೊಡ್ಡಿದ್ದಿಲ್ಲ ಪ್ರೇಮದ ಮತ್ತಲ್ಲಿ; ಮೈಮಾರಿದ್ದಿಲ್ಲ ಕಾಂಚಾಣದಾಸೆಯ ಕುರುಡಲ್ಲಿ; ಮೈಮಾಟ ತುಳುಕಿಸಿಲ್ಲ ಸೌಂದರ್ಯ ಮೆರೆವಲ್ಲಿ; ಆದರೂ ಬೆತ್ತಲೆಯಾಗಿಯೇ ಬಿಟ್ಟೆ ನಾ ಬಯಲಲ್ಲಿ!! ಇವರಿಬ್ಬರೆಡೆಯಲ್ಲಿ ಮತ್ತೊಬ್ಬಳಿರುವೆನು, ಅಮ್ಮನ ತೋಳತೆಕ್ಕೆಯಲಿ ಬೆಚ್ಚನೆ ಮಲಗುತ್ತಾ; ಕಂಗಳ ಹೊಳಪೊಡನೆ ಕಿಲ-ಕಿಲನೆ ನಗುತ್ತಾ; ನಲುಗಿ ಮರೆಯಾದೆ ನಾನೂ ಅವರ ಕೈಗಳಲಿ ನಲುಗುತ್ತಾ!! ಹಳೆ ಕಥೆಯಿದಲ್ಲ, ದಿನ-ದಿನದ ವ್ಯಥೆಯು; ಒಂದೆರಡು ದಿನಗಳೊಳಗೆ ದೀಪದ ಬೆಳಕಿನಲಿ, ಸುಟ್ಟು ಮರೆಯಾಗುವಂಥವು!! ಹತ್ತಾರು ಬಾಯಿಗಳಿಗೆ ಕರೆಯಾಗುವಂಥವು!! ಈಗಲೂ ಬೆತ್ತಲಾಗಿ ನಿಂತಿರುವೆನು ಬಯಲಲಿ, ಸುಮ್ಮನಾಗದಿರಿ ನೀವ್ಯಾರು: ಬಟ್ಟೆ ಹೊಲಿಯುವವರೆಗೆ; ಅಥವಾ ನೀವೂ ಬೆತ್ತಲಾಗುವವರೆಗೆ... ಸುಮ್ಮನಾಗದಿರಿ ನೀವ್ಯಾರೂ... -ಪಲ್ಲವಿ ಕಬ್ಬಿನಹಿತ್ಲು WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM 👉 👉 👉 👉 SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VI...

ನನ್ನೊಲವೇ...

Image
ಬಾಡಿ ಹೋದ ಮುಳ್ಳಿನ ಗಿಡದಲಿ ಒಲವಿನ ಕೆಂಗುಲಾಬಿಯರಳಿಸಿದವಳು ನೀನು, ನನ್ನೊಲವೇ... ಒಂಟಿಯಾಗಿ ನಿಂ ತ   ಹೆಮ್ಮರದ ಬುಡದಂಚಿನಲಿ ಲತೆಯಾಗಿ ಹಬ್ಬಿದವಳು ನೀನು, ನನ್ನೊಲವೇ... ಖಾಲಿಯಾದ ಮನದಂಗಳವ ತೊಳೆದು ರಂಗಿನ ಚಿತ್ತಾರ ಬಿಡಿಸಿದವಳು ನೀನು, ನನ್ನೊಲವೇ... ದುಃಖ ಸಾಗರದಲಿ ಮುಳುಗಿದವನ ಹೊರತರಲು ನಗುವ ದೋಣಿಯ ನಾವಿಕಳಾಗಿ ಬಂದವಳು ನೀನು, ನನ್ನೊಲವೇ... ಚದುರಿ ಹೋದ ಬದುಕಿನ ಪುಟಗಳನು ಜೋಡಿಸುವ ಎಳೆಯಾಗಿ ಬಂದವಳು ನೀನು, ನನ್ನೊಲವೇ... ಅಪೂರ್ಣ, ಏಕಾಂತ ಬದುಕಿನೊಳು ಪ್ರೀತಿಯ ರಸಧಾರೆಯೆರೆದು ಸಂಗಾತಿಯಾದವಳು ನೀನು, ನನ್ನೊಲವೇ... ಮನಸು ಕದಿಯುವ ಚೋರನ ಮನವ ಕದ್ದವಳು, ನೀನು ನನ್ನೊಲವೇ... -ಪಲ್ಲವಿ ಕಬ್ಬಿನಹಿತ್ಲು WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM 👉 👉 👉 👉 SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE.. -KADUGUSUMA ( ವಿಶೇಷ ಪ್ರಕಟಣೆ : ಇದೇ ಪ್ರಯತ್ನದಲ್ಲಿ ಇನ್ನೊಂದು ಪ್ರಯತ್ನಕ್ಕೆ ಕೈ ಹಾಕುತ್ತಿದ್ದೇವೆ. ನಮ್ಮ ಬ್ಲಾಗ್ ಓದುಗರಲ್ಲಿ ಬರೆಯುವವರೂ ಇದ್ದಾರೆ. ಅವರಿಗಾಗಿಯೇ ಒಂದು ದಿನದ ಪ್ರಕಟಣೆಯನ್ನು ಮೀಸ...

ಹನಿ ಎಂಬ ಕಹಾನಿ

Image
ಮೊದಲ ಮಳೆಯ ಹನಿಗಳು ನೆಲವನಪ್ಪುವಾಗ ನೆನಪಿನ ಹನಿಗಳುದುರುವುದು ಅತಿ ಸಹಜ. ಸಿಹಿ ನೆನಪುಗಳು ನಗೆ ಹೊನಲನು ಹರಿಸಿದರೆ, ಕಹಿ ನೆನಪುಗಳು ಹನಿಗೂಡಿಸುತ್ತವೆ ಕಣ್ಣಂಚನು. ಮಳೆಯ ರಭಸದೊಂದಿಗೆ ನೆನಪಿನ ಹರಿವು ತೀವ್ರವಾಗುತ್ತಾ ಸಾಗುತ್ತದೆ. ಈ ಭಾವವು ವಯಸ್ಸಿನ ಭೇದವಿಲ್ಲದೆ ಸರ್ವರನ್ನು ಏಕರೂಪದಿಂದ ಕಾಡುತ್ತದೆಂಬುದೇ ಇದರ ವಿಶೇಷತೆ. ಮಳೆಗಾಲದೊಂದಿಗೆ ಕೆಲವು ಎಂದೂ ಬದಲಾಗದ ಪರಿಪಾಠಗಳು ಪರಂಪರೆಯಾದಂತೆ ತೋರುತ್ತದೆ.  “ನಮ್ಮ ಕಾಲದ ಮಳೆಯ ಮುಂದೆ ಈಗಿನ ಮಳೆ ಏನೇನು ಅಲ್ಲ” ಎಂದು ಶುರುವಾಗುವ ಆನುಭವಿ ಹಿರಿಜೀವಿಗಳ ಮಾತು, ತಮ್ಮ ಜೀವನದ ಸಾಹಸಗಾಥೆಗಳನ್ನು ಅನಾವರಣಗೊಳಿಸುವ ಹಾದಿಯಾಗುತ್ತದೆ. ತಮ್ಮ ಜೀವನದ ನೋವು-ನಲಿವುಗಳು ಮುಂದಿನ ಪೀಳಿಗೆಯ ಹೃದಯಗಳಿಗೆ ತಲುಪಿ ಸ್ಪೂರ್ತಿದಾಯಕವಾಗುವುದು ಎಂಬ ಅರಿವು ಅವರಲ್ಲಿ ಸುಪ್ತವಾಗಿರುವುದಲ್ಲವೆ! ಮೊದಲ ಬಾರಿಗೆ ತಮ್ಮ ಜೀವನ ಸಂಗಾತಿಯನ್ನು ಕಂಡದ್ದು, ಚಿಕ್ಕವಯಸ್ಸಿನಲ್ಲಿಯೆ ಮದುವೆ ಮಾಡಿದ್ದು, ಮೊದಲ ಸಲ ಅಡುಗೆ ಮಾಡಿದ್ದು ಶಾಲೆಯ ಅಂಗಳಕ್ಕೇರಲು ಪಟ್ಟ ಪಾಡು ಹೀಗೆ ನೆನಪಿನ ಬುತ್ತಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಇದು ಹಳೆ ದೇಹಗಳ ಕಥೆಯಾದರೆ ಅವರ ಮಡಿಲಲ್ಲಿ ಮಲಗುವ ಎಳೆ ಜೀವಗಳ ಜಗತ್ತೇ ವಿಭಿನ್ನ-ವಿಶಿಷ್ಟ.  ಕೈಗೂಸು ಗುಡುಗು-ಸಿಡಿಲಿನ ಆರ್ಭಟಕ್ಕೆ ಬೆದರಿಕೊಂಡರೂ ಮಳೆ ನೀರು ಕೆಳಗಿಳಿಯುವುದು ಮೊಗದಲ್ಲಿ ಹೂನಗುವನ್ನರಳಿಸುತ್ತದೆ. ಇನ್ನು ಶಾಲೆಯ ಮೆಟ್ಟಿಲು ಹತ್ತಿರುವ ಮಕ್ಕಳಲ್ಲಿ ಬೆಳ್ಳಂಬೆಳಗ್ಗೆ ಸುರಿ...

ಓದುಗರ ಕಾಲಂ: ಹೆಮ್ಮೆಯ ಕರುನಾಡು.

Image
ಓ ಕರುನಾಡೇ  ಕವಿ-ಕದಂಬರ ಬೀಡೆ  ಹಚ್ಚ -ಹಸಿರಿನ ಪುಣ್ಯದ ನಾಡೇ  ಭುವನೇಶ್ವರಿಯ ಅಂದದ ಬೀಡೆ. ಪಂಪ,ರನ್ನ, ಪೊನ್ನರಂತಹ ಅನೇಕ ಮಹಾನ್ ಕವಿಗಳ ಜನ್ಮ ಭೂಮಿಯು ಪ್ರೀತಿ , ಸಹನೆಯು ಉಕ್ಕಿ ಹರಿದು ಹೆಣ್ಣನ್ನು ಪೂಜಿಸುವ ಧರ್ಮ ಭೂಮಿಯು. ಹಸಿದವರಿಗೆ ಅನ್ನವ ನೀಡುವ ನಾಡು ಸಂಸ್ಕೃತಿಗೆ ಹೆಸರಾದ ನಾಡು ಕಲೆ, ಸಾಹಿತ್ಯದ ಹೆಮ್ಮೆಯ ನಾಡು ನಮ್ಮ ಕರುನಾಡು. ತೆಂಗು-ಕಂಗು ಬೆಳೆಯುವ ನಾಡು ಕೃಷ್ಣ-ಕಾವೇರಿ ಮೊದಲದ ಅಮೃತ ನದಿಗಳು ಹರಿಯುವ ಸೊಗಸಾದ ಈ ನಾಡು ಗಂಧವ ಬೆಳೆಯುವ ಗಂಧದ ಗುಡಿಯು. ಕನ್ನಡ ಭಾಷೆಯ ಮನುಜನ ಮನವು ವಿಶ್ವಾಸ ತುಂಬಿಹುದು. ಕಾಳಜಿಯು ಮನುಜನ ಹೃದಯದಿ  ಉಕ್ಕಿ ಹರಿಯುತ್ತಿಹುದು. ಹೇ ಭುವನೇಶ್ವರಿಯೇ ನಿನ್ನ ನಾಡಿನಲ್ಲಿ ಎನ್ನ ಜನ್ಮವು ಸಾರ್ಥಕವಾಗಿಹುದು  ಎನ್ನ ಮನದಲ್ಲಿ ನಿನ್ನ ಪಾದ ಪೂಜೆಯೇ  ಸದಾ ತುಂಬಿಹುದು. ️ ಕುಸುಮಾಕರ ಅಂಬೆಕಲ್ಲು ಮಡಿಕೇರಿ ತಾಲ್ಲೂಕು  ಕೊಡಗು ಜಿಲ್ಲೆ  ಚೆಂಬು ಗ್ರಾಮ ಬಾಲಂಬಿ  ಪೋಸ್ಟ್ Pin :574234 PH:6364660272 👉 👉 👉 👉 SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE.. -KADUGUSUMA ( ವಿಶೇಷ ಪ್ರಕಟಣೆ : ಇದ...

ಮುಂಜಾವು

Image
ಎಳೆ ಬಿಸಿಲು ಮೆಲ್ಲಗೆ ಹಾಸುತ ಹಸಿರ ಸಿರಿಯನಪ್ಪಿಕೊಳ್ಳಲು ಕತ್ತಲ ಕೂಪದೊಳಗಿಂದ ವನರಾಣಿಯು ರವಿಯೆಡೆ ಕೈಚಾಚಿ ಹೊರಬರುತಿಹಳು ... ಮುಂಜಾನೆ ಅ ದೆ ಲ್ಲಿ ಅವಿತು ಕುಳಿ ತಿ ತ್ತೆಂದು ನೋಡಲು ಜೀವ ಸಂಕುಲವು ಎಚ್ಚೆದ್ದು ಹುಡುಕಾಡುವವು; ಚಿಲಿಪಿಲಿಗುಟ್ಟುವ ಹಕ್ಕಿಗಳು ಆಗಸದಲಿ, ಹೂಂಕರಿಸುವ ವ್ಯಾಘ್ರಗಳು ಕಾನನದೊಳಗೆ,  ಈಜಾಡುವ ಮೀನುಗಳು ನೀರಿನೊಳಗೆ, ಬೆಳಕನು ಅರಸುತ ಅಚ್ಚರಿಪಡುವವು... ಕಾಣುತ ವಿಸ್ಮಿತಗೊ ಳ್ಳು ವವು;   ಕತ್ತಲು ಬೆಳಕಿನ ಕಣ್ಣುಮುಚ್ಚಾಲೆಯಾಟವ  ಸುಳಿಯುವ ಗಾಳಿ ಮಂಜನು ಕದ್ದೊಯುವುದ ನು ನೋಡುವವು:  ಮೆಲ್ಲನೆ ಹೂಗಳು ಪರಿಮಳ ಚೆಲ್ಲುವುದನು  ಸವಿಗನಸುಗಳು ಕರಗಿ ಮಾಯವಾಗವುದನು... ಮುಂಜಾನೆ ಓಡಿ ಬೆಳ್ಳನೆ ಬೆಳಗಾಗಲು ಮುಂಜಾನೆ ಅ ದೆ ಲ್ಲಿ ಅವಿತು ಕುಳಿ ತಿ ತ್ತೆಂದು  ತಿಳಿಯದೆ ಜೀವಗಳು ಸೋತು ಮತ್ತೆ ಮರಳುವವು; ಮುಂಜಾವು ನಿಗೂಢತೆಯನು ಬಚ್ಚಿಟ್ಟು ಪುನಃ ನಗುವುದು... - ಪಲ್ಲವಿ ಕಬ್ಬಿನಹಿತ್ಲು 👉 👉 👉 👉 SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE.. -KADUGUSUMA ( ವಿಶೇಷ ಪ್ರಕಟಣೆ : ಇದೇ ಪ್ರಯತ್ನದಲ್ಲಿ ಇನ್ನೊಂದು ಪ್ರಯತ್ನಕ್ಕೆ ಕೈ ಹಾಕ...

ಮುಖವಾಡಗಳು

Image
ಮುಖ ಮರೆಸಿ ಓಡಾಡುವುದು ತಪ್ಪಂತೆ; ಮುಖವಾಡದೊಳಗೇ ಬದುಕುವವರು ನಾವು!! ಮುಖವಾಡಗಳು ಒಂದಾಗಿ-ಎರಡಾಗಿ-ನೂರಾಗಿ, ನಾನು ನೀನಾಗಿ, ನೀನು ಏನೋ ಆಗಿ! ನಾವಲ್ಲದ ‘ನಮ್ಮನ್ನು’ ತೋರಿಸುವ ಹಂಬಲದಲ್ಲಿ, ಮುಖವಾಡದೊಳಗೇ ಬದುಕುವವರು ನಾವು!! ಕಲೆಯಿರುವ ಮುಖಗಳಿಗೆ, ರಂಗಿನ ಹೊಳಪಿನ ಮುಖವಾಡ!! ಕಪ್ಪು ಮನಸ್ಸಿನ ಧುರೀಣರಿಗೆ, ಶ್ವೇತ ವಸ್ತ್ರದ ಮುಖವಾಡ!! ಕಾಡ ಕಡಿದು ಕಟ್ಟಿದ ಮನೆಗಳ ಗೋಡೆಗಳಿಗೆ, ಹಸಿರು ಹುಲ್ಲಿನ, ಹೂವಿನ ಮುಖವಾಡ!! ಕೊಳೆತು ನಾರುವ ಮನಸುಗಳಿಗೆ, ಸುಗಂಧಿತ ಲೇಪನದ ಸುವಾಸನೆಯ ಮುಖವಾಡ!! ತನ್ನಲ್ಲಿಲ್ಲದ ಗುಣಗಳಿಗೆ, ಲಕ್ಷ್ಮೀಬಲದ ಮುಖವಾಡ!! ಅತ್ತು ಸೊರಗಿದ ಜೀವಗಳಿಗೆ, ನಗುಮೊಗದ ನಲಿಕೆಯ ಮುಖವಾಡ!! ಚಿತೆಯ ಸಾಲಿನಲ್ಲಿ ನಿಂತಿದ್ದರೂ, ಯೌವನದ ಭ್ರಮೆಯ ಮುಖವಾಡ!! ಅಸಭ್ಯತೆಯೇ ಮೈವೆತ್ತಿ ನಿಂತಿದ್ದವರಿಗೂ, ಸಭ್ಯತೆಯ ಸುಂದರ ಮುಖವಾಡ!! ಭೇಟಿಯಾದ ಪ್ರತಿಯೊಬ್ಬರಿಗೊಂದೊಂದರಂತೆ, ನೂರಾರು ಮುಖವಾಡಗಳಲ್ಲೇ ಬದುಕು; “ನಾವಲ್ಲದ ‘ನಮ್ಮನ್ನು’ ತೋರಿಸುವುದಕ್ಕಾಗಿ” ಹಮ್ಮು-ಬಿಮ್ಮಿನ ತೋರಿಕೆಯ ಮುಖವಾಡ; ಕೃತ್ರಿಮತೆಯ ಮಡಿಲಲ್ಲಿ ಸಹಜತೆಯ ಮುಖವಾಡ; ಕ್ರೂರತೆಯ ಮರೆಮಾಚುವ ಸ್ಪಂದನೆಯ ಮುಖವಾಡ; ಸ್ವಾರ್ಥದ ಪರದೆಯ ಮುಂದೆ ನಿಸ್ವಾರ್ಥದ ಮುಖವಾಡ; ಶೂನ್ಯವಾಗಿದ್ದರೂ ಪರಿಪೂರ್ಣತೆಯ ಮುಖವಾಡ!! ಆದರೂ, ಮುಖ ಮರೆಸಿ ಓಡಾಡುವುದು ತಪ್ಪಂತೆ!! ಮುಖವಾಡದೊಳಗೇ ಬದುಕುತ್ತಿರುವವರೊಳಗಿನ, ಮತ್ತೊಂದು ಮುಖವಾಡದ ಮಾತು!! -ಪಲ್ಲವಿ ಕಬ್ಬಿನಹಿತ್ಲು WE WILL POST OUR CONTEN...

ನಿಶೆಯ ನಶೆಯೂ ಚೆನ್ನ...

Image
  ಕತ್ತಲಲ್ಲಿ ಕರಗಿ ಮರೆಯಾಗುವ ಬಯಕೆ ಕಾಡದ್ದು ಯಾರಿಗೆ?! ಪುಟಾಣಿಗಳು ಮನೆಕೆಲಸ ಮಾಡದಿದ್ದಾಗ, ಪ್ರೇಮಿಗಳು ಜಗದ ಕಂಗಳಿಂದ ಮರೆಯಾಗ ಬಯಸಿದಾಗ, ಪ್ರೌಢರಿಗೆ ಜೀವನ ಸೋಲಿನ ರುಚಿಯುಣಿಸಿದಾಗ, ಜೀವನದ ಸಂಧ್ಯಾ ಕಾಲದಲ್ಲಿರುವವರೂ ಕತ್ತಲಾಗುವುದಕ್ಕೆ, ಆ ಕತ್ತಲಲ್ಲಿ ಸದ್ದಿಲ್ಲದೆ ಕಳೆದುಹೋಗುವುದಕ್ಕೆ ಕಾಯುವುದಿಲ್ಲವೆ?! ಹಿರಿಯರು-ಕಿರಿಯರೆನ್ನುವ ಭೇದವನ್ನು ಮುರಿದು ಎಲ್ಲರನ್ನೂ ಒಂದಲ್ಲ ಒಂದು ಸಲ ಅಪ್ಪಿಕೊಂಡ ಭಾವವಿದು.  ಹಳೆತೆಲ್ಲವನ್ನು ಮರೆತು ಹೊಸತು ಶುರುವಾಗಲು ನಿಶೆಯಾಗಮನ ಬೇಡವೇ? ನೇಸರನುದಯಕ್ಕೆ ಕರಿ ಹಾಸಿನ ಕಂಬಳಿಯಿಲ್ಲದಿದ್ದರೆ ಅರ್ಥವಿದ್ದೀತೇ? ಜ್ಞಾನದೀಪದ ಬೆಳಕು ಪಸರಿಸಲು ಅಜ್ಞಾನದ ಕತ್ತಲಾವರಿಸಬೇಡವೇ? ಹಳೆದೇಹವನ್ನು ಕಳಚಿಟ್ಟು ಹೊಸ ದೇಹವೆಂಬ ಅಂಗಿ ಧರಿಸಲು ಬಾಳಸಂಜೆ ಕತ್ತಲೆಡೆಗೆ ಸಾಗುವುದಿಲ್ಲವೇ? ದಿನವಿಡೀ ದುಡಿದು ಕಂಗಾಲಾಗುವ ಜೀವಗಳಿಗೆ ರಾತ್ರಿ, ವಿಶ್ರಾಂತಿಯ ಆಮಂತ್ರಣವನ್ನು ಹೊತ್ತು ತಂದರೆ, ಕೆಲವೆಡೆ ಯುವ ಮನಸುಗಳಿಗೆ ಇದೇ ಹೊತ್ತಿಗೆ ತಮ್ಮ ದಿನಚರಿಯ ಆರಂಭವಾಗುತ್ತದೆ. ಪ್ರೇಮಿಗಳು ಚಂದ್ರನ ಬಿಂಬದಲ್ಲಿ ತನ್ನ ಪ್ರೇಮದ ಸಂದೇಶವನ್ನು ಸಂಗಾತಿಗೆ ತಲುಪಿಸುವ ಕನಸು ಕಾಣುತ್ತಾರೆ. ಆತ್ಮೀಯರನ್ನು ಅಗಲಿದವರು ತಾರೆಗಳೆಡೆಯಲ್ಲಿ ಅವರನ್ನು ಅರಸತೊಡಗುತ್ತಾರೆ. ರಾತ್ರಿಯ ಏಕಾಂತದಲ್ಲಿ ನೆನಪುಗಳು ಒಮ್ಮೊಮ್ಮೆ ತಂಗಾಳಿಯಾಗಿ, ಇನ್ನು ಕೆಲವೊಮ್ಮೆ ಬಿರುಗಾಳಿಯಾಗಿ ಬೀಸಿ ಒಂದರೆ ಘಳಿಗೆ ನಮ್ಮನ್ನು ತನ್ನೊಳಗೆ ಸೆಳೆದುಕೊಳ್ಳುತ್ತವೆ....