Posts

ಹೀಗಾಗುವುದುಂಟು...

Image
ಒಮ್ಮೊಮ್ಮೆ ನಿನ್ನ ಮೇಲಿನ ಪ್ರೀತಿ, ಹನಿ-ಹನಿಯಾಗಿ ತೊಟ್ಟಿಕ್ಕುವುದುಂಟು... ಮತ್ತೊಮ್ಮೆ, ನಿನ್ನ ನೆನಪಾಗಿ ಕಂಗಳಿಂದ ಜಲಧಾರೆಯಾಗಿ ಧುಮ್ಮಿಕ್ಕುವುದುಂಟು... ಮನಸಿನ ಹಸಿರು ಹಾಸಿನ ಮೇಲೆ ಇಬ್ಬನಿಯಾಗಿ ಕುಳಿತು ಪ್ರೇಮರವಿಯ ಕಿರಣಕ್ಕೆ ಪ್ರಜ್ವಲಿಸಿ ಹೊಳೆಯುವುದುಂಟು... ನೆನಹುಗಳಲೆಗಳು ಭೋರ್ಗರಿಸಿ ಮೇಲೆದ್ದು ಎದೆಯ ಮೂಲೆ-ಮೂಲೆಯನು ತೊಳೆಯುವುದುಂಟು... ಅಲೆಗಳು ಹೊತ್ತು ತಂದ ನೀರು ಅಲ್ಲಲ್ಲಿ ನಿಂತು ನನ್ನೆಲ್ಲ ಸಮಯವನು ಕಳೆಯುವುದುಂಟು ಗೆಳತಿ, ನನ್ನ ಬದುಕಿನಿಂದ ನಿನ್ನಿರುವಿಕೆಯ ಹೆಮ್ಮರವ ಬುಡದಿಂದ ಕಿತ್ತೆಸೆಯುವುನೆಂದರೆ ನಿನ್ನ ಮುಗುಳ್ನಗುವಲುದುರುವ ಮುತ್ತುಗಳು ಮನದ ತುಂಬಾ ಚೆಲ್ಲಿ ಕುಣಿದಾಡಿ ನಾನು ನರಳಾಡುವುದುಂಟು... ಒಮ್ಮೊಮ್ಮೆ ನಿನ್ನ ಮೇಲಿನ ಪ್ರೇಮ ಜಲಧಾರೆಯಾಗಿ ಧುಮ್ಮಿಕ್ಕುವುದುಂಟು... ಮತ್ತೊಮ್ಮೆ ಸಿಹಿ-ಕಹಿ ನೆನಪುಗಳು ಹನಿ-ಹನಿಯಾಗಿ ತೊಟ್ಟಿಕ್ಕುವುದುಂಟು... -ಪಲ್ಲವಿ ಕಬ್ಬಿನಹಿತ್ಲು WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM 👉 👉 👉 👉 SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE.. -KADUGUSUMA

ಅತ್ತು ಹಗುರಾಗು ಮನಸೆ...

Image
“ಭಾರದ ಕರಿ ಮೋಡ ಮಳೆ ಸುರಿಸಿ ಹಗುರಾಗುವಂತೆ, ಭಾರವಾದ ಮನಸ್ಸು ಕಣ್ಣೀರು ಹರಿಸಿ ಹಗುರಾಗುತ್ತದೆ” ಎಂದು ಎಲ್ಲೋ ಓದಿದ ನೆನಪು. ಗಂಡು-ಹೆಣ್ಣಿನ ಒಳಗಿರುವ ಮನಸಿಗೆ ಭೇದವಿಲ್ಲೆಂದರೂ ಅಳು ಎಂದಾಕ್ಷಣ ನೆನಪಾಗುವುದು ಹೆಣ್ಮಗಳು ಎಂದರೆ ಸುಳ್ಳಲ್ಲ! ಅಳುವ ಹುಡುಗರನ್ನು ಕಂಡರೆ ಆತನದ್ದು ಹೆಂಗರಳು ಎನ್ನುವುದಿಲ್ಲವೇ ನಾವು! ಹೀಗೆ ಕಣ್ಣೀರಿಗೂ ಹೆಣ್ಣಿಗೂ ಅವಿನಾಭಾವ ಸಂಬಂಧ, ಅವಳ ಬಾಳ ಹಂತ ಹಂತದಲ್ಲೂ ಜೊತೆಯಾಗಿರುವಂತೆ ಭಾಸವಾಗುತ್ತದೆ ಈ ಅಳು! ಹದಿಹರೆಯದ ಹೆಣ್ಮಗಳು ಹಳ್ಳಿಯಲ್ಲಿದ್ದರೆ ಬಣ್ಣದ ಕನಸುಗಳನ್ನು ಕಣ್ಣಲ್ಲಿ ತುಂಬಿಕೊಂಡು ಮನೆಯಿಂದ ಹೊರಬರಲಾಗದೆ, ಒಳಗುಳಿಯಲೂ ಮನಸೊಪ್ಪದೆ ಕಣ್ಣೀರು ಸುರಿಸಿದರೆ, ಪೇಟೆಯ ಬೆಡಗಿಯರು ಪ್ರೀತಿ-ಪ್ರೇಮದ ಸುಳಿಗೆ ಸಿಲುಕಿಯೋ, ಉದ್ಯೋಗಿ ತಂದೆ-ತಾಯಿಗೆ ತಮ್ಮ ಬಗ್ಗೆ ಕಾಳಜಿಯಿಲ್ಲವೆಂದು ಕೊರಗುತ್ತಾ ಅಳುತ್ತಾರೆ. ಎಮ್ಮ ಮನೆಯಂಗಳದಿ ಬೆಳೆದ ಹೂವನ್ನು ಧಾರೆಯೆರೆಯುವೆವು ಎನ್ನುವಾಗ ಮದುಮಗಳ ಜೊತೆ ಹೆತ್ತವ್ವನ ಕರುಳು, ಅಪ್ಪನ ಎದೆಯಲ್ಲಡಗಿರುವ ಪ್ರೀತಿಯೂ ಅಳುವುದಿಲ್ಲವೇ? ಎಷ್ಟಾದರೂ ಎಳೆಯ ಕಾಲಲ್ಲಿ ಗೆಜ್ಜೆ ಕಟ್ಟಿ ಕುಣಿಯುತಿದ್ದ ಮಗಳು ತವರ ತೊರೆವ ಹೊತ್ತಿಗೆ ಕಣ್ಣಂಚು ಒದ್ದೆಯಾಗದಿದ್ದೀತೇ?! ಅಳುವೆಂದರೆ ಬರೀ ನೋವಲ್ಲ; ಸಂತಸದ, ಭಾವೋದ್ವೇಗದ ಅಭಿವ್ಯಕ್ತಿಯೂ ಹೌದು, ಅತ್ತಿದ್ದ ಮದುಮಗಳ ಬದುಕಲ್ಲಿ ಮೂಡುವ ಹೊಸ ಬೆಳಗಿನ ಹಾಗೆ, ಸಾವಿನ ಮುಂದಿರುವ ಹೊಸ ಬದುಕಿನ ಹಾಗೆ, ಮುಳ್ಳಿನ ಗಿಡದಲರಳುವ ಗುಲಾಬಿಯ ಹಾಗೆ, ಕತ್ತಲೆಯು ಮರೆ...

ಶೀರ್ಷಿಕೆಯಿಲ್ಲದ ಕವನ

Image
  ಒಂದಾದ ಮೇಲಿನ್ನೊಂದರಂತೆ ಕವನ ಬರೆದೆ ಅದು ಬೇಡ -ಇದು ಬೇಡವೆಂದು ಕೊರೆದೆ ಎಲ್ಲವನು ಕೂಡಿ ಕಳೆದು ಇದ ಗೀಚಿದೆ   ಎಷ್ಟು ಬರೆದರೂ ಶೀರ್ಷಿಕೆ ಕೊಡಲಾರೆನದಕೆ ಜೀವ ತುಂಬ ಹೊರಟರೂ ತೃಪ್ತಿಯಾಗಲಿಲ್ಲೆನಗೆ ಅದರಿಂದಾಗಿ ಶೀರ್ಷಿಕೆಯೇ ಬೇಡವೆಂದುಕೊಂಡೆನಿದಕೆ   ಭಾವ-ಜೀವಗಳ ಸಮ್ಮಿಳಿಸಿ ಅದಕೆ ಶಬ್ದಗಳನ ರ ಸಿ  ಕುಳ್ಳಿರಿಸಿ, ಪುಸ್ತಕದಿ ರಂಗಿಸಿದೆ ಶಾಯಿ ಸುರಿಸಿ   ಪೆನ್ನನು ಮಸಿಗೆ ಅದ್ದಿ ಕವನವನು ತೀಡಿದೆ ತಿದ್ದಿ ಮತ್ತೆ ನೋಡಿದರೆ ಮನೆ ತುಂಬಾ ರದ್ದಿ!!   ಅಮ್ಮ ಬಂದಳು ಇದ ನೋಡಿ ಕೈಗೆ ಕೊಟ್ಟಳು ಹಿಡಿಸೂಡಿ; ಸಾಕಪ್ಪಾ ಸಾಕು ಈ ಕವನದ ಮೋಡಿ!   ಇಲ್ಲಿಗೆ ಮುಗಿಯಿತು ಆ ದಿನದ ಕಥೆ, ನನ್ನ ರಸಮಯ ವ್ಯಥೆ; ಕೇಳಿದಳಮ್ಮ ಕೊನೆಗೆ ' ಶೀರ್ಷಿಕೆಯಿಲ್ಲದ ಕವನ ರಚನೆ ' ಮುಗಿಯಿತೆ?   -ಪಲ್ಲವಿ ಕಬ್ಬಿನಹಿತ್ಲು (ಇದು ನಾನು ಬರವಣಿಗೆಯ ಪ್ರಯತ್ನಕ್ಕೆ ಕೈ ಹಾಕಿದ ಹೊಸದರಲ್ಲಿ ಬರೆದಿದ್ದ ಕವಿತೆ... ಇದೀಗ ಓದುವಾಗ ಉತ್ತಮ ಎಂದೆನಿಸಿದಿದ್ದರೂ ಮುಖದಲ್ಲಿ ನಗು ಮೂಡಿಸಿದ್ದು ಮಾತ್ರ ಸತ್ಯ... ಇದು ನಿಮಗೆ ಹೇಗನ್ನಿಸಿತು ಎಂದು ಮುಕ್ತವಾಗಿ ಕಾಮೆಂಟ್ ಮಾಡಿ ಅಥವಾ Reaction ಮೂಲಕ ತಿಳಿಸಿ)   WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM 👉 👉 👉 👉 SUPPORT US BY CLICKING THE FOLLO...

ನೀನೊಂದು ಮಾತು ಹೇಳಿದ್ದಿದ್ರೆ?!

Image
  ತಾಯಿಗೆ ಮಗುವಿನ ಮನಸ್ಸನ್ನು ಅರಿಯುವ ಶಕ್ತಿಯನ್ನು ಪ್ರಕೃತಿಯೇ ಕೊಡುತ್ತಂತೆ. ಆದರೆ ಮಗಳೇ, ನಿನ್ನ ತಂದೆಯಾಗಿಯೂ ತಾಯಿಯ ಪ್ರೀತಿ, ಅಕ್ಕರೆಯನ್ನು ಕೊಡುವ ಸಾಮರ್ಥ್ಯವನ್ನು ಕಲಿಸಿದ್ದು ನಿನ್ನ ಅಮ್ಮನಿಲ್ಲದ ‘ಜೀವನ’... ನಿನ್ನ ಅಮ್ಮ ಅಂದು ನಿನಗೆ ಜನ್ಮ ಕೊಟ್ಟು, ತನ್ನ ಕೊನೆಯುಸಿರನೆಳೆದಳು.  ಅಂದಿನಿಂದ ಕಣ್ಣರೆಪ್ಪೆ ಕಣ್ಣನ್ನು ಕಾದಂತೆ, ನಿನ್ನನ್ನು ಜೋಪಾನ ಮಾಡಿದೆ. ನನಗಿದ್ದ ಒಂದೇ ಒಂದು ಸಂಪತ್ತು  ನೀನು ಎಂದು, ನಿನಗೆ ಐಶ್ವರ್ಯಾ ಎಂದು ಹೆಸರಿಟ್ಟೆ. ನೀನು ಕೇಳಿದ್ದಕ್ಕೆಲ್ಲ ಒಲ್ಲೆ ಎನ್ನದೆ, ತಂದುಕೊಟ್ಟೆ. ಹಗಲು-ರಾತ್ರಿ ದುಡಿದು ನಿನಗೆ ಪ್ರೀತಿಯ ಧಾರೆ ಎರೆದೆ. ಅಂದು ಹೈಸ್ಕೂಲಿನಲ್ಲಿ ನೀನು ಗೆಳತಿಯರೊಡನೆ ಶಾಲೆ ತಪ್ಪಿಸಿ ಸಿನೆಮಾ ಹೋಗಿದ್ದು! ಅಂದು ಅಲ್ಲಿದ್ದ ಕೆಲವರು ನಿಮ್ಮನ್ನು ನೋಡಿ ನನ್ನಲ್ಲಿ, ಶಿಕ್ಷಕರಲ್ಲಿ ದೂರು ಕೊಟ್ಟಿದ್ದು, ನಿನಗೆ ನೆನಪಿರಬಹುದು. ಆಗ ಶಿಕ್ಷಕರು ನಿನ್ನನ್ನು ಗದರುತ್ತಿದ್ದಾಗ ಎಲ್ಲ ತಪ್ಪನ್ನು ನನ್ನ ಮೇಲೆ ಹೊತ್ತು ನಿನ್ನನ್ನು ಬಚಾವ್ ಮಾಡಿದ್ದೆ, ಅಲ್ವಾ?! ನಿನ್ನ ಮೇಲೆ ನೂರಾರು ಕನಸುಗಳನ್ನು ಇಟ್ಕೊಂಡಿದ್ದೆ. ಅದರಲ್ಲೂ ಎಸ್ಸೆಸೆಲ್ಸಿಲಿ, ಒಳ್ಳೆ ಮಾರ್ಕ್ಸ್  ತೆಗಿತಾಳೆ  ಅಂದ್ಕೊಂಡ  ಮಹದಾಶೆ ಪೂರೈಸ್ಲೇ ಇಲ್ಲ. ಒಂದು ವರ್ಷ ಮನೇಲೇ ಕೂತ್ಕೊಂಡು ಬಿಟ್ಯಲ್ಲೇ ನೀನು! ಆದ್ರೂ ಏನೂ ಹೇಳ್ಲಿಲ್ಲ ನಾನು, ಯಾಕಂದ್ರೆ, ಹೇಳಿದ್ನಲ್ಲ ಅಮ್ಮನ ಹೃದಯ ನನ್ನಲ್ಲಿತ್ತು ಅಂತ. ಮಗಳೇ, ಪುಟ್ಟ...

ದರ್ಪಣ

Image
  ಅರೆ! ಅವಳೇ ಇವಳಾ? ಎಂದು ನನ್ನ ಮನಸ್ಸು ಅಚ್ಚರಿಗೊಂಡಿತು, ಮತ್ತೊಮ್ಮೆ ತಿರುಗಿದೆ. ಗೊಂದಲ ನಿವಾರಣೆಗೆ. ಹೌದು, ಅವಳೇ... ಅವಳು ನನ್ನ ಬಾಲ್ಯದ ಗೆಳತಿ ದರ್ಪಣ. ಇಂದು ಕಂಕುಳಲ್ಲೊಂದು ಕೂಸು, ಕೈಯಲ್ಲಿ ತರಕಾರಿಯ ಕಟ್ಟನ್ನು ಹಿಡಿದು ವಿವಾಹಿತ ಮಹಿಳೆಯ ಗಾಂಭೀರ್ಯದೊಂದಿಗೆ ನನ್ನೆದುರಿನಿಂದಲೇ ಸುಳಿದು ಮರೆಯಾದಳು. ಅವಳ ಜೊತೆಗೆ ನನ್ನ ಮನಸ್ಸು ಕೂಡ ಮರೆಯಾಯಿತು. ಅವಳ ಗುರಿ ಯಾವುದೆಂದು ತಿಳಿಯದಿದ್ದರೂ ನನ್ನ ಮನಸ್ಸು ಹೆಜ್ಜೆಯಿಟ್ಟಿದ್ದು ಬಾಲ್ಯದ ಕಡೆಗೆ...                         *                              *                              *                              *                              * ದಪ್ಪು! ಅವಳೇ ದರ್ಪಣ, ಅದಾಗ ಎಳೇ ಹುಡುಗಿ, ಗುಂಡು-ಗುಂಡಾಗಿ ತನ್ನ ಕರ್ರಗಿನ...

ಹುಚ್ಚು ಮನಸಿನ ಸುತ್ತ...

Image
-೧-     ತಲುಪಬೇಕಾದ ಗುರಿಯನು ತಲುಪುವುದು ಕಠಿಣವೇನಲ್ಲ;  ಎಲ್ಲವನು ಬಿಟ್ಟು ಗುರಿಯೆಡೆಗೆ ದೃಷ್ಟಿಯ ನೆಟ್ಟು ಸಾಗಲು...  ಹೀಗಾದಾಗ ನಾನು ಗೆದ್ದೆನೆಂದರೆ ಸರಿಯೇ ನು ?! ತರವಲ್ಲ ಮನಸೇ,  ಗೆಲುವಡಗಿರುವುದು, ಸಾಗುವ ದಾರಿಯುದ್ದಕ್ಕೂ ಸಿಗುವ ಸಂಬಂಧಗಳ ದಾರಗಳನು ಕಡಿಯಗೊಡದೆ, ಬೆಸೆದ ಬಂಧಗಳ ಕೊಂಡಿಯನುಳಿಸಿಕೊಂಡಾಗ... ------------------------------------------------------------------------------------------------------------------------------- -೨-   ಮನ ಮಸಣವಾದರೆ ಸುತ್ತೆಲ್ಲ ಕಾಣುವುದು ಹೆಣಗಳೇ! ನಿನ್ನೊಳಗೆ ನಗೆ ಮಲ್ಲಿಗೆ ಅರಳಿಸುವುದನು ಕಲಿತಾಗ, ಕಲ್ಲಲ್ಲೂ ಕಲೆಯೇ ಕಾಣುವುದಲ್ಲವೇ?! ಕಣ್ಣು ನೋಡಿತಾದರೂ ಕಾಣಿಸುವುದು ನೀನೇ ತಾನೆ?! ಇದೆಲ್ಲವನೂ ಮರೆತು, ಸುತ್ತಲಿನವರೆಲ್ಲರೂ ಶತ್ರುಗಳೆಂದರೆ ಹೇಗೆ, ಮನವೇ?! ಸ್ನೇಹದ ಜೇನ ಸುರಿಸಿ ಮರೆಸಿಬಿಡು ನೋವನು.... -------------------------------------------------------------------------------------------------------------------------------   -೩- ಬೆಳಕಿನೆಡೆಗೆ ನಡೆವ ಹಾದಿಗೆ, ಬೇಲಿ ಹಾಕಿಕೊಂಡದ್ದೂ ನೀನೇ ತಾನೆ?! ನೀನು ಹೊಸತರೆಡೆಗೆ ನಡೆವೆನೆಂದರೆ, ತಡೆವರಾರು ಮನವೇ?! ---------------------------------------------------------...

ಅವಳೊಳಗಿನ ಕಥೆಗಳು

Image
ಅವಳ ಕಣ್ಣ ಸುತ್ತಲ ದಟ್ಟ ಕಪ್ಪು ವರ್ತುಲ ಹೇಳಲಾರವೆ ಅಡಗಿಸಿಟ್ಟ ಕಥೆಗಳ?!   ಇತ್ತಲ್ಲ ಜಿಂಕೆ ಕಂಗಳ ಹೊಳಪವುಗಳಲಿ, ಕತ್ತಲ್ಲಿ ಜೋತಿದ್ದ ಬಿಂಕ-ಬಿಗುಮಾನಗಳೆಡೆಯಲಿ... ಬೆನ್ನ ಮೇಲಿಳಿದ ನೀಳ ಜಡೆಯ ಬಳುಕಾಟದಲಿ, ನವಚೇತನ ಚಿಲುಮೆಯಾಗಿ ಚಿಮ್ಮುತಿತ್ತಲ್ಲ!!   ಅವಳಂದು ಇನಿಯನ ನೋಟಕೆ ನಾಚಿ ಕೆಂಪಾಗುತ್ತಿರಲಿಲ್ಲವೇ?! ನಿದ್ದೆಗೆ ಜಾರುವಷ್ಟರಲಿ ಹೊಂಗನಸುಗಳ ಕಂಡು ನಗೆ ಚೆಲ್ಲುತ್ತಿರಲಿಲ್ಲವೇ?! ಹುಬ್ಬು ಕೊಂಕಿಸಿ ರೇಗಿಸುವಾಗಲೂ ಮಗು ಮನಸ ಬಿಚ್ಚಿಡುತಿರಲಿಲ್ಲವೇ?! ಇಂದು ಕಪ್ಪು ಛಾಯೆಗಳ ನಡುವಲವಳು ಮರೆಯಾಗಿಲ್ಲವೇ?!   ಹನಿ ಸೂಸುವ ಕಣ್ಣುಗಳನಾವರಿಸಿರುವ ಕಡುಗಪ್ಪಿನ ಗಾಢ ವರ್ತುಲ; ಹೇಳುತಿಲ್ಲವೇ ಅಡಗಿಸಿಟ್ಟ ಕಥೆಗಳ?!!                                                             -ಪಲ್ಲವಿ ಕಬ್ಬಿನಹಿತ್ಲು 👇👇👇👇👇👇👇👇👇👇👇👇 ಆತ್ಮೀಯರಾದ ಉದಯಣ್ಣ (ಉದಯಭಾಸ್ಕರ್ ಸುಳ್ಯ) " ಅವಳೊಳಗಿನ ಕಥೆಗಳನ್ನು ವಾಚಿಸಿದ ಬಗೆ ಹೀಗೆ.... https://www.youtube.com/watch?v=oOnw6qvv1j0 👉 👉 👉 👉 SUPPORT US BY CLICKING THE FOLLOW BY E-...

ಅಳಿವ ಮೊದಲು ಇಳಿ ವಯಸ್ಕನ ಅಳಲು...

Image
  ಇಲ್ಲವೆಂಬ ಸೊಲ್ಲನೆತ್ತಿ ಕಾಡುವುದೇಕೆ ಮನಸೆ?!  ಇಲ್ಲಗಳನು ಉಂಟಾಗಿಸುವ ಛಲದ ಬಲ ಮರೆಯಾಗುತ್ತಿರಲು, ನಿನ್ನಿರುವಿಕೆಯೇ ಮೇಲೆಂದರೆ ಹೇಗೆ?! ನಾನಿಲ್ಲವಾದರೂ ನೀನು ' ಇಲ್ಲ ' ಗಳನು ಬಿಡುವುದೇ ಇಲ್ಲವೇನೋ! ಒಟ್ಟಿನಲ್ಲಿ ಇಲ್ಲಗಳಿಗೆ ಕಲ್ಲಾಗಿ ಅಳಿಯುವುದು, ಇಲ್ಲ ಎನ್ನುತ್ತ ಅಳುವಷ್ಟು ಸುಲಭವಲ್ಲ..‌.   -ಪಲ್ಲವಿ ಕಬ್ಬಿನಹಿತ್ಲು 👉 👉 👉 👉 SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE... WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM -KADUGUSUMA  

ಕೊನೆಯ ಅನುಮತಿ...

Image
  ಅ ವನು ಇಷ್ಟವಾಗಿಯೇ ಆಕೆ ಆತನಿಗೆ ತನ್ನ ತನು-ಮನವನ್ನು ಆವರಿಸಿಕೊಳ್ಳಲು ಅನುಮತಿಸಿದ್ದಳು. ಹಿಂದೆ-ಮುಂದೆ ಯೋಚಿಸದೆ ತೆಗೆದುಕೊಂಡ ತೀರ್ಮಾನವಂತು ಅಲ್ಲ, ಹೀಗಿರುವಾಗ ತನ್ನಿಷ್ಟದಿಂದಾದ ಕಷ್ಟ-ನಷ್ಟದ ಲೆಕ್ಕಾಚಾರ ಹಾಕುವಾಗ ಸಂಕಟವಾಗದಿರುತ್ತದೆಯೇ?! ಇದೀಗ ಎಂಟು ವರ್ಷಗಳ ಸಂಸಾರದ ಅನಂತರ ನನ್ನ ಬಾಳಿಗೆ ದಳ್ಳುರಿಯಾದವಳು ನೀನು ಎಂದ ತನ್ನ ಹೃದಯದೊಡೆಯನ ಮಾತಿಗೆ ಏನೆಂದಾಳು?! ಅವನ ಮಾತಿಗೆ ಕಟ್ಟುಬಿದ್ದು ಎಂಟು ವರ್ಷಗಳ ಹಿಂದೆ, ತನ್ನ ತಂದೆ-ತಾಯಿ, ಬಂಧು-ಬಳಗ ಎಲ್ಲವನ್ನೂ, ಎಲ್ಲರನ್ನೂ ತೊರೆದು ಬಂದ ತಾನು, ತನ್ನುಸಿರಲ್ಲಿ ಉಸಿರಾಗಿ ಒಳಗಿಳಿವವನ ಬದುಕನ್ನು ಬರಡಾಗಿಸಿದ್ದು ತಾನೆಂಬ ಒಂದು ಮಾತು ಅವಳ ಅಸ್ತಿತ್ವದ ಇರುವನ್ನೇ ಗೆದ್ದಲಿನಂತೆ ಇಂಚಿಂಚಾಗಿ ಕೊರೆದು ಟೊಳ್ಳಾಗಿಸಿತು, ಅದೂ ಸೆಕೆಂಡುಗಳಲ್ಲಿ! ಖಾಲಿ ಕೈಯ ಯೋಚನೆಯಿಲ್ಲದ ಹಾಗೆ ಗಾಣದೆತ್ತಿನ ಹಾಗೆ ಮನೆಯಲ್ಲಿ, ಮನೆಗಾಗಿ ದುಡಿದವಳನ್ನು ಒಂದು ದಿನ  ಬಡತನದ ಭಾರ ಕುಗ್ಗಿಸಿರಲಿಲ್ಲ; ಆದರೆ ನಾಲಗೆಯ ಅಲಗಿನ ಹರಿತ ಆತ್ಮಸ್ಥೈರ್ಯವನ್ನೇ ಹೋಳಾಗಿಸಿತು... ಜೋಡಿಸಲಾದೀತೆ ಅವುಗಳನ್ನು?!  ತನ್ನ ಮನದಾಲಯದ ದೇವತೆಯಾಗಿದ್ದ ಜೀವ ಗರ್ಭಗುಡಿಯ ಹೊಸ್ತಿಲನ್ನು ಅಸಹ್ಯವೆಂಬಂತೆ ತಿರಸ್ಕರಿಸಿ ಇನ್ನೊಂದು ಬಾಳ ಬೆಳಕಾಗುವ ಆಸೆ ಹೊತ್ತು ನಿಂತಿರುವನು... ಆಕೆಯ ಬದುಕಿಗೆ ಹೆಜ್ಜೆಯಿಡುವಾಗ ಅನುಮತಿ ಕೇಳಿದ್ದಾತನಿಗೆ, ಇಂದು ಹೇಳಿ ಹೋಗುವ ಸೌಜನ್ಯತೆಯೂ ಇಲ್ಲವಾದಾಗ ಹೇಗೆ ನರಳಿರಬಹುದು ಆಕೆ?! ...