Posts

Let It Be...

Image
 Don't let it go; The dark crumpled memories, That you hid in the deepest burrow of your mind. Don't let it fade; The scar of deep stabs that never healed. Don't let it stop; The deafening echoes that never left the chambers of your soul. Don't let it sink; The deadweight sack of thoughts into the sea of debris.     Let the mind remind...     Let the wound bleed...     Let the pain be felt...     Let the soul fight... So that, One day, when everything is over, Your victory doesn't become a trivia But a real triumph. So that, You have the reason to celebrate...                     - Panchami Kabbinahitlu

Trapped

Image
They are all trapped inside themselves,  where  there are no doors to escape, there are no windows for light there are no paths that are straight! They wander around the wall of their insides; feeling like a Pandora Box Full of sadness, badluck!! All are hurt and are in pain And all of them have their own reasoons; Getting what they don't want  or not getting what they want... WANTS?! Are insides made of these 'wants'? Desires of happiness, success, fame, money? No space for life?? They are trapped inside themselves and thrive to survive each day... Surviving through each day is becoming life, Finally, some of them realised this, Soon the found this light of life in the heart; Walls collapsed, They are not trapped anymore, They are outside now Growing and glowing every second! Still, other souls are yet to find the hope that can light the path to life outside... No one can help, but themselves for those who are still trapped!! - Pallavi Kabbinahithlu

Homeless

Image
He waits for her all day, Just like every day... Sitting on the seashore, Letting the breeze kiss him, Counting every second that passes, Looking at the sun, crawling down to the west, He wishes if time could pass a little faster, So that he can see her! Waiting quietly is one hell of a thing! Hours pass; Stars shine above the sky, The crescent moon moves faster than usual, She never appears! She is the only comfort left in his life; She is the HOME he always wanted, The home that he never had before! She is the flower in his deserted heart, The warmth that melts his frozen tears, She is his reason to LIVE ON... But this evening she doesn't come?! He keeps on waiting, With love, care, and secrets in his heart, Which he wants to share with ONLY her, She simply doesn't show up! He keeps waiting, Alone at the seashore, Feeling cold, Wandering through darkness, Feeling lonely! The sun rises, light spreads all around, Except for him! Tears roll down his cheeks, He stands up and walk...

Routine!

Image
She smiled while peeking outside the closed window Of her closed room… Then she sighed; Thought to herself, this should be enough To show the world That she is fine by herself. She took a deep breath And opened the window, AND THEN SHE SMILED Only LAUGHED rolling over! Everyone saw her HAPPY; Show was over As usual,  she closed the window; NOW, She looks lifeless Crying her eyes out, she lay on the bed and went to sleep. Next day morning, She smiled again!! When she opened the window that day, She danced-hoped-sung with everyone; EVERYONE saw her HAPPY Then she closed her window, And turned off the lights, Laying down on the bed, Resting her head on the wet pillow Neither crying nor sleeping… Her eyes wandered through the darkness, Where no one can see her, And she can’t find anyone!! -Pallavi Kabbinahithlu    

ಬೆಳೆಯುತಿದ್ದೇವೆ ಎಂದರೆ ಅಳಿಯುತ್ತಿರುವುದಲ್ಲವೇ?!

Image
ಮಾನವನಿಗೆ ಬದುಕಿನ ಪಾಠ ಹೇಳಿಕೊಡುವುದರಲ್ಲಿ ಪ್ರಕೃತಿಯ ಸರಿಸಮಾನರು ಯಾರೂ ಇಲ್ಲ. ಚಳಿಗಾಲದಲ್ಲಿ ಹೊಸ ಚಿಗುರಿನ ಹುಟ್ಟಿಗೆ ಅವಕಾಶ ನೀಡಬೇಕೆಂದು ಹಳೆ ಎಲೆಗಳಲ್ಲಾ ಉದುರುತ್ತವೆ. ಮರ ಬದಲಾಗಲಿಲ್ಲ ಎಂದುಕೊಂಡರೂ ಎಲೆಗಳೆಲ್ಲಾ ಬದಲಾಗುತ್ತವೆ; ಎಲೆಗಳು ಹೀರುವ ಬಿಸಿಲು, ಗಾಳಿಯೂ ಬದಲಾಗುತ್ತದೆ. ಆಗ ನೆರಳೂ ಹೊಸತು, ಅದರ ತಂಪೂ ಹೊಸತು. ಒಂದಿಷ್ಟನ್ನು ಕಳೆದುಕೊಂಡು, ಮತ್ತೊಂದಿಷ್ಟನ್ನು ಪಡೆದುಕೊಂಡು ಬದಲಾಗುವುದೇ ಬದುಕಲ್ಲವೇನು? ಬದಲಾವಣೆ ಬಾಳುತಿದ್ದೇವೆ ಎನ್ನುವುದರ ಸಂಕೇತ. ಉಸಿರೆಳೆದಷ್ಟು ಬಾರಿ ಮನುಜ ಬದಲಾಗಿದ್ದಾನೆ ಎನ್ನುವ ವಿಷಯ ಅದೆಷ್ಟು ಸಹಜ ಸತ್ಯವೇ ಆದರೂ ಅಚ್ಚರಿಯುಂಟು ಮಾಡದಿರದು. ಒಂದೊಂದು ಕ್ಷಣ ಕೈ ಜಾರಿದಂತೆ 'ನಾನಿರುವುದೇ ಹೀಗೆ' ಎನ್ನುವುದರಲ್ಲಿನ  'ಹೀಗೆ'ಯ ವ್ಯಾಖ್ಯಾನ ಬದಲಾಗುತ್ತದೆ. ಇದೇ ಬೆಳವಣಿಗೆ ಅಲ್ವೇ?! 'ಕಲಿಯುವ ಮನಸಿದ್ದರೆ ನಿಮಗೆ ಕಲಿಸುವುದು ಕಲ್ಲಿನ ಗೊಂಬೆ '. ಇದು ಒಂದೆರಡು ವರ್ಷಗಳ ಹಿಂದೆ ಹಿರಿಯರೊಬ್ಬರು ಹೇಳಿದ ಮಾತು. ಇದು ನನ್ನ ಮೇಲೆ ಬೀರಿದ ಪ್ರಭಾವ ಅಗಾಧ. ಇದು ನನ್ನಿಂದ ಅಸಾಧ್ಯ ಎಂಬ ಭಾವ ಕಾಡಿದಾಗಲೆಲ್ಲಾ ಈ ಕಿವಿಮಾತು ಕೈ ಹಿಡಿದು ನಡೆಸಿದ್ದದ್ದುಂಟು. ಹೀಗೆ ಮುಂದೆ ನಡೆದದ್ದರಿಂದ ನಾನೇ ಅಚ್ಚರಿಪಡುವಂತೆ ಬೆಳೆದದ್ದುಂಟು! ಇಂತಹ ಬೆಳೆವು ಅದೆಷ್ಟು ಸಂತಸಕ್ಕೆ ಕಾರಣವಾದರೂ ಅದರಲ್ಲಿ ನಾನಂದುಕೊಂಡ 'ನನ್ನತನ' ಚೂರು ಚೂರೇ ಅಳಿಯುವ ನೋವು ಕೆಣಕದೆ ಉಳಿಯುವುದಿಲ್ಲ. ಈ ಅಸ್ತಿ...

ಭಾಷೆಗೂ ಬಣ್ಣ ಉಂಟಂತೆ!!

Image
  ಭಾರತೀಯರು ವರ್ಣಪ್ರಿಯರು. ಭಾವನೆಗಳು, ಸಂಸ್ಕೃತಿಗಳು, ಹಬ್ಬಗಳು ಎಲ್ಲದಕ್ಕೂ ಬಣ್ಣಗಳು ರಾಯಭಾರಿ! ಭಾಷೆಯ ಸೊಗಡನ್ನು ಬಿಂಬಿಸುವ ಬಣ್ಣವೂ ಇರಬಹುದೇನೋ ಎಂಬ ಕುತೂಹಲ ನನಗೆ. ಭಾಷೆಯ ಬಣ್ಣ ಎಂದಾಕ್ಷಣ ಥಟ್ಟನೆ ಹೊಳೆದದ್ದು ಕನ್ನಡ ಭುವನೇಶ್ವರಿಯ ಅರಶಿಣ-ಕುಂಕುಮದ ಪವಿತ್ರ ವರ್ಣ. ಆದರೆ  ಸಂಸ್ಕೃತಿ ಮತ್ತು ಭಾಷೆ ಮರಕ್ಕೆ ಹಬ್ಬಿದ ಬಳ್ಳಿಯ ಹಾಗೆಯೇ ಅಲ್ಲವೇನು? ವೃಕ್ಷದ ಬೇರು ಆಳಕ್ಕಿಳಿದಷ್ಟು ಬಳ್ಳಿಯ ಬದುಕು ಅಷ್ಟರ ಮಟ್ಟಿಗೆ  ಹೆಚ್ಚು ಸುರಕ್ಷಿತ. ಸಂಸ್ಕೃತಿಯ ತರುವಿಗೆ ಸುತ್ತಿಕೊಂಡ ನಮ್ಮ ಮಾತೃಭಾಷೆಯೆಂಬ ಲತೆಯು ಎಲ್ಲ ರಂಗಿನ ಹೂಗಳನ್ನು ಅರಳಿಸುತ್ತದೆಯಾದರೂ ಲತೆಯ ಇರುವನ್ನು ಬೇರೆ ಬಣ್ಣಗಳೂ ಎತ್ತಿ ಹಿಡಿಯಬಹುದಲ್ಲಾ, ಅವು ಯಾವುದಿರಬಹುದೆಂಬ ಹುಚ್ಚು ಯೋಚನೆಯೊಂದು ನನ್ನಲ್ಲಿ ಹುಟ್ಟಿಕೊಂಡಿತು. ಆ ಹೊತ್ತಿಗೆ ಕಾಡಿದ ಕನ್ನಡದ ಬಣ್ಣವು ‘ಕ್ಲಾಸಿಕ್’ ಕಪ್ಪು-ಬಿಳುಪು! ಎಲ್ಲಾ ರಂಗುಗಳು ಹದವಾಗಿ ಬೆರೆತ ಬಿಳುಪು, ಬಣ್ಣಗಳ ಅಸ್ತಿತ್ವಕ್ಕೆ ಸಡ್ಡು ಹೊಡೆಯುವ ಕಪ್ಪು(Black is the absence of colour).  ಅರೇ ಇದೇನಿದು? ಕನ್ನಡದ ಬಣ್ಣ ಎನ್ನುತ್ತಾ ಬಿಳುಪನ್ನು ಒಪ್ಪಿಕೊಳ್ಳಬಹುದೇನೋ, ಆದರೆ ಕಪ್ಪುಎನ್ನುತ್ತಾಳಲ್ಲಾ ಎಂದು ಮೂಗು ಮುರಿಯಬೇಡಿಪ್ಪಾ... ಎಷ್ಟೆಷ್ಟೋ ಹೊತ್ತು ಕುಳಿತು ತಲೆ ಕೆರೆದ ಮೇಲಷ್ಟೆ ನಾನು ಹೀಗಂದದ್ದು! ಕನ್ನಡದ ಬಣ್ಣವು ಅಸ್ತಿತ್ವದ  "ಇರುವಿಕೆ ಹಾಗೂ ಇಲ್ಲದಿರುವಿಕೆ"ಯ ನಡುವಿನ ವಿರೋಧಾಭಾಸವನ್ನು ಪ್ರತಿ...

ಬಿಳಿ ಬದುಕು...

Image
   https://youtu.be/_K0NqvceTKk "EN LEFKO" (=In White)  Artist: Natassa Bofiliou (Νατάσσα Μποφίλιου)  ಈ ಹಾಡು ಅದೇಕೋ ಮನ ಮುಟ್ಟಿತು ... ಕನ್ನಡಕ್ಕೆ ಸಾಧ್ಯವಾದರೆ ಭಾವಾನುವಾದ ಮಾಡಬೇಕೆಂದುಕೊಂಡೆ... ಅದರ ಫಲಶ್ರುತಿ ಈ ಕೆಳಗಿನ ಪ್ರಯತ್ನ... (ಇಲ್ಲಿ "ಬಿಳಿ" ಯನ್ನು ಶೂನ್ಯ, ಬಣ್ಣ ರಹಿತ, ವ್ಯರ್ಥ ಎಂಬರ್ಥದಲ್ಲಿ ಉಪಯೋಗಿಸಿಕೊಳ್ಳಲಾಗಿದೆ) *ಬಿಳಿ  ಬದುಕು...* ಓ, ನನ್ನ ಬಿಳಿ ಬದುಕಿನ ಬಿಳಿಯ ಹಣೆಯ ಬರಹವೇ, ಕತ್ತಲ ನೆರಳಿನ ಮರೆಯಲ್ಲಿ ಅಡಗುವುದೇಕೆ ನೀನು? ನಿನ್ನ ಕಂಡ ಕ್ಷಣ ಬದುಕು ಪರದೆಯಂತೆ ಕಣ್ಮುಂದೆ ಸುಳಿದು ನನ್ನ ಬಿಂಬವೇ ನಿನ್ನ ಬಿಳಿಯ ರಂಗೆಂದುಕೊಳ್ಳುತ್ತೇನೆ! ಅವಿತುಕೊಳ್ಳದಿರು ಎನ್ನುವ ಧೈರ್ಯವಿದ್ದರೆ,  ಬೇಯಿಸುತ್ತಿರಲಿಲ್ಲ ಅಂತರಂಗವನ್ನು ಅಸಹಾಯಕತೆಯ ತಾಪ... ಈ ಮರುಳಿನ ನೆರಳು ಬಿಳಿ; 'ಸುಳ್ಳು' ಅದರ ಅಸ್ತಿತ್ವ! ಗಡಿಯಾರದ ಮುಳ್ಳು ಸಹ ಕುಣಿಯುತ್ತಿರುವುದು, ನನ್ನ ಬದುಕಿನ ಮೂಕ ಹಾಡಿಗೇ!! ಸ್ತಬ್ಧ ಬದುಕಿನ ಮೌನದ ಸಾಲುಗಳನ್ನು ಇರುವಷ್ಟು ಹೊತ್ತು ಅರಸುತ್ತೇನೆ, ಮೌನವನ್ನೆಲ್ಲಾ ಶಬ್ದಗಳನ್ನಾಗಿಸುತ್ತೇನೆ, ಆ ಶಬ್ದಗಳೊಳಗಡಗಿದ ಅರ್ಥವನ್ನು ವಿವರಿಸುವ ಜೀವವೊಂದಕ್ಕೆ ಹಾತೊರೆಯುತ್ತೇನೆ... ಆ ವ್ಯಕ್ತಿ ಬಂದು ಶಬ್ದಗಳಿಗೆ ವಿವರಣೆಯಾದಾಗ ಅವರೇ ನನ್ನ ಭವಿಷ್ಯದ ನಾವಿಕರಾಗಲೆಂದು ಹಂಬಲಿಸುತ್ತೇನೆ, ನೆನಪುಗಳಿಗೆ ಬೇಡಿ ಹಾಕಲೆಂದು ಬಯಸುತ್ತೇನೆ... ಆದರೇನಾಯಿತು, ಬಿಳಿ ಬದುಕು ನೂ...

ಒಂದು ನೆನಪು

Image
ಮಂಜು ಬೀಳುವ ಈ ಮುಂಜಾವಿನಲಿ, ನೀ ಯಾಕೆ ನೆನಪಾದೆಯೋ ಮನದಲಿ. ನಿನ್ನೊಂದಿಗೆ ಕಳೆದಂತಹ ಆ ಕ್ಷಣಗಳು, ಮತ್ತೆ-ಮತ್ತೆ ನೆನಪಾಗಿದೆ ಆ ದಿನಗಳು. ನಿನ್ನ ಬಗ್ಗೆ ಎಷ್ಟೇ ಗೀಚಿದರೂ ಕವನ, ನೀನೊಂದು ಮುಗಿಯದ ಕಥನ. ನಿನ್ನ ನಗುವೇ ನನಗೆ ರಸದೌತಣ, ನೀ ನಗುತ್ತಲೇ ಇರು ಪ್ರತಿದಿನ.       - ಹರ್ಷಿತ್ ಎಂ,          ಚೆಂಬು

ಸಾಗರದಂತವಳು

Image
ಸಮುದ್ರ ತೀರದ ಉಸುಕಿನ ಮೇಲೆ ಶೂನ್ಯಕ್ಕೆ ದೃಷ್ಟಿ ನೆಟ್ಟು ಸೋತವರಂತೆ ಮೈಚಾಚಿ ಮಲಗಿರುವ ಅವಳೊಳಗೂ ಉಪ್ಪು ನೀರಿನ ಕಡಲೊಂದಿದೆ... ಅಲ್ಲಿ, ಎಡೆಬಿಡದೆ ಎದೆ ಚುಚ್ಚುವ ನೋವಿಗೆ ಕರಗಿದ ಕಂಬನಿಯ ಬಿಂದುಗಳಿವೆ, ಕಟ್ಟೆಯಿಲ್ಲದೆ ಹರಿದ ಸಂತಸದ ಹೊಳೆಯ ಸಿಹಿ ನೀರೂ ಸೇರುವುದು ಅದೇ ಕಡಲಿಗೆ! ಬಿಸಿಲು-ಮಳೆ ಎನ್ನದೆ ದುಡಿದಾಗ ಸುರಿದ ಬೆವರೂ ಬೆರೆತದ್ದೂ ಅದೇ ಕಡಲ ನೀರಿಗೆ ! ಅವಳ ಬದುಕಿನ ಕ್ಷಣ - ಕ್ಷಣವೂ ಹನಿ - ಹನಿಯಾಗಿ ಸೇರಿಕೊಂಡದ್ದೂ ಅದೇ ಕಡಲಿಗೆ; ಅಲ್ಲಿರುವುದು ಅವಳ ಸರ್ವಸ್ವ. ಅಲ್ಲಿರುವುದು ಅವಳ ಸರ್ವಸ್ವವೆಂಬುದು ದಿಟವಾದರೂ ಆಗಾಗ ಆ ಉಪ್ಪು ನೀರಿನ ಕಡಲು ಅವಳಿಗೆ ಭಾರವೆನಿಸುತ್ತದೆ!! ಆಗ ಎಲ್ಲಾ ಒಳಗಿಳಿಯದೆ ಚೂರು - ಚೂರು ಸೋರಿ ಕಳೆದುಹೋಗುತ್ತಿದ್ದರೆ ಚೆನ್ನಿತ್ತು ಎಂದುಕೊಳ್ಳುತ್ತಾಳೆ... ಕೂಡಲೇ ತಲೆ ಕೊಡವಿ, ಹಾಗಿರದಿದ್ದರೇನಾಯಿತು? ಕಡಲೆಂದರೆ ಬಲು ಪ್ರೀತಿ ನನಗೆ ಎನ್ನುತ್ತಾ ಕಡಲ ದಡದ ಮರಳಲ್ಲಿ ಮೈ ಚೆಲ್ಲುತ್ತಾಳೆ, ತನ್ನೊಳಗಿನ ಕಡಲಿ ಭೋರ್ಗರೆತದ ಸದ್ದು ಹೊರಗಿರುವ ಸಮದ್ರದ ಅಲೆಗಳ ಗರ್ಜನೆಗೆ ಹೆದರಿ ಸುಮ್ಮನಾಗುವವರೆಗೂ ಅಲ್ಲೇ ಬಿದ್ದುಕೊಳ್ಳುತ್ತಾಳೆ... ಏಳುವಾಗ ಮೊಗದ ಮೇಲೊಂದು ನಗು,  ಒಡಲೊಳಗೆ ಶಾಂತ ಸಾಗರದ ಛಾಯೆಯನ್ನು ಚಿಮ್ಮುತ್ತಾಳೆ; ಅವಳು ಮತ್ತೆ ಬದುಕುತ್ತಾಳೆ... - ಪಲ್ಲವಿ ಕಬ್ಬಿನಹಿತ್ಲು

ಮಿನುಗು ತಾರೆ

Image
 ಬಯಕೆಗಳನ್ನೆಲ್ಲಾ ಮುರಿದು ಬೀಳುವ  ತಾರೆಗಳ ಬೆನ್ನಿಗೆ ನೇತು ಹಾಕಿದ್ದೇನೆ... ಹೊಳೆವ ತಾರೆಗಳಷ್ಟು ಆಸೆಗಳು  ಇನ್ನೂ ಒಳಗೊಳಗೇ ಮಿನುಗುತ್ತವೆ, ತಾರೆಗಳು ಉದುರಿದ ಹಾಗೆಯೇ  ಆಸೆಗಳು ಪೂರೈಸುತ್ತವೆ ಎಂಬ ಆಸೆ ನನಗೆ! ಆಗಸದಲ್ಲಿ ಹೊಳೆಯುವ ನಕ್ಷತ್ರಗಳ ನೋಡಲು ಕತ್ತಲಾಗುವುದಕ್ಕೆ ಕಾದು ಕುಳಿತುಕೊಳ್ಳುತ್ತೇನೆ... ಅವು ಒಂದೊಂದಾಗಿ ಮಿನುಗಲು ಶುರು ಹಚ್ಚಿಕೊಂಡಾಗ ಅಡ್ಡಲಾಗಿ ಮಲಗಿ ಕಣ್ಣು ತಲುಪಿದಷ್ಟೂ ದೂರ ದೃಷ್ಟಿ ಹಾಯಿಸಿ ನಕ್ಷತ್ರಗಳನ್ನು ಎಣಿಸುತ್ತೇನೆ, ಒಂದೊಂದಾಗಿ ಬಯಕೆಗಳನ್ನು ಹೆಣೆದು ಎಣಿಸಿದ ಪ್ರತೀ ನಕ್ಷತ್ರಕ್ಕೂ ತೊಡಿಸುತ್ತೇನೆ... ಆಗಾಗ ಕಣ್ಣುಗಳು ಕೈ ಕೊಡುತ್ತವೆ, ಆಗ ಎಣಿಸಿದ ತಾರೆ-ಎಣಿಸದ ತಾರೆಗಳಿಗೆ  ವ್ಯತ್ಯಾಸವೇ ಇಲ್ಲದಂತಾಗುತ್ತದೆ; ಆದರೂ ಎಣಿಕೆ ‌ಸಾಗುತ್ತಲೇ ಇರುತ್ತದೆ! ನನಗೂ ಎಲ್ಲೋ ಒಂದು ಕಡೆ ಅರಿವಿದೆ,  ಮುರಿದು ಬೀಳುವುದು ತಾರೆಗಳಲ್ಲವೆಂದು ಆದರೂ ಒಪ್ಪಿಕೊಳ್ಳುವ ಮನ‌ಸಿಲ್ಲ ನನಗೆ,  ಮುಗಿಲೆತ್ತರಕ್ಕೆ ಹಬ್ಬಿರುವ ಆಸೆಗಳು  ಪೂರೈಸುತ್ತವೆ ಎಂಬ ನಂಬಿಕೆ ಉಳಿಸಿಕೊಳ್ಳಬೇಕೆಂಬ ಹುಚ್ಚು ಹಂಬಲ ಎದೆಯೊಳಗೆ! ಬೆಳಕು ಹರಿದಾಗಲೂ  ಅಲ್ಲಲ್ಲಿ, ಸಂದು-ಗೊಂದುಗಳಲ್ಲಿ ಕತ್ತಲು ಅಡಗಿ ಕುಳಿತುಕೊಳ್ಳುತ್ತದೆ, ಆ ನಿಶೆಯಲ್ಲಿ ಮನಸು ಕನಸುಗಳ ಹೊಲಿಯುತ್ತಲಿರುತ್ತದೆ, ಹೊತ್ತೇರಿದ ಹಾಗೆ ಬಿಸಿಲಿನ ಝಳ ಬಯಕೆಗಳ ಸುಡದಿರಲೆಂದು ಮತ್ತಷ್ಟು ಮೂಲೆಯಲ್ಲಿ ಅಡಗಿಕೊಳ್ಳುತ್ತದೆ... ರಾತ್ರಿಯಾದಾಗ ಕ...

ಕಾಫಿಯ ಕಪ್ಪು

Image
ಕಾಫಿಯ ಕಪ್ಪು ಖಾಲಿಯಾಗಿದೆ, ಆದರೆ ಮಾತು ಶುರುವಾಗಲೇ ಇಲ್ಲ! ಅವಳು ಅವನೆದುರು ತಂದಿಟ್ಟದ್ದು  ಹಬೆಯಾಡುವ ಬಿಸಿ ಕಾಫಿಯ ಕಪ್ಪು ಅದು ಅವನಿಗಿಷ್ಟವಾದದ್ದು... ಬಂಧ ಬಂಧನವಾಗಿ ಕೊಂಡಿ ಕಳಚಿದ ಮೇಲೆ ಮಾತು ಕಿರಿಕಿರಿಯೆನಿಸಿದರೆ ಮೌನ ಅಸಹನೀಯ! ತಿಂಗಳುಗಳು ಕಳೆದರೂ ಅವನ ಕಂಡಾಗ ಅವಳ ನಿಟ್ಟುಸಿರ ದಟ್ಟತೆ ಕದಡಿ ಹೋದಂತಿಲ್ಲ: ಅವಳೆದುರು ಬಂದಾಗ ಅವನ ಹುಬ್ಬುಗಳು ಗಂಟಾಗದೆ ಉಳಿಯುವುದೇ ಇಲ್ಲ! ಸಪ್ತಪದಿ ತುಳಿದವರ ಹಾದಿ ಬೇರೆಯಾದಾಗ  ನಡುವೆ ಉಳಿದುಕೊಳ್ಳುವುದು ಕಂದಕ ಮಾತ್ರ!! ಮೌನದೊಳಗೆ ಹೂತು ಹಾಕಿದ್ದ ಮಾತುಗಳು ಮಾತಾಗದೆ ವ್ಯಾಜ್ಯಗಳಾಗಿದ್ದವು  ಕಗ್ಗಂಟಿನ ಗಂಟುಗಳ ಸಡಿಲಿಸಲು ಕ್ಷಮೆಗಾಗಿ ಇಂದಿನ ಭೇಟಿ! ಆ ಹೊತ್ತಿಗೆ ಜೊತೆಯಾಗಿ ನಕ್ಕ ಕ್ಷಣಗಳೆಲ್ಲಾ ಹೃದಯದ ಮೆದು ಪದರವನ್ನು ಚುಚ್ಚಿಕೊಂಡವು... ಕಣ್ಣಲ್ಲಿ ನೀರಾಡಿತು, ಆದರೆ ಮಾತು ಶುರುವಾಗಲೇ ಇಲ್ಲ; ಖಾಲಿ ಕಪ್ಪಿನ ತಳದಲ್ಲಿ ಒಂದಷ್ಟು ಕಪ್ಪು ಕರಿ ಉಳಿದುಕೊಂಡಿತ್ತು!! -ಪಲ್ಲವಿ ಕಬ್ಬಿನಹಿತ್ಲು